/newsfirstlive-kannada/media/post_attachments/wp-content/uploads/2024/03/RCB-20.jpg)
ಆರ್ಸಿಬಿ ಅಭಿಮಾನಿಗಳೆಂದರೆ ತುಂಬಾ ವಿಭಿನ್ನ. ತನ್ನ ತಂಡಕೋಸ್ಕರ ಏನು ಬೇಕಾದರು ಮಾಡಲು ರೆಡಿ ಇರ್ತಾರೆ. ಅದರಲ್ಲೂ ಕೆಲವರು ಹಾರ್ಡ್ಕೋರ್ ಫ್ಯಾನ್ಸ್ಗಳಿದ್ದಾರೆ. ನೆಚ್ಚಿನ ಆಟಗಾರರನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡವರು ಇದ್ದಾರೆ. ಅದರಂತೆಯೇ ಇಲ್ಲೊಬ್ಬ ಆರ್ಸಿಬಿ ಹಾರ್ಡ್ಕೋರ್ ಅಭಿಮಾನಿಯನ್ನು ಗಮನಿಸಲೇಬೇಕು. ಈತ ಏನು ಮಾಡಿದ್ದಾನೆ ಗೊತ್ತಾ? ಆರ್ಸಿಬಿ ಆಟಗಾರರ ಹೆಸರನ್ನು ಕೈ ಮೇಲೆ ಕೆತ್ತಿಸಿದ್ದಾನೆ.
ಇತ್ತೀಚೆಗೆ ಆರ್ಸಿಬಿ ಮಹಿಳಾ ತಂಡ ಕಪ್ ಗೆದ್ದಿರೋದು ಗೊತ್ತೇ ಇದೆ. ಇದೇ ಸಂತಸದಲ್ಲಿ ಆರ್ಸಿಬಿ ಅಭಿಮಾನಿ ಮಹಿಳಾ ತಂಡದ ಆಟಗಾರರ ಹೆಸರುಗಳನ್ನು ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅಚ್ಚರಿ ಸಂಗತಿ ಎಂದರೆ ತಂಡದಲ್ಲಿರುವ 19 ಜನರ ಹೆಸರಿನ ಜೊತೆಗೆ ‘ಈ ಸಲ ಕಪ್ ನಮ್ದೆ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
A RCB fan inked all the RCB players names after RCB won the WPL league. ?pic.twitter.com/JqRqbOIuH5
— Mufaddal Vohra (@mufaddal_vohra)
A RCB fan inked all the RCB players names after RCB won the WPL league. 🫡pic.twitter.com/JqRqbOIuH5
— Mufaddal Vohra (@mufaddal_vohra) March 30, 2024
">March 30, 2024
ಇದನ್ನೂ ಓದಿ: ವಾರೆಗಣ್ಣಿನ ನೋಟ, ಟೈಮ್ ಔಟ್ ವೇಳೆ ಆಲಿಂಗನ.. ದ್ವೇಷ ಮರೆತ್ರಾ ವಿರಾಟ್ ಹಾಗೂ ಗಂಭೀರ್? ವೈರತ್ವಕ್ಕೆ ಬ್ರೇಕ್ ಬಿತ್ತಾ?
ಅಭಿಮಾನಿ ಆರ್ಸಿಬಿ ಅಭಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಅಭಿಮಾನಿ ಆರ್ಸಿಬಿ ಟೀ ಶರ್ಟ್ ಧರಿಸಿದ್ದು ಕಾಣಬಹುದಾಗಿದೆ. ಇದನ್ನು ಕಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ ವಿಡಿಯೋ ಹಂಚಿಕೊಳ್ಳುವುದರ ಜೊತೆಗೆ ಬಗೆ ಬಗೆಯ ಕಾಮೆಂಟ್ ಬರೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ