/newsfirstlive-kannada/media/post_attachments/wp-content/uploads/2025/05/VIRAT_KOHLI-4.jpg)
ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರ. ವಿದಾಯದ ಪಂದ್ಯವಿಲ್ಲದೇ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಸತತ 14 ವರ್ಷಗಳ ಕಾಲ ಟೆಸ್ಟ್ ವೃತ್ತಿ ಜೀವನದಲ್ಲಿ ಪಳಗಿದ್ದ ಕಿಂಗ್ ಕೊಹ್ಲಿ ಮೊನ್ನೆ ಮೊನ್ನೆ ಏಕಾಏಕಿ ನಿವೃತ್ತಿ ಘೋಷಣೆ ಮಾಡಿದರು. ಇದು ಅವರ ಅಭಿಮಾನಿಗಳಿಗೆ ಬೇಸರ ಸಂಗತಿ ಆಗಿದೆ. ಇದರಿಂದ ಕಿಂಗ್ ಕೊಹ್ಲಿಗೆ ಆರ್ಸಿಬಿ ಅಭಿಮಾನಿಗಳು ವಿಶೇಷ ಟ್ರೀಟ್ ಕೊಡಲು ಮುಂದಾಗಿದ್ದಾರೆ
ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ವಿರಾಟ್ ಕೊಹ್ಲಿಗೆ ವಿಶೇಷ ಗೌರವಯುತ ಬೀಳ್ಕೊಡುಗೆ ಕೊಡಲು ಆರ್ಸಿಬಿ ತಂಡದ ಫ್ಯಾನ್ಸ್ ಯೋಜನೆ ರೂಪಿಸಿದ್ದಾರೆ. ಶನಿವಾರ ಅಂದರೆ ಮೇ 17 ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ ಅಖಾಡಕ್ಕೆ ಧುಮಕಲಿದೆ. ಈ ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳು 18 ನಂಬರ್ ಇರುವ ವೈಟ್ ಜೆರ್ಸಿ ತೊಟ್ಟು ಬರುವಂತೆ ಅಭಿಯಾನ ಆರಂಭಿಸಲಾಗಿದೆ. ಒಂದು ವೇಳೆ 18 ನಂಬರ್ ಇಲ್ಲದಿದ್ದರೂ ಬಳಿ ಟೈಶರ್ಟ್ ಧರಿಸಿದ್ದರು ಸಾಕು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್ ಸ್ಲಾಟ್- 4ಗೆ ಯಾರು ಸಮರ್ಥ.. ಯುವ ಕನ್ನಡಿಗನಿಗೆ ಸಿಗುತ್ತಾ ಚಾನ್ಸ್?
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಅಭಿಯಾನ ಜೋರು ಸೌಂಡ್ ಮಾಡುತ್ತಿದೆ. ಈ ಮೂಲಕ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯೋ ಪಂದ್ಯದಲ್ಲಿ ಕೊಹ್ಲಿಗೆ ಗೌರವ ಸಲ್ಲಿಸಲು ತೀರ್ಮಾನಿಸಿದಂತೆ ಆಗಿದೆ. ಇದಕ್ಕೆ ಉತ್ತಮ ಸ್ಪಂದನೆ ಕೂಡ ದೊಡ್ಡ ಮಟ್ಟದಲ್ಲಿ ಸಿಗುತ್ತಿದೆ. ಅಂದಿನ ಪಂದ್ಯಕ್ಕೆ ಕೆಂಪು ಉಡುಪಿನ ಬದಲು ಬಳಿ ಬಣ್ಣದ ಜೆರ್ಸಿ, ಪ್ಯಾಂಟ್ ಧರಿಸಿಕೊಂಡು ಬರುವಂತೆ ಮನವಿ ಮಾಡಲಾಗಿದೆ. ಮೇ 17 ರಂದು ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಬಿಳಿ ಜೆರ್ಸಿ ಮಾರಾಟ ಮಾಡಲಾಗುತ್ತಿರುತ್ತದೆ ಎಂದು ತಿಳಿಸಲಾಗಿದೆ.
Dear @RCBTweets , This is How chinnaswamy should look on 17 May.
Please make it happen 🙏.#ViratKohli𓃵pic.twitter.com/zn5wNetDwb— Kaisar (@Kaisarisbest)
Dear @RCBTweets , This is How chinnaswamy should look on 17 May.
Please make it happen 🙏.#ViratKohli𓃵pic.twitter.com/zn5wNetDwb— Kaisar (@Jhelum_Roya) May 13, 2025
">May 13, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ