Advertisment

ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮಾಡಿದ ಫ್ರಾಂಚೈಸಿ.. ರೊಚ್ಚಿಗೆದ್ದ ಕನ್ನಡ ಚಳವಳಿ ಕೇಂದ್ರ ಸಮಿತಿ..!

author-image
Ganesh
Updated On
ಚೆನ್ನೈ​ ಬತ್ತಳಿಕೆಯಲ್ಲಿ ಭಾರೀ ಬ್ರಹ್ಮಾಸ್ತ್ರ.. RCB ಮೇಲೆ ಪ್ರಯೋಗಿಸಲು ಧೋನಿ ಬಿಗ್ ಪ್ಲಾನ್!
Advertisment
  • ಮಾರ್ಚ್​ 22 ರಿಂದ ಆರ್​ಸಿಬಿ ಐಪಿಎಲ್ ಅಭಿಯಾನ
  • ಮೊದಲ ಪಂದ್ಯವು ಕೋಲ್ಕತ್ತಾದಲ್ಲಿ ನಡೆಯಲಿದೆ
  • ಬೆಂಗಳೂರಿನಲ್ಲಿ ಪಂದ್ಯ ವೀಕ್ಷಣೆಗೆ ಫ್ಯಾನ್ಸ್ ಎಕ್ಸೈಟ್

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಲ್ಲಿ ಐಪಿಎಲ್​ ಫೀವರ್​ ನಿಧಾನಕ್ಕೆ ಶುರುವಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿ ಆಡುತ್ತಿರೋದ್ರಿಂದ ಆರ್​ಸಿಬಿ ಅಭಿಮಾನಿಗಳು ಮತ್ತಷ್ಟು ಎಕ್ಸೈಟ್ ಆಗಿದ್ದರು. ಆದರೆ ಆರ್​ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ.

Advertisment

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯಗಳಿಗೆ ದುಪ್ಪಟ್ಟು ಹಣ ವಿಧಿಸಿದೆ. ಪಂದ್ಯಾವಳಿಯ ಆರಂಭದ ದರವೇ 2300 ರೂಪಾಯಿ ನಿಗದಿ ಮಾಡಿದೆ. ಅಲ್ಲದೇ 42,000 ವರೆಗೂ ಟಿಕೆಟ್​ನ ಬೆಲೆ ಏರಿಸಿದೆ. ಟಿಕೆಟ್ ಬೆಲೆ ನೋಡಿದ ಸಾಮಾನ್ಯ ಆರ್​ಸಿಬಿ ಅಭಿಮಾನಿಗಳು ಕಂಗಾಲ್ ಆಗಿದ್ದಾರೆ. ಆರ್​ಸಿಬಿ ತಂಡದ ನಿರ್ವಾಹಕರು ಮತ್ತು ಮಾಲೀಕರು ಟಿಕೆಟ್ ಬೆಲೆ ಕಡಿಮೆ ಮಾಡಬೇಕು ಅಂತಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಾಳೆ ಇಂದ SSLC ಪರೀಕ್ಷೆ; ಎಷ್ಟು ಲಕ್ಷ ಬಾಲಕರು, ಬಾಲಕಿಯರು ಎಕ್ಸಾಂ ಬರೆಯುತ್ತಿದ್ದಾರೆ?

ಈ ಸಂಬಂಧ RCB ಅಧ್ಯಕ್ಷರಿಗೆ ಕನ್ನಡ ಚಳವಳಿ ಕೇಂದ್ರ ಸಮಿತಿಯ ಮುಖ್ಯಸ್ಥ ಗುಗುರುದೇವ್ ನಾರಾಯಣಕುಮಾರ್ ಪತ್ರ ಬರೆದಿದ್ದಾರೆ. ಬೆಂಗಳೂರು ಕ್ರಿಕೆಟ್ ಪ್ರೇಮಿಗಳ ದೊಡ್ಡ ಬಳಗವನ್ನೇ ಹೊಂದಿರುವ ನಗರ. ಹೆಸರಾಂತ, ವಿಶ್ವಮಟ್ಟದ ಕ್ರಿಕೆಟ್ ಆಟಗಾರರ ಕೊಡುಗೆಯನ್ನು ಬೆಂಗಳೂರು ಕೊಟ್ಟಿದೆ. ಐಪಿಎಲ್ ಪಂದ್ಯಾವಳಿಗಳು ಆರಂಭವಾದ ಮೇಲೆ RCBಗೆ ಅಗಾಧ ಅಭಿಮಾನಿ ಬಳಗ ಇದೆ. ಸ್ಥಳೀಯ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಬಳಗ ಇದೆ. ಸಾಮಾನ್ಯ ಅಭಿಮಾನಿಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನೋಡಬೇಕು ಅಂತಾ ಅಪೇಕ್ಷೆ ಪಡ್ತಾನೆ.

Advertisment

ಆದರೆ ದರ ಏರಿಕೆಯ ಬರೆ ಕಂಡು ಟಿಕೆಟ್ ಪ್ರೇಮಿಗಳು ಶಾಕ್ ಆಗಿದ್ದಾರೆ. ರಣ ರೋಚಕ ಪಂದ್ಯಗಳ ವೀಕ್ಷಿಸಲು ಹೈಟಿಕೆಟ್ ರೇಟ್ ವಿಧಿಸಲಾಗಿದೆ. ಕೂಡಲೇ ಟಿಕೆಟ್ ಬೆಲೆ ಕಡಿಮೆ ಮಾಡಿ, ಸಾಮಾನ್ಯ ಅಭಿಮಾನಿಗಳು ಕೂಡ ಕ್ರಿಕೆಟ್ ವೀಕ್ಷಣೆ ಮಾಡುವಂತಾಗಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್‌ ಟೀಂ ಇಂಡಿಯಾಗೆ ಗುಡ್‌ನ್ಯೂಸ್‌.. ಕೋಟಿ, ಕೋಟಿ ಬಹುಮಾನ ಘೋಷಿಸಿದ BCCI

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment