/newsfirstlive-kannada/media/post_attachments/wp-content/uploads/2025/05/KOHLI_MR_IPL.jpg)
ಮೇ 23 ರಂದು ಆರ್ಸಿಬಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಟವಾಡಿತು. ಈ ವೇಳೆ ಹೈದರಾಬಾದ್ ತಂಡವು ಆರ್ಸಿಬಿ ವಿರುದ್ಧ 42 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಸೋಲಿನ ಆಘಾತದಲ್ಲಿ ಆರ್ಸಿಬಿಗೆ ದೊಡ್ಡ ಆಘಾತ ಆಯಿತು. ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿಗೆ ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಕುಸಿಯಿತು. ಜೊತೆಗೆ ಲೀಗ್ ಹಂತದಲ್ಲಿ ಮತ್ತೊಂದು ಸೋಲು ಕಂಡಿತ್ತು. ಇದೀಗ ಬಿಸಿಸಿಐನ ಕೆಂಗಣ್ಣಿಗೂ ಆರ್ಸಿಬಿ ಕಾರಣವಾಗಿದೆ.
ಇದನ್ನೂ ಓದಿ: PF ಇರೋರಿಗೆ ಗುಡ್ನ್ಯೂಸ್.. ಬಡ್ಡಿ ದರ ನಿಗದಿ ಮಾಡಿದ ಕೇಂದ್ರ ಸರ್ಕಾರ
ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಬೌಲಿಂಗ್ ಮುಗಿಸದ ಕಾರಣ ಆರ್ಸಿಬಿ ನಾಯಕ ರಜತ್ಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆರ್ಸಿಬಿ ಈ ಬಾರಿ 2 ಸಲ ನಿಧಾನಗತಿ ಬೌಲಿಂಗ್ ಮಾಡಿದೆ. ಹೀಗಾಗಿ ಕೊಹ್ಲಿ ಸೇರಿ ಎಲ್ಲಾ ಆಟಗಾರರಿಗೂ ತಲಾ 6 ಲಕ್ಷ ಅಥವಾ ಪಂದ್ಯದ ಸಂಭಾವನೆಯ ಶೇ 25 ರಷ್ಟು ದಂದ ವಿಧಿಸಿದೆ.
ಸದ್ಯ ಆರ್ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯ ಇದೆ. ಅದರ ವಿರುದ್ಧ ಆರ್ಸಿಬಿ ಗೆದ್ದರೆ, ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಯಾವುದಾದರೂ ಒಂದನ್ನ ಅಲಂಕರಿಸುವ ಸಾಧ್ಯತೆ ಇದೆ. ಆದರೂ, ಉಳಿದ ತಂಡಗಳ ಸೋಲು, ಗೆಲುವಿನ ಆಧಾರದ ಮೇಲೆ ಅವಲಂಬಿತವಾಗಿರಲಿದೆ.
ಇದನ್ನೂ ಓದಿ: ಅಯ್ಯರ್ ಪ್ಲಾನ್ ಉಲ್ಟಾ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್.. RCB, GTಗೆ ಇನ್ನೊಂದು ಚಾನ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ