/newsfirstlive-kannada/media/post_attachments/wp-content/uploads/2024/04/will-jacks.jpg)
ಗೆಲ್ಲೋ ಕುದುರೆಯನ್ನ ರೇಸ್ಗೆ ಬಿಡ್ತಿಲ್ಲ. ರೇಸ್ಗೆ ಬಿಡ್ತಿರೋ ಕುದುರೆಗಳು ಓಡ್ತಿಲ್ಲ. ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ.. ಈ ಗಾದೆ ಮಾತು ನಮ್ಮ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಸಖತ್ ಆಗಿ ಸೂಟ್ ಆಗುತ್ತದೆ.
ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಆರ್ಸಿಬಿ, ಗೆಲುವಿನ ಟ್ರ್ಯಾಕ್ಗೆ ಮರಳಲು ಹರಸಾಹಸ ಮಾಡ್ತಿದೆ. ಟೀಮ್ನಲ್ಲಿ ಕೆಲಸಕ್ಕೆ ಬಾರದ ಬದಲಾವಣೆಯನ್ನ ಮಾಡ್ತಿದೆ. ಇದನ್ನ ನೋಡಿದ್ರೆ ಆರ್ಸಿಬಿ ಗೆಲ್ಲೋದಕ್ಕಿಂತ, ಇನ್ನೆಷ್ಟು ಪಂದ್ಯಗಳನ್ನ ಸೋಲಲು ಹೊರಟಿದೆ ಎಂಬ ಪ್ರಶ್ನೆ ಹುಟ್ಟದೇ ಇರಲ್ಲ.
ಮ್ಯಾಚ್ ವಿನ್ನರ್ ಇಟ್ಟುಕೊಂಡು ಊರೆಲ್ಲಾ ಹುಡುಕಾಟ!
ಪಂದ್ಯದಿಂದ ಪಂದ್ಯಕ್ಕೆ ಆರ್ಸಿಬಿ, ಪ್ಲೇಯಿಂಗ್ ಇಲೆವೆನ್ ಚೇಂಜ್ ಆಗ್ತಿದೆ. ಡಮ್ಮಿ ಪ್ಲೇಯರ್ಗಳಿಗೆಲ್ಲಾ ಚಾನ್ಸ್ ಮೇಲೆ ಚಾನ್ಸ್ ನೀಡ್ತಿದೆ. ಆದ್ರೆ, ವಿಲ್ ಜಾಕ್ಸ್ ಎಂಬ ವಿಧ್ವಂಸಕ ಆಟಗಾರನನ್ನ ಮಾತ್ರ, ಬೆಂಚ್ಗೆ ಸೀಮಿತಗೊಳಿಸಿದೆ. ಹೀಗೆ ಬೆಂಚ್ ಬಿಸಿ ಮಾಡಿಸಿದ್ದಕ್ಕೇನಾ ಹರಾಜಿನಲ್ಲಿ 3.20 ಕೋಟಿ ನೀಡಿ ಖರೀದಿಸಿದ್ದು ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ:ಯುಗಾದಿ ಹಬ್ಬದಂದೇ ದಾರುಣ ಘಟನೆ; ಬೈಕ್ ಅಪಘಾತದಲ್ಲಿ ತಂದೆ-ಮಗ ದಾರುಣ ಸಾವು
ಸೋಲಿನ ಸುಳಿಯಲ್ಲಿದ್ರೂ ವಿಲ್ ಜಾಕ್ಸ್ನ ಯಾಕೆ ಆಡಿಸ್ತಿಲ್ಲ..?
ತಂಡದಲ್ಲಿ ವಿರಾಟ್ ಏಕಾಂಗಿ ಹೋರಾಟ ನಡೆಸ್ತಿದ್ದಾರೆ. ಸೂಕ್ತ ಜೊತೆಗಾರನಿಲ್ಲದೆ, ಒದ್ದಾಡ್ತಿದ್ದಾರೆ. ಇಂಥಾ ಸಂಕಷ್ಟದಲ್ಲೂ ಆರ್ಸಿಬಿ, ವಿಲ್ ಜಾಕ್ಸ್ನ ಆಡಿಸ್ತಿಲ್ಲ. ಮುಂದಿನ ದಿನಗಳಲ್ಲಿ ಆಡಿಸುತ್ತಾ ಅಂದ್ರೆ, ಕ್ಲಾರಿಟಿಯೂ ಇಲ್ಲ. ಇದೆಲ್ಲಾ ನೋಡಿದ್ರೆ, ವಿಲ್ ಜಾಕ್ಸ್ನ ಹಿಸ್ಟರಿ ಆರ್ಸಿಬಿ ಮರೆತಿದ್ಯಾ ಎಂಬ ಡೌಟ್ ಬರೋದ್ರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಕೊಟ್ಟ ಕುದುರೆ ಏರಲಾರದೇ ಸೋತ ಖ್ಯಾತನಾಮರು, RCB ಹ್ಯಾಟ್ರಿಕ್ ಸೋಲಿಗೆ ಕಾರಣ ಬಯಲು..!
ಸ್ಫೋಟಕ ಆಟಕ್ಕೆ ಹೆಸರುವಾಸಿ ಈ ವಿಲ್ ಜಾಕ್ಸ್..!
ತಂಡದಲ್ಲಿ ಬೆಂಚ್ ಕಾಯ್ತಿರುವ ವಿಲ್ ಜಾಕ್ಸ್, ಅಂತಿಂಥ ಆಟಗಾರನಲ್ಲ. ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ವಿಲ್ ಜಾಕ್ಸ್, ಬೌಂಡರಿ, ಸಿಕ್ಸರ್ಗಳ ಸುನಾಮಿಯನ್ನೇ ಸೃಷ್ಟಿಸಬಲ್ಲರು. ಇದಕ್ಕೆ ಸಾಕ್ಷಿ ಟಿ20 ಲೀಗ್ನಲ್ಲಿ ಕೇವಲ 25 ಎಸೆತಗಳಲ್ಲೇ ಸೆಂಚುರಿ ದಾಖಲೆ. ಇದಿಷ್ಟೇ ಅಲ್ಲ. ಸೌತ್ ಆಫ್ರಿಕನ್ ಟಿ20, ಟಿ20 ಬ್ಲಾಸ್ಟ್, ಬಾಂಗ್ಲಾ ಪ್ರಿಮೀಯರ್ ಲೀಗ್ನಲ್ಲಿ ಈತನ ದೈತ್ಯ ಬ್ಯಾಟಿಂಗ್ ಎಲ್ಲರ ನಿದ್ದೆ ಗೆಡಿಸಿತ್ತು.
2023-24ರ ಟಿ20 ಲೀಗ್ಗಳಲ್ಲಿ ವಿಲ್ ಜಾಕ್ಸ್ ಬ್ಯಾಟಿಂಗ್
2023 ಸೌತ್ ಆಫ್ರಿಕನ್ ಟಿ20 ಲೀಗ್ನಲ್ಲಿ 201.49ರ ಸ್ಟ್ರೈಕ್ರೇಟ್ನಲ್ಲಿ 270 ರನ್ ಸಿಡಿಸಿದ್ದ ವಿಲ್ ಜಾಕ್ಸ್, ಟಿ20 ಬ್ಲಾಸ್ಟ್ನಲ್ಲಿ 157.18ರ ಸ್ಟ್ರೈಕ್ರೇಟ್ನಲ್ಲಿ 558 ರನ್ ಕೊಳ್ಳೆ ಹೊಡೆದಿದ್ರು. ನಂತರ 2024ರ ಸೌತ್ ಆಫ್ರಿಕನ್ ಟಿ20 ಲೀಗ್ನಲ್ಲಿ 180.15ರ ಸ್ಟ್ರೈಕ್ರೇಟ್ನಲ್ಲಿ 245 ರನ್ ಚಚ್ಚಿದ್ರು.
ಇದನ್ನೂ ಓದಿ: ಸಿಎಸ್ಕೆ ತಂಡದ ರಚಿನ್ ರವೀಂದ್ರ ಜೀವದ ಗೆಳತಿ ಬಗ್ಗೆ ನಿಮಗೆ ಗೊತ್ತಾ..? ಇಂಟರೆಸ್ಟಿಂಗ್ ಸ್ಟೋರಿ..!
ಬಾಂಗ್ಲಾ ಪ್ರಿಮೀಯರ್ ಲೀಗ್ನಲ್ಲೂ ಅದ್ಭುತ ಆಟವಾಡಿದ್ದ ವಿಲ್ ಜಾಕ್ಸ್, ಇಂಡಿಯನ್ ಕಂಡೀಷನ್ಸ್ಗೂ ಹೇಳಿ ಮಾಡಿಸಿರೋ ಆಟಗಾರ. ಇದಿಷ್ಟೇ ಅಲ್ಲ. ಆಫ್ ಸ್ಪಿನ್ನರ್ ಆಗಿಯೂ ಎಫೆಕ್ಟೀವ್ ಪರ್ಫಾಮೆನ್ಸ್ ನೀಡಿರುವ ಜಾಕ್ಸ್, 7ರ ಏಕಾನಮಿಯಲ್ಲಿ ರನ್ ನೀಡಿ 26 ವಿಕೆಟ್ ಉರುಳಿಸಿದ್ದಾರೆ. ಓಪನರ್ ಟು ಮಿಡಲ್ ಆರ್ಡರ್ ತನಕ ಬ್ಯಾಟ್ ಬೀಸುವ ಈತ, ಬಿಗ್ ಮ್ಯಾಚ್ ವಿನ್ನರ್ ಕೂಡ ಆಗಿದ್ದಾರೆ. ಆದ್ರೆ, ಇಂಥಹ ಮ್ಯಾಚ್ ವಿನ್ನರ್ ಆಲ್ರೌಂಡರ್ಗೆ ಮುಂದಿನ ದಿನಗಳಲ್ಲಿ ಚಾನ್ಸ್ ನೀಡದಿದ್ರೆ, ಆರ್ಸಿಬಿ ಪಾತಾಳಕ್ಕೆ ಕುಸಿಯೋದು ಗ್ಯಾರಂಟಿ.
ಇದನ್ನೂ ಓದಿ:ಫಾಫ್ಗೆ ಕೊಕ್, ಕೊಹ್ಲಿಗೆ ಮತ್ತೆ ನಾಯಕನ ಪಟ್ಟ? ಬಿಗ್ ಡಿಸಿಷನ್ ತೆಗೆದುಕೊಳ್ಳಲು ಮುಂದಾಗುತ್ತಾ ಫ್ರಾಂಚೈಸಿ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್