Advertisment

ಅಬ್ಬಾ.. 100 ಅಡಿ ಎತ್ತರದ ತೇರಿನ ಮೇಲೆ RCB ಫ್ಯಾನ್ಸ್‌; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

author-image
admin
Updated On
ಅಬ್ಬಾ.. 100 ಅಡಿ ಎತ್ತರದ ತೇರಿನ ಮೇಲೆ RCB ಫ್ಯಾನ್ಸ್‌; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
Advertisment
  • ಕೋಲ್ಕತ್ತಾದಲ್ಲಿ ಇಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಂದ್ಯ
  • 100 ಅಡಿಗೂ ಎತ್ತರವಾದ ಮದ್ದೂರಮ್ಮ ದೇವಿಯ ಜಾತ್ರೆ ಇದು
  • 20 ರಿಂದ 25 ಅಂತಸ್ತುಗಳಿರುವ 100 ಅಡಿಗೂ ಹೆಚ್ಚು ಎತ್ತರದ ತೇರು

ಈ ಸಲ ಕಪ್ ನಮ್ದೇ ಗುರು.. 10 ಅಲ್ಲ 18 ಸೀಸನ್ ಆದ್ರೂ RCB ಫ್ಯಾನ್ಸ್‌ಗಳ ಈ ನಂಬಿಕೆ ಸ್ವಲ್ಪವೂ ಕಮ್ಮಿ ಆಗಿಲ್ಲ. ಇವತ್ತು IPLನ 18ನೇ ಆವೃತ್ತಿ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ.

Advertisment

publive-image

ಐಪಿಎಲ್‌ ರೋಚಕ ಹಣಾಹಣಿಗೂ ಮುನ್ನ RCB ಫ್ಯಾನ್ಸ್ ತಮ್ಮ ಅಭಿಮಾನ ಎಂಥದ್ದು ಅನ್ನೋದನ್ನ ಸಾರುತ್ತಿದ್ದಾರೆ. RCB ಕ್ರೇಜ್‌, RCB ಅಭಿಮಾನಿಗಳು ಅಂದ್ರೆ ಸುಮ್ನೆ ಅಲ್ಲವೇ ಅಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಇದನ್ನೂ ಓದಿ: RCB ಪ್ಲೇಯಿಂಗ್-11; ರಜತ್ ಪ್ರಕಟಿಸುವ ಬಲಿಷ್ಠ ತಂಡಕ್ಕೆ ಆಯ್ಕೆ ಆಗುವ ಸ್ಟಾರ್​​ಗಳ ಲಿಸ್ಟ್..! 

ಸುಮಾರು 100 ಅಡಿಗೂ ಎತ್ತರವಾದ ಮದ್ದೂರಮ್ಮ ದೇವಿಯ ಜಾತ್ರೆ ತೇರಿನ ಮೇಲೆ RCB ಫ್ಯಾನ್ಸ್ ನಿಂತು ತಮ್ಮ ಅಭಿಮಾನ ಮೆರೆದಿದ್ದಾರೆ. RCB ಅಭಿಮಾನಿಗಳ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.

Advertisment

publive-image

ಯಾವುದು ಈ ಜಾತ್ರೆ? ಇದರ ಇತಿಹಾಸ ಏನು?
ಬೆಂಗಳೂರಿನಿಂದ ಕೇವಲ 15 ಕಿಲೋ ಮೀಟರ್ ದೂರದಲ್ಲಿ ಈ ಜಾತ್ರೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹುಸ್ಕೂರು ಗ್ರಾಮಸ್ಥರು ಸೂಕ್ತದಿನವನ್ನು ಗೊತ್ತುಪಡಿಸಿ, ಈ ರಥೋತ್ಸವವನ್ನು ಸಂಘಟಿಸುತ್ತಾರೆ.

ಜನರಿಗೆ, ಜಾನುವಾರುಗಳಿಗೆ ಕಾಯಿಲೆಗಳು ಬರದಿರುವಂತೆ ಗ್ರಾಮದೇವತೆಯ ರಕ್ಷಣೆಯನ್ನು ಕೋರಿ, ಹಿಂದಿನಿಂದಲೂ ಆಚರಣೆಯಲ್ಲಿರುವ ಈ ಜಾತ್ರೆ, ಇಂದಿಗೂ ನಡೆದುಕೊಂಡು ಬರುತ್ತಿದೆ. ಹಿರಿಯರು ಹೇಳುವಂತೆ ಈ ಜಾತ್ರೆ ಕನ್ನಡನಾಡಿನ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ.

publive-image

ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿಯ ಜಾತ್ರೆ ಈ ಬಾರಿ ಮಾರ್ಚ್ 21ರಿಂದ 25ರವರೆಗೆ ನಡೆಯಲಿದೆ. 20 ರಿಂದ 25 ಅಂತಸ್ತುಗಳಿರುವ 100 ಅಡಿಗೂ ಹೆಚ್ಚು ಎತ್ತರದ ತೇರಿನ ಮೇಲೆ RCB ಅಭಿಮಾನಿಗಳು ವಿಡಿಯೋ ಮಾಡಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದ್ದಾರೆ.

Advertisment


">March 22, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment