/newsfirstlive-kannada/media/post_attachments/wp-content/uploads/2024/11/RCB-6.jpg)
ಮುಂದಿನ ಸೀಸನ್ನಲ್ಲಿ ಕಪ್ ಗೆಲ್ಲೋ ಕನಸು ಈಡೇರಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದ ಆರ್ಸಿಬಿ, ಆಕ್ಷನ್ ಕಣದಲ್ಲಿ ಸೈಲೆಂಟ್ ಆಗಿಬಿಡ್ತು. ಆರ್ಸಿಬಿ ಮ್ಯಾನೇಜ್ಮೆಂಟ್ ನಡೆಗೆ ಅಭಿಮಾನಿಗಳಂತೂ ಕೆರಳಿ ಕೆಂಡವಾಗಿದ್ದಾರೆ. ಸೂಪರ್ ಸ್ಟಾರ್ಗಳು ಆರ್ಸಿಬಿಗೆ ಬರ್ತಾರೆ ಅಂದುಕೊಂಡ್ರೆ, ಮ್ಯಾನೇಜ್ಮೆಂಟ್ ಮಣೆ ಹಾಕಿದ್ದು, ಡಿಸೆಂಟ್ ಆಟಗಾರರಿಗೆ.
ಒಂದಲ್ಲ.. ಎರಡಲ್ಲ.. ಬರೋಬ್ಬರಿ 83 ಕೋಟಿ ಹಣವನ್ನ ಇಟ್ಟುಕೊಂಡು ಮೆಗಾ ಆಕ್ಷನ್ ಅಖಾಡಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಗಾ ಆಕ್ಷನ್ನ ಮೊದಲ ದಿನವೇ ನಿರಾಸೆ ಮೂಡಿಸಿತು. ಸ್ಟಾರ್ ಪ್ಲೇಯರ್ಗಳು ಆರ್ಸಿಬಿ ಬರ್ತಾರೆ ಅನ್ನೋ ಅಭಿಮಾನಿಗಳ ನಿರೀಕ್ಷೆ ಹುಸಿಯಾಯ್ತು. ಆಕ್ಷನ್ಗೆ ಆರ್ಸಿಬಿ ಪ್ರಿಪರೇಶನ್ ನಡೆಸಿತ್ತಾ? ಇಲ್ವಾ? ಅನ್ನೋ ಅನುಮಾನ ಎಲ್ಲರನ್ನ ಕಾಡ್ತು.
ಇದನ್ನೂ ಓದಿ:ಜಿತೇಶ್ ಶರ್ಮಾಗೆ RCB ಜಾಕ್ಪಾಟ್; ಸಂಬಳದಲ್ಲಿ ಶೇಕಡಾ 5,400ರಷ್ಟು ಹೆಚ್ಚಳ..!
ಕೆ.ಎಲ್ ರಾಹುಲ್ ಆರ್ಸಿಬಿಗೆ ಬಂದೇ ಬರ್ತಾರೆ ಅನ್ನೋ ಅಭಿಮಾನಿಗಳ ಕನಸು ನುಚ್ಚು ನೂರಾಯ್ತು,. ಆರಂಭದಲ್ಲಿ ಬಿಡ್ ಮಾಡಿದ ಆರ್ಸಿಬಿ 10.50 ಕೋಟಿಗೆ ಸುಸ್ತಾಯ್ತು. ಅಂತಿಮವಾಗಿ ಕೇವಲ 14 ಕೋಟಿ ಹಣಕ್ಕೆ ರಾಹುಲ್ನ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ರು. ಕಡಿಮೆ ಮೊತ್ತಕ್ಕೆ ಲಭ್ಯವಿದ್ರೂ, ಕನ್ನಡಿಗನನ್ನ ಕಡೆಗಣಿಸಿದ ಫ್ರಾಂಚೈಸಿ ಮೇಲೆ ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.
ರಾಹುಲ್ ಬಿಡಿ.. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಜೋಸ್ ಬಟ್ಲರ್, ಇಶಾನ್ ಕಿಶನ್, ಜೋಫ್ರಾ ಆರ್ಚರ್.. ಇಂತಹ ಟಿ20 ಗೇಮ್ ಚೆಂಜರ್ಗಳನ್ನ ಖರೀದಿಸೋ ಗೋಜಿಗೆ ಆರ್ಸಿಬಿ ಹೋಗಲಿಲ್ಲ. ಬಿಗ್ ಪರ್ಸ್ ಇಟ್ಟುಕೊಂಡು ಆಕ್ಷನ್ಗೆ ಹೋದ ಆರ್ಸಿಬಿಯ ಲೆಕ್ಕಾಚಾರ ಅಂದುಕೊಂಡತೆ ಆಗಲಿಲ್ಲ. ಸ್ಟಾರ್ಗಳನ್ನ ಖರೀದಿಸುತ್ತೆ ಅಂದುಕೊಂಡ್ರೆ ಡಿಸೆಂಟ್ ಆಟಗಾರರನ್ನ ಖರೀದಿಸಿ ಸೈಲೆಂಟ್ ಆಗಿ ದಿನದಾಟ ಮುಗಿಸಿತು.
ಲಿಯಾಮ್ ಲಿವಿಂಗ್ಸ್ಟೋನ್
ಇಂಗ್ಲೆಂಡ್ನ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿ ಖರೀದಿಸಿದ ಆಟಗಾರರ ಪೈಕಿ ಇರೋದ್ರಲ್ಲಿ ಬೆಟರ್. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲ ಲಿವಿಂಗ್ಸ್ಟೋನ್ನ 8.75 ಕೋಟಿ ನೀಡಿ ಆರ್ಸಿಬಿ ಖರೀದಿಸಿತು. ಬಿಗ್ ಹಿಟ್ಟರ್ ಲಿವಿಂಗ್ಸ್ಟೋನ್ ಚಿನ್ನಸ್ವಾಮಿಯಂತ ಚಿಕ್ಕ ಮೈದಾನದಲ್ಲಿ ತಂಡಕ್ಕೆ ನೆರವಾಗಬಲ್ಲರು.
ಫಿಲ್ ಸಾಲ್ಟ್
ಕಳೆದ ಐಪಿಎಲ್ನಲ್ಲಿ ಕೆಕೆಆರ್ ಪರ ಧೂಳೆಬ್ಬಿಸಿದ್ದ ಫಿಲ್ ಸಾಲ್ಟ್ನ ಆರ್ಸಿಬಿ, ಪಟ್ಟು ಹಿಡಿದು ಖರೀದಿಸಿತು. ಕೆಕೆಆರ್ ಜೊತೆಗೆ ಜಿದ್ದಿಗೆ ಬಿದ್ದು ಫೈಟ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 11.50 ಕೋಟಿ ಬೆಲೆಗೆ ಸ್ಪೋಟಕ ಬ್ಯಾಟ್ಸ್ಮನ್ ವಿಕೆಟ್ ಕೀಪರ್ ಖರೀದಿಸುವಲ್ಲಿ ಯಶಸ್ವಿಯಾಯ್ತು.
ಇದನ್ನೂ ಓದಿ:ಜಿತೇಶ್ ಶರ್ಮಾಗೆ RCB ಜಾಕ್ಪಾಟ್; ಸಂಬಳದಲ್ಲಿ ಶೇಕಡಾ 5,400ರಷ್ಟು ಹೆಚ್ಚಳ..!
ಜಿತೇಶ್ ಶರ್ಮಾ
ಆರ್ಸಿಬಿ ಖರೀದಿಸಿದ್ರಲ್ಲೇ ದುಬಾರಿ ಪಿಕ್ ಇದು ಅನಿಸಿದ ಪಿಕ್ ಇದು. ಕಳೆದ ಸೀಸನ್ನಲ್ಲಿ ಪಂಜಾಬ್ ಪರ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ದ ಯಂಗ್ ಸ್ಟರ್ ಖರೀದಿಗೆ ಚೆನ್ನೈ, ಲಕ್ನೋ ತಂಡಗಳು ಪೈಪೋಟಿಗೆ ಬಿದ್ದುದ್ವು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ಡಿಂಗ್ ವಾರ್ಗೆ ಬಂದು ಹೋಯ್ತು. ಅಂತಿಮವಾಗಿ ಕಹಾನಿ ಮೆ ಟ್ವಿಸ್ಟ್ ಎಂಬಂತೆ ಪಂಜಾಬ್ ಆರ್ಟಿಎಮ್ ದಾಳ ಉರುಳಿಸಿತು. ಅಂತಿಮವಾಗಿ 11 ಕೋಟಿ ಫೈನಲ್ ಬಿಡ್ ಮಾಡಿ ಜಿತೇಶ್ ಶರ್ಮಾನ ಆರ್ಸಿಬಿ ಖರೀದಿಸಿತು.
ಜೋಶ್ ಹೇಜಲ್ವುಡ್
ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್ವುಡ್ ಮತ್ತೆ ಆರ್ಸಿಬಿಗೆ ವಾಪಾಸ್ಸಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಜೊತೆಗೆ ಬಿಡ್ಡಿಂಗ್ ವಾರ್ ನಡೆಸಿದ ಆರ್ಸಿಬಿ 12.50 ಕೋಟಿ ನೀಡಿ ಖರೀದಿ ಮಾಡಿತು. T20 ಕ್ರಿಕೆಟ್ನಲ್ಲಿ ಡಿಸೆಂಟ್ ರೆಕಾರ್ಡ್ ಹೊಂದಿರೋ ಅನುಭವಿ ವೇಗಿ ಜೋಶ್ ಹೇಜಲ್ವುಡ್ಯ ಖರೀದಿ ಆರ್ಸಿಬಿ ಬಲ ಹೆಚ್ಚಿಸಿದೆ ಅನ್ನೋದು ಸುಳ್ಳಲ್ಲ.
ಅಂತಿಮ ಹಂತದಲ್ಲಿ ಯುವ ಬೌಲರ್ ರಸಿಕ್ ಸಲಾಂನ ಆರ್ಸಿಬಿ ತಂಡ ಖರೀದಿಸಿತು. ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಸಿಕ್ ಸಲಾಂಗೆ ಬರೋಬ್ಬರಿ 6 ಕೋಟಿ ನೀಡಿ ಆರ್ಸಿಬಿ ಖರೀದಿಸಿತು. ಜೊತೆಗೆ ಕೆಕೆಆರ್ ಸ್ಪಿನ್ನರ್ ಸುಯಶ್ ಶರ್ಮಾನ 2.60 ಕೋಟಿ ನೀಡಿ ಆರ್ಸಿಬಿ ಬುಟ್ಟಿಗೆ ಹಾಕಿಕೊಳ್ತು.
ಹರಾಜಿನ ಮೊದಲ ದಿನ ಐವರು ಆಟಗಾರರನ್ನ ಖರೀದಿಸಿದ ಆರ್ಸಿಬಿ 52.35 ಕೋಟಿ ಖರ್ಚು ಮಾಡಿದೆ. ಆದರೂ ಒಬ್ಬೇ ಒಬ್ಬ ಕನ್ನಡಿಗ ಆರ್ಸಿಬಿ ಸೇರಿಲ್ಲ. 22.50 ಕೋಟಿ ಹಣ ಉಳಿಸಿಕೊಂಡಿರೋ ಆರ್ಸಿಬಿ, ಇಂದು ಯಾವೆಲ್ಲಾ ಆಟಗಾರರನ್ನ ಖರೀದಿ ಮಾಡುತ್ತೆ.? ಕನ್ನಡಿಗರಿಗೆ ಮಣೆ ಹಾಕುತ್ತಾ? ಕಾದು ನೋಡೋಣ.
ಇದನ್ನೂ ಓದಿ:VIDEO: ಐಪಿಎಲ್ 2025: JIO ಮಾಕ್ ಆಕ್ಷನ್ನಲ್ಲಿ ಬರೋಬ್ಬರಿ 29.5 ಕೋಟಿಗೆ RCB ಪಾಲಾದ KL ರಾಹುಲ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್