/newsfirstlive-kannada/media/post_attachments/wp-content/uploads/2025/04/MANOJ-BHANDAGE-1.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆರ್ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುವ ಮೂಲಕ ತವರಿನಲ್ಲಿ ಸತತ ಮೂರನೇ ಬಾರಿಗೆ ಸೋಲನ್ನು ಕಂಡಿದೆ.
ವಿಶೇಷ ಅಂದರೆ ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಸಣ್ಣ ಬದಲಾವಣೆ ಮಾಡಿತ್ತು. ಚಿನ್ನಸ್ವಾಮಿಯಲ್ಲಿ ರನ್ ಗಳಿಸಲು ಪರಾದಡಿದ ದೇವದತ್ ಪಡಿಕ್ಕಲ್ ಅವರನ್ನು ಪ್ಲೇಯಿಂಗ್-11ನಿಂದ ಹೊರಗಿಟ್ಟಿತ್ತು. ಬದಲಿಗೆ ಕನ್ನಡಿಗ ಮನೋಜ್ ಭಾಂಡಗೆ ಅವಕಾಶ ಮಾಡಿಕೊಟ್ಟಿತ್ತು. ಹೋಂಗ್ರೌಂಡ್ ಹಿನ್ನೆಲೆಯಲ್ಲಿ ಮನೋಜ್ ಭಾಂಡಗೆ ಸಾಕಷ್ಟು ಅಭಿಮಾನಿಗಳ ಬೆಂಬಲ ಕೂಡ ಸಿಕ್ಕಿತ್ತು.
ಇದನ್ನೂ ಓದಿ: ಮತ್ತೊಂದು ಹೀನಾಯ ಸೋಲು.. ಆರ್ಸಿಬಿ ನಾಯಕ ಪಾಟೀದಾರ್ ಕೊಟ್ಟ ಕಾರಣ ಏನು..?
ಆದರೆ ಮನೋಜ್ ಭಾಂಡಗೆ ಚಿನ್ನದಂಥ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಡೆಬ್ಯು ಮಾಡಿದ್ದ ಮನೋಜ್, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್ಸಿಬಿಗೆ ಆಸೆಯಾಗಬೇಕಿದ್ದ ಮನೋಜ್, ಕೇವಲ 4 ಬಾಲ್ ಎದುರಿಸಿ ಪೆವಿಲಿಯನ್ಗೆ ಹೋದರು. ಕೇವಲ ಒಂದು ರನ್ ಗಳಿಸಿದ ಭಾಂಡಗೆ, ಜಾನ್ಸನ್ ಅವರ ಎಲ್ಬಿಡಬ್ಲ್ಯೂ ಬಲೆಗೆ ಔಟ್ ಆದರು.
ಇನ್ನು, ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ 9 ವಿಕೆಟ್ ಕಳೆದುಕೊಂಡು ಕೇವಲ 95 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಪಂಜಾಬ್ ಕಿಂಗ್ಸ್, ಐದು ವಿಕೆಟ್ ಕಳೆದುಕೊಂಡು 11 ಬಾಲ್ ಬಾಕಿ ಇರುವಾಗ ಗುರಿ ಮುಟ್ಟಿತು.
ಇದನ್ನೂ ಓದಿ: ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ- ರಿಕ್ಕಿ ರೈ ಆರೋಗ್ಯ ಹೇಗಿದೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್