/newsfirstlive-kannada/media/post_attachments/wp-content/uploads/2025/05/RCB_GT.jpg)
ಐಪಿಎಲ್ ಪ್ಲೇ-ಆಫ್ ಪಂದ್ಯಗಳು ಮೇ 29 ರಿಂದ ಆರಂಭವಾಗಲಿವೆ. ಈಗಾಗಲೇ ಪ್ಲೇ-ಆಫ್ ಪ್ರವೇಶ ಮಾಡಿರುವ ನಾಲ್ಕು ತಂಡಗಳು ಮೊದಲ ಎರಡು ಸ್ಥಾನಗಳಿಗಾಗಿ ಪೈಪೋಟಿ ನಡೆಸ್ತಿವೆ.
ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್, ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಗಳು ಪ್ಲೇ-ಆಫ್ನಲ್ಲಿ ಆಡಲಿವೆ. ಪ್ಲೇ-ಆಫ್ನಲ್ಲಿ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳಿಗೆ, ಫೈನಲ್ ಪ್ರವೇಶಕ್ಕೆ ಎರಡು ಅವಕಾಶಗಳು ಸಿಗಲಿವೆ. ಹೀಗಾಗಿ ನಾಲ್ಕು ತಂಡಗಳ ಕಣ್ಣು, ಮೊದಲ ಎರಡು ಸ್ಥಾನಗಳ ಮೇಲಿದೆ.
ಆರ್ಸಿಬಿಗೆ ಆಘಾತ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಎರಡು ಸ್ಥಾನದಲ್ಲಿರಲಿದೆ ಎಂದು ಹೇಳಲಾಗಿತ್ತು. ಆದರೆ ನಿನ್ನೆಯ ದಿನ ಹೈದರಾಬಾದ್ ವಿರುದ್ಧ ಸೋಲುವ ಮೂಲಕ ಆಘಾತ ಅನುಭವಿಸಿದೆ. ಎರಡನೇ ಸ್ಥಾನದಲ್ಲಿದ್ದ ಆರ್ಸಿಬಿ, ಪಾಯಿಂಟ್ಸ್ ಪಟ್ಟಿಯಿಂದ ದಿಢೀರ್ ಕುಸಿದಿದ್ದು, ಮೂರನೇ ಸ್ಥಾನಕ್ಕೆ ಬಂದಿದೆ.
ಇದನ್ನೂ ಓದಿ: ಶುಭ್ಮನ್ ಗಿಲ್‌ಗೆ ನಾಯಕನ ಪಟ್ಟ.. ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ಯಾರಿಗೆಲ್ಲಾ ಚಾನ್ಸ್?
ಇನ್ನು, ಗುಜರಾತ್ ಟೈಟನ್ಸ್ ಮೊದಲ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ 18 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ಗೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ನಾಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದರೆ, ಗುಜರಾತ್ನ ಪಾಯಿಂಟ್ಸ್ 20 ಆಗಲಿದೆ. ಆ ಮೂಲಕ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಕ್ಕಾ ಆಗಲಿದೆ.
ಮತ್ತೊಂದು ಕಡೆ ಎರಡನೇ ಸ್ಥಾನದಲ್ಲಿರುವ ಪಂಜಾಬ್ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಈ ಎರಡೂ ಪಂದ್ಯಗಳನ್ನ ಪಂಜಾಬ್ ಗೆದ್ದರೆ, 21 ಅಂಕಗಳನ್ನು ಪಡೆಯಲಿದೆ. 21 ಅಂಕ ಪಡೆಯುವ ಮೂಲಕ ಮೊದಲ ಸ್ಥಾನಕ್ಕೆ ಏರಿಲಿದೆ. ಒಂದು ಪಂದ್ಯ ಮಾತ್ರ ಗೆದ್ದರೆ, 19 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸಲಿದೆ.
ಇದನ್ನೂ ಓದಿ: ತಮನ್ನಾ ಭಾಟಿಯಾ ವಿರುದ್ಧ ತಿರುಗಿಬಿದ್ದ ಸ್ಯಾಂಡಲ್ವುಡ್ ತಾರೆಯರು; ತುಪ್ಪದ ಬೆಡಗಿ ರಾಗಿಣಿ ಏನಂದ್ರು?
ಇನ್ನು, ಆರ್ಸಿಬಿಗೆ ಒಂದು ಪಂದ್ಯ ಮಾತ್ರ ಇದೆ. ಈ ಒಂದು ಪಂದ್ಯವನ್ನು ಆರ್ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಗೆದ್ದರೆ ಮಾತ್ರ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಸಿಗುವ ಅವಕಾಶ ಇದೆ. ಅದು ಕೂಡ ಉಳಿದ ತಂಡಗಳ ಸೋಲು, ಗೆಲುವಿನ ಆಧಾರದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಿನ್ನೆಯ ದಿನ ಹೈದರಾಬಾದ್ ವಿರುದ್ಧ ಸೋಲುವ ಮೂಲಕ ಫೈನಲ್ಗೆ ಹೋಗಲು ಇದ್ದ ಎರಡು ದಾರಿಗಳನ್ನು ಕಳೆದುಕೊಳ್ತಾ ಎಂಬ ಪ್ರಶ್ನೆ ಎದ್ದಿದೆ. ಅದೇ ರೀತಿ ಪಾಯಿಂಟ್ಸ್ ಪಟ್ಟಿಯಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಕೂಡ, ಮೊದಲ ಎರಡು ಸ್ಥಾನದ ಆಕಾಂಕ್ಷಿ ಆಗಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ.. ಬಲಿಷ್ಠ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್