/newsfirstlive-kannada/media/post_attachments/wp-content/uploads/2024/12/RCB_FAN.jpg)
ಹೊಸ ಅಧ್ಯಾಯಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ ಸೀಸನ್ 18ರಲ್ಲಿ ಟ್ರೋಫಿ ಗೆಲ್ಲಲು ಭರ್ಜರಿ ಪ್ಲಾನ್ ಮಾಡುತ್ತಿದೆ. ಮೆಗಾ ಹರಾಜಿನಲ್ಲಿ ಒಳ್ಳೆ ಒಳ್ಳೆ ಪ್ಲೇಯರ್ಸ್​ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ರೆಡ್ ಆರ್ಮಿ ಕ್ಯಾಪ್ಟನ್ ಯಾರೆಂದು ಇನ್ನು ನಿರ್ಧಾರ ಆಗಿಲ್ಲ. ಸದ್ಯ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಬಾರ್ಡರ್​ ಗವಾಸ್ಕರ್ ಟೆಸ್ಟ್ ಆಡುತ್ತಿದ್ದಾರೆ. ಇದೇ ವೇಳೆ ಆರ್​ಸಿಬಿ ಅಭಿಮಾನಿ ಕೊಹ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ​
ಆರ್​ಸಿಬಿ ಜೊತೆ ಯಾವುದೇ ತಂಡದ ಪಂದ್ಯ ಸ್ಟೇಡಿಯಂನಲ್ಲಿ ನಡೆಯುತ್ತಿದ್ದರು ಅಲ್ಲಿ ಹೈಲೈಟ್ಸ್​ ಆಗೋದು ಆರ್​ಸಿಬಿ ಹೆಸರು ಮಾತ್ರ. ಅಭಿಮಾನಿಗಳ ಮನದಲ್ಲಿ ಆರ್​ಸಿಬಿ ಹೆಸರು ಬೇರೂರಿ ಬಿಟ್ಟಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಎಲ್ಲಿ ಹೋದರು ಆರ್​ಸಿಬಿಯ ಒಬ್ಬ ಅಭಿಮಾನಿ ಇದ್ದೇ ಇರುತ್ತಾರೆ ಎನ್ನುವುದಕ್ಕೆ ವಿರಾಟ್ ಕೊಹ್ಲಿ ಜೊತೆ ಈ ಸುಂದರ ಯುವತಿ ತೆಗೆದುಕೊಂಡು ಫೋಟೋ ಸಾಕ್ಷಿ ಎಂದು ಹೇಳಬಹುದು.
ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​ ಗವಾಸ್ಕರ್ ಟ್ರೋಫಿ ಆಡುತ್ತಿದ್ದು ರೋಹಿತ್, ವಿರಾಟ್, ರಾಹುಲ್ ಸೇರಿ ಎಲ್ಲರೂ ಅಭ್ಯಾಸದಲ್ಲಿ ಬ್ಯುಸಿ ಇದ್ದಾರೆ. ಮೆಲ್ಬರ್ನ್​​ನ ಸ್ಟೇಡಿಯಂನಲ್ಲಿ ಇರುವ ವಿರಾಟ್​ ಕೊಹ್ಲಿ ಫೋಟೋ ಸಖತ್ ವೈರಲ್ ಆಗುತ್ತಿದೆ. ಆರ್​ಸಿಬಿಯ ಫ್ಯಾನ್ಸ್​ ಆಸ್ಟ್ರೇಲಿಯಾದಲ್ಲೂ ಇದ್ದಾರೆ. ಯುವತಿ ಒಬ್ಬರು ಆರ್​ಸಿಬಿಯ ಜೆರ್ಸಿ ತೊಟ್ಟು ವಿರಾಟ್ ಕೊಹ್ಲಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ನಗು ನಗುತ್ತಾ ಯುವತಿಯ ಜೊತೆ ಫೋಟೋಗೆ ಪೋಸ್ ಕೊಟ್ಟಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಐಪಿಎಲ್ ಸೀಸನ್ 18ಕ್ಕೆ, ಕೆಲವೇ ಕೆಲವು ತಿಂಗಳು ಮಾತ್ರ ಬಾಕಿ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಪ್ ಗೆಲ್ಲಲು ಭರ್ಜರಿ ಪ್ಲಾನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಆಟಗಾರರ ಪ್ರಿಪರೇಟ್ರಿ ಕ್ಯಾಂಪ್ ಸಹ ಆರಂಭಿಸಿರುವ ಆರ್​ಸಿಬಿ, ತೆರೆ ಹಿಂದೆ ಸ್ಟ್ರಾಟಜಿ ಮಾಡೋದರಲ್ಲಿ ಬ್ಯುಸಿಯಾಗಿದೆ. ಈ ಮೂಲಕ ಮುಂಬರುವ ಐಪಿಎಲ್​​ ಸೀಸನ್​ನಲ್ಲಿ, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಡಲು ಆರ್​​ಸಿಬಿ ತಯಾರಿ ನಡೆಸಿದೆ.​​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ