newsfirstkannada.com

RCB ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ಗೆ ಕೊಕ್​​? ಆಕ್ರೋಶ ಹೊರಹಾಕಿದ ಫ್ಯಾನ್ಸ್​​!

Share :

Published April 24, 2024 at 3:55pm

Update April 24, 2024 at 3:57pm

    ಸದ್ಯ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಕ್​ ಟು ಬ್ಯಾಕ್​​ 7 ಸೋಲು..!

    ಆರ್​​ಸಿಬಿ ಕ್ಯಾಪ್ಟನ್ಸಿ ಸ್ಥಾನದಿಂದ ಫಾಫ್​​ ಅವರನ್ನು ಕಿತ್ತೊಗೆಯಬೇಕು ಎಂದು ಆಕ್ರೋಶ

ಸದ್ಯ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಕ್​ ಟು ಬ್ಯಾಕ್​​ 7 ಸೋಲು ಕಂಡಿದೆ. ಇನ್ನೂ 6 ಪಂದ್ಯ ಉಳಿದಿದ್ದು, ಈಗಾಗಲೇ ಆರ್​​ಸಿಬಿ ಪ್ಲೇ ಆಫ್​ನಿಂದ ಬಹುತೇಕ ಹೊರಬಿದ್ದಿದೆ. ಇದರ ಮಧ್ಯೆ ಆರ್​​ಸಿಬಿ ಸೋಲಿಗೆ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಕಾರಣ. ಇವರನ್ನು ಆರ್​​ಸಿಬಿ ಕ್ಯಾಪ್ಟನ್ಸಿ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ಈಡನ್​ ಗಾರ್ಡೆನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಕೆಕೆಆರ್​, ಆರ್​​ಸಿಬಿ ಮಧ್ಯೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​​ ಕೇವಲ 7 ರನ್​ಗೆ ಔಟಾದ್ರು. ಇದರ ಪರಿಣಾಮ ಆರ್​​​ಸಿಬಿ 1 ರನ್​ನಿಂದ ಸೋಲಬೇಕಾಯ್ತು. ಕೊಹ್ಲಿ ಅಥವಾ ಫಾಫ್​ ಇಬ್ಬರಲ್ಲಿ ಒಬ್ಬರು ಕೊನೆಯವರೆಗೂ ಕ್ರೀಸ್​ನಲ್ಲಿ ಇರಬೇಕಿತ್ತು. ಆರ್​​ಸಿಬಿ ಸೋಲಿಗೆ ಇವರೇ ಕಾರಣ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಆಡಿರೋ 8 ಪಂದ್ಯಗಳಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. 8 ಪಂದ್ಯಗಳಲ್ಲಿ ಫಾಫ್​ ಕೇವಲ 239 ರನ್​ ಗಳಿಸಿದ್ದಾರೆ. ಬ್ಯಾಟಿಂಗ್​ ಆವರೇಜ್​​​ 30 ಇದ್ದು, ಸ್ಟ್ರೈಕ್​ ರೇಟ್​​ ಕೇವಲ 150 ಇದೆ. ಕೇವಲ 25 ಫೋರ್​​, 10 ಸಿಕ್ಸರ್​ ಸಿಡಿಸಿದ್ದಾರೆ. ಎರಡು ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಸಿಡಿಸಿದ್ದು, ಒಂದು ಪಂದ್ಯವೂ ಗೆಲ್ಲಿಸಿಲ್ಲ. ಕೇವಲ ಬ್ಯಾಟಿಂಗ್​ ಮಾತ್ರವಲ್ಲ ಆನ್​ಫೀಲ್ಡ್​ ಡಿಸಿಷನ್​ ತೆಗೆದುಕೊಳ್ಳುವುದರಲ್ಲೂ ಎಡವಿದ್ದು, ಇವರಿಗೆ ಆರ್​​ಸಿಬಿ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಎಂದು ಒತ್ತಡ ಹಾಕಲಾಗುತ್ತಿದೆ. ಫಾಫ್​ ಡುಪ್ಲೆಸಿಸ್​ಗೆ 39 ವರ್ಷ ಆಗಿದ್ದು, ಮುಂದಿನ ವರ್ಷ ರಿಟೈರ್​ ಆಗೋ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ: ರೋಹಿತ್​​ ನಂತರ ಟೀಮ್​ ಇಂಡಿಯಾದ ಕ್ಯಾಪ್ಟನ್​ ಯಾರು? ಸ್ಟೋರಿ ಓದಿದ್ರೆ ಸರ್ಪ್ರೈಸ್​ ಆಗ್ತೀರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ಗೆ ಕೊಕ್​​? ಆಕ್ರೋಶ ಹೊರಹಾಕಿದ ಫ್ಯಾನ್ಸ್​​!

https://newsfirstlive.com/wp-content/uploads/2024/04/FAF-1.jpg

Load More