ಚಿನ್ನಸ್ವಾಮಿಯಲ್ಲಿ RCBಗೆ ಮತ್ತೆ ಕೈ ಕೊಟ್ಟ ಟಾಸ್​.. ರಜತ್ ಪಾಟಿದಾರ್​​ ನೇತೃತ್ವದ ಬೆಂಗಳೂರು ಟೀಮ್ ಹೇಗಿದೆ?

author-image
Bheemappa
Updated On
RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಕಿಂಗ್ ನ್ಯೂಸ್..!
Advertisment
  • ಬೆಂಗಳೂರಿನಲ್ಲಿ ನಡೆಯುತ್ತಿರುವ 24ನೇ ಐಪಿಎಲ್ ಪಂದ್ಯ
  • ಡೆಲ್ಲಿ ಕ್ಯಾಪಿಟಲ್ಸ್​ಗೆ ಮೊದಲ ಸೋಲು ಉಣಿಸುತ್ತಾ ಆರ್​ಸಿಬಿ?
  • ಪಡಿಕ್ಕಲ್, ರಜತ್ ಪಾಟಿದಾರ್ RCBಯ ಬ್ಯಾಟಿಂಗ್ ಶಕ್ತಿ

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್​ಗೆ ತವರಿನಲ್ಲಿ ಮತ್ತೆ ಟಾಸ್ ಕೈಕೊಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಆರ್​​​ಸಿಬಿ ಮೊದಲ ಬ್ಯಾಟಿಂಗ್ ಮಾಡಲಿದೆ.

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಅವರು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಆರ್​ಸಿಬಿ ಟೀಮ್ ಮೊದಲ ಬ್ಯಾಟಿಂಗ್ ಮಾಡಲಿದ್ದು ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಎಂದಿನಂತೆ ಓಪನರ್ ಆಗಿ ಕ್ರೀಸ್​ಗೆ ಬರಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ ಬ್ಯಾಟಿಂಗ್ ತಂಡಕ್ಕೆ ಬಹುದೊಡ್ಡ ಶಕ್ತಿಯಾಗಿರುತ್ತದೆ.

ಇದನ್ನೂ ಓದಿ‘ಅದು ಏನೋ ಗೊತ್ತಿಲ್ಲ, RCB ಅಂದ್ರೆ ನಮ್ಮ ಜೀವ, ಪ್ರಾಣ’.. ನೆಚ್ಚಿನ ಟೀಮ್ ಬಗ್ಗೆ ಶಿವಣ್ಣ ಹೇಳಿದ್ದೇನು?

publive-image

ವಿಕೆಟ್​ ಕೀಪರ್ ಕಮ್ ಬ್ಯಾಟ್ಸ್​ಮನ್ ಆಗಿ ಜಿತೇಶ್ ಶರ್ಮಾ ಟೀಮ್​ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಪಂದ್ಯದಲ್ಲಿ ನಾಯಕ ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಅಬ್ಬರದಿಂದ ಆರ್​ಸಿಬಿ ದೊಡ್ಡ ಮೊತ್ತದ ರನ್​ ಗಳಿಸಿತ್ತು. ಫಿನಿಸಿಂಗ್​ ಟಚ್​ನಲ್ಲಿ ಲೈಮ್ ಲಿವಿಂಗ್​ಸ್ಟನ್, ಟಿಮ್ ಡೇವಿಡ್, ಜಿತೇಶ್​ ಶರ್ಮಾ ಬ್ಯಾಟಿಂಗ್ ತಂಡದ ಗತಿಯನ್ನೇ ಬದಲಿಸುತ್ತದೆ.

ಆಲೌರೌಂಡರ್ ಆಗಿ ಲೈಮ್ ಲಿವಿಂಗ್​ಸ್ಟನ್, ಕೃನಾಲ್ ಪಾಂಡ್ಯ ಅವರ ಬ್ಯಾಟಿಂಗ್, ಬೌಲಿಂಗ್ ತಂಡದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ. ಭುವನೇಶ್ವರ್ ಹಾಗೂ ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್ ಆರ್​ಸಿಬಿಯ ಬೌಲಿಂಗ್ ಬಲವಾಗಿದ್ದಾರೆ. ಎದುರಾಳಿ ತಂಡ ಡೆಲ್ಲಿ ಕ್ಯಾಪಿಟಲ್ಸ್​ ಕೂಡ ಬಲಿಷ್ಠವಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಒಳ್ಳೆಯ ಪಾರ್ಫನಲ್ಲಿದ್ದು ಇಂದು ಅವರ ಬ್ಯಾಟಿಂಗ್ ಬಲ ಮತ್ತಷ್ಟು ಶಕ್ತಿಯಾಗಿ ಪರಿಣಮಿಸಬಹುದು. ಆರ್​ಸಿಬಿಯ ಮಾಜಿ ಕ್ಯಾಪ್ಟನ್ ಆಗಿದ್ದ ಫಾಫ್​ ಡುಪ್ಲೆಸ್ಸಿಗೆ ಚಿನ್ನಸ್ವಾಮಿ ಸ್ಟೇಡಿಯಂನ ಅಣು ಅಣುವು ಗೊತ್ತಿದ್ದರಿಂದ ಫಾಫ್​ ಬ್ಯಾಟಿಂಗ್​ ಕೂಡ ಆರ್​ಸಿಬಿ ಮೇಲೆ ಪರಿಣಾಮ ಬೀರಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11

ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment