ಆರ್​ಸಿಬಿಯಲ್ಲಿ ಈಗ ಮತ್ತೊಬ್ಬ ಕನ್ನಡಿಗ.. ಬ್ಯಾಟಿಂಗ್​ ವಿಭಾಗಕ್ಕೆ ಬಂದಿದೆ ಸೂಪರ್ ಪವರ್​..!

author-image
Ganesh
Updated On
ಮಯಾಂಕ್​​ರನ್ನೇ ಆರ್​ಸಿಬಿ ಸೆಲೆಕ್ಟ್ ಮಾಡಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..
Advertisment
  • ಕರ್ನಾಟಕ ಅಭಿಮಾನಿಗಳಿಂದ ಬೆಟ್ಟದಷ್ಟು ನಿರೀಕ್ಷೆ..
  • ಪಡಿಕ್ಕಲ್ ನಿರ್ಗಮನದೊಂದಿಗೆ ಮಯಾಂಕ್ ಎಂಟ್ರಿ
  • ಮಹಾರಾಜ ಟ್ರೋಫಿಯಲ್ಲಿ ಬೊಂಟಾಟ್ ಬ್ಯಾಟಿಂಗ್

ಕನ್ನಡಿಗ ದೇವದತ್​ ಪಡಿಕ್ಕಲ್ ನಿರ್ಗಮನದೊಂದಿಗೆ ಮಯಾಂಕ್, ಆರ್​ಸಿಬಿಗೆ ಎಂಟ್ರಿ ನೀಡಿದ್ದಾರೆ. ಮತ್ತೋರ್ವ ಕನ್ನಡಿಗನ ಎಂಟ್ರಿಯಿಂದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಖುಷಿಯ ಜೊತೆಗೆ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಇನ್ನು, ಮಯಾಂಕ್​ ಅಗರ್ವಾಲ್​​ ಮರಳಿ ಗೂಡು ಸೇರಿದ ಬೆನ್ನಲ್ಲೇ ನಾನಾ ಡಿಬೇಟ್​​ಗಳು, ಲಾಭ ನಷ್ಟದ ಚರ್ಚೆಗಳು ಶುರುವಾಗಿವೆ. 14 ವರ್ಷಗಳ ಕಾಲ ಐಪಿಎಲ್ ಆಡಿ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ರೂ, ಮೆಗಾ ಹರಾಜಿನಲ್ಲಿ ಕನ್ನಡಿಗ ಮಯಾಂಕ್ ಅನ್​ಸೋಲ್ಡ್​ ಆಗಿದ್ದರು. ಹರಾಜಿನಲ್ಲಿ ಅನ್​ಸೋಲ್ಡ್ ಆಗಿ ರಿಪ್ಲೇಸ್​ಮೆಂಟ್​ ಆಟಗಾರರಾಗಿ ಬಂದ ಆಟಗಾರರು ಸದ್ಯ ಐಪಿಎಲ್​ನಲ್ಲಿ ಅಬ್ಬರಿಸ್ತಿದ್ದಾರೆ.

ಇದನ್ನೂ ಓದಿ: IPL ಟೀಮ್​ ಓನರ್ ಇಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಚಿನ್ನ, ವಜ್ರ ಖಚಿತ ಆಭರಣಗಳು ದಾನ ​​

ಚೆನ್ನೈನ ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೇವಿಸ್, ಊವ್ರಿಲ್ ಪಟೇಲ್​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಇದೀಗ ಆರ್​​ಸಿಬಿಗೆ ರೀ ಎಂಟ್ರಿಯಾಗಿರೋ ಮಯಾಂಕ್​ ಮೇಲೂ ಅದೇ ನಿರೀಕ್ಷೆಯಿದೆ. ಕಳೆದ ಮಹಾರಾಜ ಟ್ರೋಫಿ, ವಿಜಯ್​ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದ ಮಯಾಂಕ್, ಮೆಗಾ ಹರಾಜಿನಲ್ಲಿ ಕಡೆಗಣಿಸಿದವರಿಗೆ ಬ್ಯಾಟ್​ನಿಂದ ಆನ್ಸರ್​ ಕೊಡ್ತಾರಾ.? ಆರ್​​ಸಿಬಿ ಭರವಸೆ ಉಳಿಸಿಕೊಳ್ತಾರಾ? ಕಾದು ನೋಡೋಣ.

ಇದನ್ನೂ ಓದಿ: ಇಂದು ಫ್ಯಾನ್ಸ್​ಗೆ ಸ್ಪೆಷಲ್ ಗಿಫ್ಟ್​ ಕೊಡ್ತಾರಾ ಕಿಂಗ್​ ಕೊಹ್ಲಿ.. ವಿರಾಟ್​ನ ಆ ಉಡುಗೊರೆ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment