/newsfirstlive-kannada/media/post_attachments/wp-content/uploads/2025/02/Varun_Chakaravarthy_1.jpg)
33 ವರ್ಷ ಅಂದ್ರೆ ಕ್ರಿಕೆಟರ್ಗಳ ರಿಟೈರ್ಮೆಂಟ್ ವಯಸ್ಸು ಅದು. ಆದ್ರೆ, ಈ ವಯಸ್ಸಿನಲ್ಲೂ ಏಕದಿನ ತಂಡಕ್ಕೆ ಡೆಬ್ಯೂ ಮಾಡೋದು ಅಂದ್ರೆ, ಅದು ನಿಜಕ್ಕೂ ಸೆನ್ಸೇಷನ್. ಹೀಗೆ ಡೆಬ್ಯೂ ಮಾಡಿದ ವರುಣ್ ಚಕ್ರವರ್ತಿ, ಈಗ ವಿಶ್ವ ಕ್ರಿಕೆಟ್ನಲ್ಲಿ ಇತಿಹಾಸ ಬರೆದಿದ್ದಾರೆ. ಆದ್ರೆ, ಈ ಇತಿಹಾಸದ ಹಿಂದೆ ಭಾರೀ ಕಷ್ಟದ ದಿನಗಳು ಇವೆ.
ವರುಣ್ ಚಕ್ರವರ್ತಿ ಇವರು ಟೀಮ್ ಇಂಡಿಯಾದ ಸ್ಪಿನ್ ಚಕ್ರವರ್ತಿ. ವಯಸ್ಸು 33 ವರ್ಷ, 165 ದಿನ. ಆದ್ರೆ, ಇದೇ ವರುಣ್ ಚಕ್ರವರ್ತಿ, ಈಗ ಟೀಮ್ ಇಂಡಿಯಾ ಏಕದಿನಕ್ಕೆ ಡೆಬ್ಯೂ ಮಾಡಿದ್ದಾರೆ. ರವೀಂದ್ರ ಜಡೇಜಾರಿಂದ ಕ್ಯಾಪ್ ಪಡೆಯುವುದರೊಂದಿಗೆ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ ವರುಣ್, ಟೀಮ್ ಇಂಡಿಯಾ ಪರ ಡೆಬ್ಯೂ ಮಾಡಿದ 2ನೇ ಹಿರಿಯ ಆಟಗಾರ ಎಂಬ ವಿಶೇಷ ಇತಿಹಾಸ ಬರೆದಿದ್ದಾರೆ.
ಯುವ ಆಟಗಾರರ ನಡುವೆ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಟೀಮ್ ಇಂಡಿಯಾದಲ್ಲಿದೆ. ಅಂತದರಲ್ಲಿ ವರುಣ್ ಚಕ್ರವರ್ತಿ ಹಿರಿಯ ಆಟಗಾರನಾಗಿ ಡೆಬ್ಯೂ ಮಾಡಿದ್ದಾರೆ. ಅಂದ್ಹಾಗೆ ಈ ಡೆಬ್ಯೂ ಭಾಗ್ಯ ಸುಖಾಸುಮ್ಮನೇ ಬಂದಿದ್ದಲ್ಲ. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯ ಯಶಸ್ಸಿನ ಕಥೆ ನಿಜಕ್ಕೂ ರೋಚಕ, ಸ್ಪೂರ್ತಿದಾಯಕ.
ಜರ್ನಿಯಲ್ಲಿ ಚಕ್ರವರ್ತಿಯದ್ದು ಹಲವು ಅವತಾರ.!
ಕ್ರಿಕೆಟರ್ಗಳ ಜೀವನ ಶುರುವಾಗೋದೆ ಟೆನ್ನಿಸ್ ಬಾಲ್ನಿಂದ. ಇದೇ ಕ್ಯಾಟಗೆರಿಯಲ್ಲೇ ಕ್ರಿಕೆಟ್ ಶುರು ಮಾಡಿದ್ದ ವರುಣ್ ತುತ್ತು ಅನ್ನಕ್ಕೂ ಪರದಾಡಿದ್ದಿದೆ. ನಡೆದಾಡಲು ಸರಿಯಾದ ಚಪ್ಪಲಿಯಿಲ್ಲದೆ ಪರದಾಡಿದ ದಿನಗಳಿವೆ.
ಅಂದು ಹರಿದ ಚಪ್ಪಲಿಯನ್ನ ತಾನೇ ಸರಿ ಮಾಡಿಕೊಂಡು ಕ್ರಿಕೆಟ್ ಅಂಗಳಕ್ಕಿಳಿದಿದ್ದ ವರುಣ್ ಚಕ್ರವರ್ತಿ ಬಳಿ ಈಗ ದುಬಾರಿ ಮೌಲ್ಯದ ಶೂಗಳ ಕಲೆಕ್ಷನ್ ಇದೆ. ಈ ಯಶಸ್ಸಿನ ಹಾದಿಯಲ್ಲಿ ಚಕ್ರವರ್ತಿಯದ್ದು ಹಲವು ಅವತಾರ. ಸ್ಕೂಲ್ ಕ್ರಿಕೆಟ್ನಲ್ಲಿ ಫಾಸ್ಟ್ ಬೌಲರ್ ಆಗಿದ್ದ ವರುಣ್, ನಂತರ ವಿಕೆಟ್ ಕೀಪರ್ ಆಗಿ ಅವತಾರ ಎತ್ತಿದ್ದರು. ವಿದ್ಯಾಭ್ಯಾಸದ ಕಾರಣಕ್ಕೆ ಕಾಲೇಜು ದಿನಗಳಲ್ಲಿ ಕ್ರಿಕೆಟ್ನಿಂದ ದೂರವಾಗಿದ್ದ ವರುಣ್, ಮತ್ತೆ ಟೆನ್ನಿಸ್ ಬಾಲ್ ಕ್ರಿಕೆಟ್ಗೆ ಫಾಸ್ಟ್ ಬೌಲರ್ ಆಗಿ ಕಮ್ಬ್ಯಾಕ್ ಮಾಡಿದರು. ಹೀಗೆ ಕಮ್ಬ್ಯಾಕ್ ಮಾಡಿದ್ದ ವರುಣ್ ಚಕ್ರವರ್ತಿ ಜೀವನಕ್ಕೆ ಬೆಳಕಾಗಿ ಬಂದಿದ್ದೆ ತಮಿಳುನಾಡು ತಂಡದ ಕೋಚ್ ಆಗಿದ್ದ ಕಣ್ಣನ್.
ನಾನು ಮತ್ತೆ ಫಾಸ್ಟ್ ಬೌಲರ್ ಆಗಿ ಕಾರ್ಯಾರಂಭ ಮಾಡಿದೆ. ಇದಾದ ಒಂದೂವರೆ ವರ್ಷದ ಬಳಿಕ ಮಿಸ್ಟರ್ ಕಣ್ಣನ್ ಟೀಮ್ಗೆ ಸೇರಿಸಿಕೊಂಡರು. ಅವರು ನನ್ನ ಬಿಗೆಸ್ಟ್ ಸಪೋರ್ಟರ್ ಆಗಿದ್ದರು. ಯಾಕಂದ್ರೆ, ನನ್ನ ಟೆನ್ನಿಸ್ ಬಾಲ್ನಿಂದ ನೇರವಾಗಿ ಲೆದರ್ ಬಾಲ್ಗೆ ಸೇರಿಸಿಕೊಂಡರು. ಅದು ನನಗೆ ಸಹಾಯ ಆಯಿತು. ಮತ್ತೆ ವರ್ಷದ ಬಳಿಕ ಫಾಸ್ಟ್ ಬೌಲರ್ ಆಗಿ ಇಂಜುರಿಯಾಗಿದ್ದೆ. ಈ ಕಾರಣಕ್ಕೆ ಒಂದೂವರೆ ವರ್ಷ ಮತ್ತೆ ವಿಶ್ರಾಂತಿ ಪಡೆಯಬೇಕಾಯಿತು.
ವರುಣ್ ಚಕ್ರವರ್ತಿ, ಸ್ಪಿನ್ನರ್
ಒಂದೂವರೆ ವರ್ಷದ ಬಳಿಕ ಸ್ಪಿನ್ನರ್ ಆಗಿ ಅವತಾರ..!
ಇಂಜುರಿ ಕಾರಣಕ್ಕೆ ಒಂದೂವರೆ ವರ್ಷ ಕ್ರಿಕೆಟ್ನಿಂದ ದೂರ ಉಳಿದಿದ್ದ ವರುಣ್, ಸ್ಪಿನ್ನರ್ ಆಗಿ ಹೊಸ ಅವತಾರ ಎತ್ತುತ್ತಾರೆ. ಲೋಕಲ್ ಟೂರ್ನಿಗಳಲ್ಲಿ ಆಡ್ತಾರೆ. ನಿತ್ಯ ಎರಡ್ಮೂರು ಗಂಟೆಗಳ ಕಾಲ ವರ್ಕ್ ಮಾಡ್ತಾರೆ. ಇಂಥಹ ಟೈಮ್ನಲ್ಲಿ ಮತ್ತೆ ಸ್ಪಿನ್ನರ್ ಆಗಿದ್ದ ವರುಣ್ಗೆ ನೆರವಾಗೋದು ತಮಿಳುನಾಡು ಕೋಚ್ ಕಣ್ಣನ್. ಕೆಕೆಆರ್ ತಂಡದ ನೆಟ್ ಸೆಷನ್ನಲ್ಲಿ ವರುಣ್, ಎಸೆತಗಳನ್ನು ಎದುರಿಸಿದ್ದ ದಿನೇಶ್ ಕಾರ್ತಿಕ್ ಇಪ್ರೆಂಸ್ ಆಗ್ತಾರೆ. ಇದೇ ಕೆಕೆಆರ್ ಟೀಮ್ಗೆ ಎಂಟ್ರಿ ನೀಡಲು ದಾರಿ ಮಾಡಿಕೊಡುತ್ತೆ.
ನಾನು ಕೆಕೆಆರ್ಗೆ ಬರುವ ಮುನ್ನ 2018ರಲ್ಲಿ ನೆಟ್ ಸೆಷನ್ನಲ್ಲಿ ದಿನೇಶ್ ಕಾರ್ತಿಕ್ಗೆ ಚೆಪಾಕ್ನಲ್ಲಿ ಬೌಲಿಂಗ್ ಮಾಡಿದ್ದೆ. ಅವರಿಗೆ ಉತ್ತಮವಾಗಿ ಬೌಲ್ ಮಾಡಿದ್ದೆ. ನಂತರ ಕೊಲ್ಕತ್ತಾಗೆ ಹೋದೆ. ಸುನಿಲ್ ನರೈನ್, ಪಿಯೂಷ್ ಚಾವ್ಲಾ, ಕುಲ್ದೀಪ್ರನ್ನ ಭೇಟಿಯಾದೆ. ಅವರಿಂದ ಬಹಳಷ್ಟು ಕಲಿತೆ. 2018ರಲ್ಲಿ ನೆಟ್ ಬೌಲರ್ ಆಗಿ ತಂಡದ ಜೊತೆ ಟ್ರಾವೆಲ್ ಮಾಡ್ತಿದ್ದೆ. ಅದು ಬಹಳಷ್ಟು ಸಹಾಯ ಆಗಿತ್ತು.
ವರುಣ್ ಚಕ್ರವರ್ತಿ, ಸ್ಪಿನ್ನರ್
ಇದನ್ನೂ ಓದಿ: ಮೋದಿ ಇಂಟರ್ವ್ಯೂವ್ ಮಾಡಲು 3 ದಿನ ಉಪವಾಸ; ಸ್ಟಾರ್ ಯೂಟ್ಯೂಬರ್ನಿಂದ ಯಾಕೆ ಇಂಥ ನಿರ್ಧಾರ..?
ನೆಟ್ ಬೌಲರ್ ಆಗಿದ್ದ ವರುಣ್ಗೆ, ನಂತರ ತಮಿಳುನಾಡು ಪ್ರಿಮೀಯರ್ ಲೀಗ್ನಲ್ಲಿ ಅವಕಾಶ ಸಿಗುತ್ತೆ. 2018ರಲ್ಲಿ ವಿಜಯ್ ಹಜಾರೆ ಮೂಲಕ ತಮಿಳುನಾಡು ಪರ ಡೊಮೆಸ್ಟಿಕ್ ಕ್ರಿಕೆಟ್ಗೆ ಡೆಬ್ಯು ಮಾಡಿದ ವರುಣ್ಗೆ, 2019ರಲ್ಲಿ ಪಂಜಾಬ್ ಕಿಂಗ್ ಸೇರುವ ಅವಕಾಶ ಸಿಗುತ್ತೆ. ಆದ್ರೆ, ಪಂಜಾಬ್ ಪರ ಒಂದೇ ಒಂದು ಪಂದ್ಯಕ್ಕೆ ಸೀಮಿತವಾಗಿದ್ದ ವರುಣ್ ಚಕ್ರವರ್ತಿ, 2020ರಲ್ಲಿ ಕೊಲ್ಕತ್ತಾ ತಂಡ ಸೇರ್ತಾರೆ. ಇಲ್ಲಿಂದ ವರುಣ್ ಚಕ್ರವರ್ತಿಯ ಬದುಕೇ ಬದಲಾಗುತ್ತೆ.
ಕೆಕೆಆರ್ ಸೇರಿದ 2 ವರ್ಷದಲ್ಲಿ ಟೀಮ್ ಇಂಡಿಯಾ ಸೇರುವ ವರುಣ್ ಚಕ್ರವರ್ತಿ, ತಂಡದಿಂದಲೂ ಕಿಕ್ಔಟ್ ಆಗ್ತಾರೆ. ಆದ್ರೆ, 4 ವರ್ಷಗಳ ಬಳಿಕ ಟೀಮ್ ಇಂಡಿಯಾದ ಎಂಟ್ರಿ ನೀಡಿದ ವರುಣ್, ಟಿ20 ತಂಡದ ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡರು. ಅದೇ ಪ್ರದರ್ಶನ ಏಕದಿನ ತಂಡದ ಬಾಗಿಲು ತೆರೆದಿದೆ. ಸದ್ಯ ಏಕದಿನ ತಂಡಕ್ಕೆ ಡೆಬ್ಯು ಮಾಡಿರುವ ವರುಣ್, ಚಾಂಪಿಯನ್ಸ್ ಟ್ರೋಫಿಗಾಗಿ ದುಬೈ ಪ್ಲೈಟ್ ಏರುವ ಸನಿಹಲ್ಲಿದ್ದಾರೆ. ಆದ್ರೆ, ಇದು ನಿಜವಾಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರಸಿಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ