/newsfirstlive-kannada/media/post_attachments/wp-content/uploads/2025/06/RCB-stampede-divyamshu.jpg)
ಬೆಂಗಳೂರು: RCB ವಿಜಯೋತ್ಸವದಲ್ಲಿ ಭಾಗಿಯಾಗಲು ತೆರಳಿದ್ದ 14 ವರ್ಷದ ದಿವ್ಯಾಂಶಿ ಪ್ರಾಣ ಕಳೆದುಕೊಂಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ದುರಂತವಾಗಿ 48 ಗಂಟೆಗಳೇ ಕಳೆದಿದೆ. ಜೀವ ಬಿಟ್ಟ 11 ಅಮಾಯಕ RCB ಅಭಿಮಾನಿಗಳ ಮನೆಯಲ್ಲಿ ನೀರವ ಮೌನ ಆವರಿಸಿದೆ.
ವಿರಾಟ್ ಕೊಹ್ಲಿ, ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದ ದಿವ್ಯಾಂಶಿ ಕೂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಕೊನೆಯುಸಿರೆಳೆದಿದ್ದಾರೆ. ದುರಂತವಾಗಿ 2 ದಿನ ಕಳೆದರೂ ದಿವ್ಯಾಂಶಿ ಅವರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.
ದಿವ್ಯಾಂಶಿ ಪಾರ್ಥಿವ ಶರೀರವನ್ನು ಕಣ್ಣೂರಿನ ನಿವಾಸದಿಂದ ಆಂಧ್ರಪ್ರದೇಶಕ್ಕೆ ರವಾನೆ ಮಾಡಲಾಗಿದೆ. ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯ ರಾಯಚೋಟಿಯಲ್ಲಿ ಇಂದು ದಿವ್ಯಾಂಶಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
[caption id="attachment_126567" align="aligncenter" width="800"] ದಿವ್ಯಾಂಶಿ[/caption]
ದಿವ್ಯಾಂಶಿ ಕುಟುಂಬಸ್ಥರು ನ್ಯೂಸ್ ಫಸ್ಟ್ ಪ್ರತಿನಿಧಿಯ ಜೊತೆ ಮಾತನಾಡಿದ್ದು, ದಿವ್ಯಾಂಶಿ ಅವರ ಚಿಕ್ಕಮ್ಮ ಅಮೆರಿಕಾದಲ್ಲಿದ್ದಾರೆ. ಕುಟುಂಬಸ್ಥರು ಅಮೆರಿಕದಲ್ಲಿರುವ ಚಿಕ್ಕಮ್ಮನ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್.. RCB ಮಾರ್ಕೆಟಿಂಗ್ ಮುಖ್ಯಸ್ಥ ಸೇರಿ ಮೂವರು ಅರೆಸ್ಟ್
ನನ್ನ ಮಗಳು ಬರೀ ಮಗಳಲ್ಲ. ಅವಳು ನನ್ನ ಸ್ನೇಹಿತೆ. ನನ್ನ ಸಂಗಾತಿಯಾಗಿದ್ದಳು. ಓದಿನಲ್ಲೂ, ಕ್ರೀಡೆಯಲ್ಲೂ ಎಲ್ಲದರಲ್ಲೂ ಮುಂದೆ ಇದ್ದಳು. ಪೈಲೆಟ್ ಆಗಬೇಕು, ವೆಟರ್ನರಿ ಡಾಕ್ಟರ್ ಆಗಬೇಕು ಅನ್ನೋ ಕನಸು ಕಂಡಿದ್ದಳು ಎಂದು ದಿವ್ಯಾಂಶಿ ತಾಯಿ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ