/newsfirstlive-kannada/media/post_attachments/wp-content/uploads/2025/06/namma-metro8.jpg)
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಆವರಣದಲ್ಲಿ ನಡೆದ ಘೋರ ದುರಂತ ನೆನಪಿಸಿಕೊಂಡರೆ ಒಂದ ಕ್ಷಣ ಮೈ ಜುಮ್ ಅನ್ನುತ್ತೆ. ಅಷ್ಟರ ಮಟ್ಟಿಗೆ ಜನ ಸಾಗರ. ತಮ್ಮ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ನಾ ಮುಂದು, ತಾ ಮುಂದು ಅಂತ ಓಡಿದಕ್ಕೆ ದೊಡ್ಡ ದುರಂತವೇ ನಡೆದು ಹೋಗಿದೆ.
ಇದನ್ನೂ ಓದಿ: RCB ವಿಜಯೋತ್ಸವ, ಪ್ರಾಣ ಬಿಟ್ಟ ಅಭಿಮಾನಿಗಳು.. ಮಾತೇ ಬರ್ತಿಲ್ಲ, ವಿರಾಟ್ ಕೊಹ್ಲಿ ಸಂತಾಪ!
ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಐಪಿಎಲ್ ಟ್ರೋಫಿ ಗೆದ್ದಿದ್ದೇ ಗೆದ್ದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಆರ್ಸಿಬಿ ಅಭಿಮಾನಿಗಳಂತ ಖುಷಿ ಹೇಳ ತೀರದು. ಇದರ ಜೊತೆ ಟ್ರೋಫಿ ಗೆದ್ದ ಆರ್ಸಿಬಿ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬರುತ್ತಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಕಾಲು ಮನೆಯಲ್ಲಿ ನಿಲ್ಲಲಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ನಿನ್ನ ನಡೆದ ದುರಂತ.
ಹೌದು, ಯಾವಾಗ ಈ ವಿಚಾರ ಅಭಿಮಾನಿಗಳಿಗೆ ಗೊತ್ತಾಯ್ತೋ ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ನಿನ್ನೆ ಒಂದೇ ದಿನ ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ಬರೋಬ್ಬರಿ 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ಅಲ್ಲದೇ ನಮ್ಮ ಮಟ್ರೋದಲ್ಲಿ ಪ್ರಯಾಣಿಕರು ಹೆಚ್ಚಾಗುತ್ತಿದ್ದಂತೆ. ಟಿಕೆಟ್ ಇಲ್ಲ, NCMC ಕಾರ್ಡ್ ಇಲ್ಲ, ಟೋಕನ್ ಇಲ್ಲ ಹೀಗೆ ಸಿಕ್ಕ ಸಿಕ್ಕಂತೆ ಜಂಪ್ ಮಾಡಿ ಹೋಗಿದ್ದಾರೆ. ಮೆಟ್ರೋ ಪ್ರಯಾಣಿಕರು ಓಡಿ ಹೋಗುತ್ತಿರೋ ವಿಡಿಯೋಗಳನ್ನು ನೋಡಿದ್ರೆ ನಿಜಕ್ಕೂ ಮೈ ಜುಮ್ ಎನ್ನುವಂತಿದೆ.
View this post on Instagram
ಆದ್ರೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿದ್ದರು ದುರಂತ ನಡೆದೆ ಹೋಗುತ್ತಿತ್ತು. ಪ್ರಯಾಣಿಕರ ಹುಚ್ಚಾಟ, ಅತಿರೇಕಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ. ಮೆಟ್ರೋ ನಿಲ್ದಾಣದ ಒಳಗೆ ಹೋಗಲು ಜನ ನಾ ಮುಂದು ತಾ ಮುಂದು ಅಂತ ಸಿಕ್ಕ ಸಿಕ್ಕಂತೆ ಹಾರಿ ಹೋಗಿದ್ದಾರೆ. ಏಕಾಏಕಿ ಲಕ್ಷಾಂತರ ಪ್ರಯಾಣಿಕರನ್ನು ನಮ್ಮ ಮೆಟ್ರೋ ಸಿಬ್ಬಂದಿಯ ನಿಯಂತ್ರಣಕ್ಕೂ ಸಿಗಲಿಲ್ಲ. ಹೀಗಾಗಿ ನಿನ್ನೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಸಂಪೂರ್ಣ ಅದ್ವಾನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ