/newsfirstlive-kannada/media/post_attachments/wp-content/uploads/2025/06/rcb10.jpg)
ಐಪಿಎಲ್-18ರ ಆವೃತ್ತಿಯ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಅಂತಿಮ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಹೀಗಾಗಿ ಈ ಸಲ ಕಪ್ ನಮಗೆ ಸಿಗಬೇಕು ಅಂತ ಆರ್‌ಸಿಬಿ ತಂಡದ ಗೆಲುವಿಗೆ ಅಭಿಮಾನಿಗಳು ಪ್ರಾರ್ಥನೆ ಆರಂಭಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರ್‌ಸಿಬಿ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:RCBಗೆ ಶುಭ ಹಾರೈಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ.. ತಂಡದ ಬಗ್ಗೆ ಏನು ಹೇಳಿದರು?
ಆದ್ರೆ ಇಲ್ಲೋಬ್ಬ ಅಭಿಮಾನಿ ಆರ್‌ಸಿಬಿ ಗೆಲುವಿಗಾಗಿ ತಿರುಪತಿ ತಿಮ್ಮಪ್ಪನಿಗೆ ಮಂಡಿಸೇವೆ ಸಲ್ಲಿಸಿದ್ದಾನೆ. ಹೌದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಚಿನ್ ತಿರುಪತಿ ತಿಮ್ಮಪ್ಪನಿಗೆ ಮಂಡಿಸೇವೆ ಸಲ್ಲಿಸಿದ್ದಾನೆ. ಆಂಧ್ರಪ್ರದೇಶದಲ್ಲಿರುವ ತಿರುಪತಿ ತಮ್ಮಪ್ಪನ ದೇಗುಲಕ್ಕೆ ಭೇಟಿ ಕೊಟ್ಟ ಸಚಿನ್ ಆರ್‌ಸಿಬಿ ಗೆಲುವಿಗಾಗಿ ದೇವಸ್ಥಾನದ 51 ಮೆಟ್ಟಿಲುಗಳನ್ನ ಮಂಡಿಯಿಂದಲೇ ಹತ್ತಿ, ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾರೆ.
ಈ ಬಗ್ಗೆ ನ್ಯೂಸ್ಫಸ್ಟ್ ದೂರವಾಣಿ ಕರೆಯಲ್ಲಿ ಮಾತಾಡಿದ ಅಭಿಮಾನಿ ಸಚಿನ್, ಇಷ್ಟು ವರ್ಷದಿಂದ ನಾವು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಲೇ ಬಂದಿದ್ದೇವೆ. ಈ ಬಾರಿ ಪಕ್ಕಾ ಆರ್‌ಸಿಬಿ ಕಪ್ ಎತ್ತಿಕೊಳ್ಳುತ್ತೆ. ಹೀಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲೇ ಬೇಕು ಅಂತ ತಿರುಪತಿ ತಿಮ್ಮಪ್ಪನಿಗೆ ಮಂಡಿಸೇವೆ ಮಾಡಿ ಹರಕೆ ಮುಟ್ಟಿಸಿದ್ದೀನಿ. ಆರ್ಸಿಬಿಗೆ ಜೈ.. ಈ ಸಲ ಕಪ್ ನಮ್ದೇ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ