/newsfirstlive-kannada/media/post_attachments/wp-content/uploads/2025/07/Ganesh-with-rcb-3.jpg)
RCB ಕಪ್ ಗೆದ್ದಾಯ್ತು. ಆದ್ರೆ ಇದರ ಸಂಭ್ರಮ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿನೇ ಈ ಸಲ ಗಣೇಶ ಹಬ್ಬಕ್ಕೆ ಆರ್‌ಸಿಬಿ ಕಪ್ ಥೀಮ್ ನಡಿ ಗಣೇಶನಮೂರ್ತಿ ರೆಡಿಯಾಗಿದೆ. ಹಾಗಾದ್ರೆ ಈ ಗಣಪನ ವಿಶೇಷತೆ ಏನು? ಆರ್‌ಸಿಬಿ ಗಣೇಶನನ್ನ ರೆಡಿ ಮಾಡಲು ಎಷ್ಟು ಸಮಯ ತೆಗೆದುಕೊಳ್ತು ಅನ್ನೋದ್ರ ವಿವರ ಇಲ್ಲಿದೆ.
ಇದನ್ನೂ ಓದಿ: 0 ರನ್, 2 ವಿಕೆಟ್..! ಗೆದ್ದೇ ಬಿಟ್ವಿ ಅನ್ನೋ ಆಂಗ್ಲರ ಸೊಕ್ಕನ್ನ ಗಿಲ್ ಮುರಿದ್ದೇ ರೋಚಕ..
RCB ಕಪ್ ಹೊತ್ತು ಬಂದ ಗಣಪ
17 ವರ್ಷಗಳ ಸತತ ಪ್ರಾರ್ಥನೆಯಿಂದ 18ನೇ ಸೀಜನ್‌ನಲ್ಲಿ ಎಲ್ಲರ ಕನಸಿನಂತೆ ಆರ್‌ಸಿಬಿ ಕಪ್ ಗೆದ್ದಾಯ್ತು. ಈ ಖುಷಿ ಈ ಬಾರಿಯ ಗಣೇಶೋತ್ಸವದಲ್ಲಿ ಇಲ್ಲ ಅಂದ್ರೆ ಅದಕ್ಕೆ ಮಜಾನೇ ಇರೋದಿಲ್ಲ. ಗಣೇಶ ಹಬ್ಬಕ್ಕೆ ಇನ್ನೊಂದು ತಿಂಗಳು ಇರುವಾಗಲೇ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಅದರಲ್ಲೂ ಈ ಬಾರಿ ವಿಶೇಷವಾಗಿ ಆರ್‌ಸಿಬಿ ಥೀಮ್‌ನಡಿ ಗಣೇಶನ ಮೂರ್ತಿ ರೆಡಿಯಾಗಿದೆ.
ಇದನ್ನೂ ಓದಿ: ಪ್ರವಾಹದಲ್ಲಿ 10 ತಿಂಗಳ ಶಿಶು ಅನಾಥ; ಕಂದಮ್ಮಳಿಗಾಗಿ ಮಿಡಿದ ಸರ್ಕಾರ! ‘ರಾಜ್ಯದ ಕೂಸು’ ಎಂದು ಘೋಷಣೆ!
ಕಳೆದ ಮೂರು ತಿಂಗಳಿಂದ ಮುಂಬೈನ ಕಲಾವಿದರು ಗಣೇಶನ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಬರೋಬ್ಬರಿ ಒಂದು ಲಕ್ಷ ಹಣ ಖರ್ಚು ಮಾಡಿ ಸಿದ್ಧಪಡಿಸಲಾಗಿದೆ. ಆರ್‌ಸಿಬಿ ಗಣೇಶ ಅಷ್ಟೇ ಅಲ್ದೆ ಗರುಡನ ಮೇಲೆ ಕುಳಿತ ಗಣೇಶ, ಅಂಬಾರಿಯನ್ನ ಹೊರ್ತಾ ಇದ್ದ ಅರ್ಜುನನ ಮೇಲೆ ಕುಳಿತಿರುವ ಗಣೇಶ, ಇಷ್ಟೇ ಅಲ್ಲದೇ ದೇವನೊಬ್ಬ ನಾಮ ಹಲವು ಅನ್ನುವ ರೀತಿಯಲ್ಲಿ ಶಿವ ರಾಮ, ಕೃಷ್ಣ, ಅಯ್ಯಪ್ಪ, ಬ್ರಹ್ಮ, ವಿಷ್ಣು ಮಹೇಶ್ವರರ ರೂಪದಲ್ಲಿ ಗಣಪನ ಮೂರ್ತಿಗಳು ರೆಡಿಯಾಗಿವೆ. ಈ ಸಲ ಗಣೇಶೋತ್ಸವಕ್ಕೆ ಬೇಕಾದಂತಹ ಮೂರ್ತಿಗಳು ಜನರನ್ನ ಕೈ ಬೀಸಿ ಕರೀತಿದೆ. ಗಣೇಶ ಹಬ್ಬಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಬಹುತೇಕ ಗಣಪನ ಮೂರ್ತಿಗಳು ಬುಕ್ ಆಗಿವೆ.
ಇದನ್ನೂ ಓದಿ: ಧರ್ಮಸ್ಥಳ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ -ಆರ್.ಅಶೋಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ