/newsfirstlive-kannada/media/post_attachments/wp-content/uploads/2025/02/Virat-Kohli-On-Rcbcaptain-1.jpg)
ಇಂಡಿಯನ್​​ ಪ್ರೀಮಿಯರ್​​ ಲೀಗ್​ ಸೀಸನ್​ 18ಕ್ಕೆ ಕೌಂಟ್​​ಡೌನ್​ ಶುರುವಾಗಿದೆ. 3 ತಿಂಗಳು ಕ್ರಿಕೆಟ್​ ಹಬ್ಬದ ಮಜಾ ಸವಿಯಲು ಕ್ರಿಕೆಟ್​ ಪ್ರೇಮಿಗಳು ಕಾದು ಕುಳಿತಿದ್ದಾರೆ. ಸ್ಟೇಡಿಯಂಗೆ ಹೋಗಿ ನೆಚ್ಚಿನ ತಂಡಕ್ಕೆ ಚಿಯರ್​​ ಮಾಡಲು ತುದಿಗಾಲಲ್ಲಿ ನಿಂತ ಅಭಿಮಾನಿಗಳಿಗೆ ಇದೀಗ ಫ್ರಾಂಚೈಸಿಗಳು ಗುಡ್​ನ್ಯೂಸ್​​ ಕೊಟ್ಟಿವೆ.
ಆರ್​​​ಸಿಬಿ ಕಪ್​ ಮಾತ್ರ ಗೆದ್ದಿಲ್ಲ. ಒಂದೇ ಒಂದು ಬಾರಿಯೂ ಆರ್​​ಸಿಬಿ ಐಪಿಎಲ್​ ಚಾಂಪಿಯನ್​ ಆಗದೇ ಇದ್ರೂ, ಅಭಿಮಾನಿಗಳಲ್ಲಿ ಆರ್​​ಸಿಬಿ ಅನ್ನೋದು ಅಚ್ಚೊತ್ತಿದೆ. ಮನದ ಸಿಂಹಾಸನದಲ್ಲಿ ಆರ್​​ಸಿಬಿ ಪ್ಲೇಯರ್ಸ್​ ವಿರಾಜಮಾನರಾಗಿದ್ದಾರೆ. ಸೀಸನ್​​ನಿಂದ ಸೀಸನ್​ಗೆ ಕಪ್​ ನಮ್ದೇ ಅನ್ನೋ ಕೂಗು ಜೋರಾಗಿದೆ.
ಫ್ಯಾನ್ಸ್​ಗೆ ಶಾಕ್​ ಕೊಟ್ಟ ಆರ್​​ಸಿಬಿ ಓನರ್ಸ್
ಆರ್​​ಸಿಬಿ ಐಪಿಎಲ್​ನ​ ಮೋಸ್ಟ್​ ಸಕ್ಸಸ್​ಫುಲ್​ ಟೀಮ್​. ಲಾಯಲ್​ ಫ್ಯಾನ್ಸ್​ ತಂಡದ ಶಕ್ತಿಯಾಗಿದ್ದಾರೆ. ಮೊದಲ ಸೀಸನ್​​​ನಿಂದ ಈವರೆಗೆ ಪ್ರೀತಿ ಹೆಚ್ಚಾಗ್ತಿದ್ಯೇ ಹೊರತು ಒಂದು ಪರ್ಸೆಂಟ್​ ಕೂಡ ಕಡಿಮೆಯಾಗಿಲ್ಲ. ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕ ಜನ ಆರ್​ಸಿಬಿ ಕೇಳಿದಕ್ಕಿಂತ ಹೆಚ್ಚಾಗಿ ಪ್ರೀತಿ ನೀಡಿದ್ದಾರೆ. ಆರ್​​ಸಿಬಿ ಫ್ರಾಂಚೈಸಿ ಮಾಲೀಕರು ಫ್ಯಾನ್ಸ್​ಗೆ ಏನು ಕೊಟ್ಟಿದ್ದಾರೆ.? ಇವ್ರು ಫ್ಯಾನ್ಸ್​ನ ಜಸ್ಟ್​​​ ಬ್ಯುಸಿನೆಸ್​​ ಆ್ಯಂಗಲ್​ನಲ್ಲಿ ನೋಡ್ತಿದ್ದಾರೆ.
ಪದೇ ಪದೇ ಟ್ರೋಫಿ ಕನಸು ನುಚ್ಚೂ ನೂರಾದ್ರೂ ಪ್ರತಿ ಸೀಸನ್​ ಕಪ್​ ನಮ್ದೇ ಅಂತಾ ಫ್ಯಾನ್ಸ್ ಸ್ಟೇಡಿಯಂಗೆ ಬರ್ತಾರೆ. ಅಭಿಮಾನಿಗಳ ಈ ಅಭಿಮಾನ ಫ್ರಾಂಚೈಸಿಗೆ ಬಂಡವಾಳವಾಗಿದೆ. ಲಾಯಲ್​ ಅಭಿಮಾನಿಗಳನ್ನ ಟಿಕೆಟ್​​​ ಮೂಲಕವೇ ಕೊಳ್ಳೆ ಹೊಡೆಯಲು ಮುಂದಾಗಿದೆ.
RCB ಬೆಂಗಳೂರು ಪಂದ್ಯಗಳ ಟಿಕೆಟ್​ ದರ
ಚಿನ್ನಸ್ವಾಮಿ ಮೈದಾನದ ಪಿ2 ಸ್ಟ್ಯಾಂಡ್​​ನಲ್ಲಿ ಒಂದು ಟಿಕೆಟ್​ಗೆ 58,800 ರೂಪಾಯಿ ಬೆಲೆ ನಿಗಧಿ ಪಡಿಸಲಾಗಿದ್ರೆ, ಪ್ಲಾಟಿನಮ್​ ಲಾಂಚ್​ನ ಟಿಕೆಟ್​ ಬೆಲೆ 32500 ಆಗಿದೆ. ಪೆವಿಲಿಯನ್​ ಟೆರೆಸ್​​ನ ಒಂದು ಟಿಕೆಟ್​ ಬೆಲೆ 19500 ಆಗಿದ್ರೆ, ಇ ಎಕ್ಸಿಕ್ಯುಟಿವ್​ ಲಾಂಚ್ನ ಹಾಗೂ ಗ್ರ್ಯಾಂಡ್​ ಟೆರೆಸ್​ನಲ್ಲಿ 13 ಸಾವಿರ ರೂಪಾಯಿಯಾಗಿದೆ. P1 ಅನೆಕ್ಸ್​ನಲ್ಲಿ 7,800, GT ಅನೆಕ್ಸ್​ನಲ್ಲಿ 5,200, ಡಿ ಕಾರ್ಪೋರೇಟ್​ ಹಾಗೂ ಬಿ ಮತ್ತು ಸಿ ಸ್ಟ್ಯಾಂಡ್​ನಲ್ಲಿ 4,290 ಎಂದು ನಿಗದಿ ಪಡಿಸಲಾಗಿದೆ. ಎ ಸ್ಟ್ಯಾಂಡ್​ನ ಒಂದು ಟಿಕೆಟ್​ ಬೆಲೆ 2990 ರೂಪಾಯಿಗಳಾಗಿವೆ.
ಅನ್​ಬಾಕ್ಸ್​ ಇವೆಂಟ್​ ಹೆಸರಲ್ಲೂ ಕೊಳ್ಳೆ
ಮೊನ್ನೆ ಮೊನ್ನೆ ಅದ್ಧೂರಿಯಾಗಿ ಅನ್​ಬಾಕ್ಸ್​ ಇವೆಂಟ್​ ನಡೆಯಿತು. ಆ ಇವೆಂಟ್​ ಹೆಸರಲ್ಲೂ ಲಾಯಲ್​ ಫ್ಯಾನ್ಸ್​ ಜೇಬಿಗೆ ಆರ್​​ಸಿಬಿ ಮ್ಯಾನೇಜ್​ಮೆಂಟ್​ ಕತ್ತರಿ ಹಾಕಿತ್ತು. ಸ್ಟೇಡಿಯಂಗೆ ಎಂಟ್ರಿಯಾಗೋ ಟಿಕೆಟ್​ ಬೆಲೆ ಕನಿಷ್ಟ 2 ಸಾವಿರ ಇತ್ತು. ಸ್ಟೇಡಿಯಂ ಹೋಗೋದು ಆನ್​ಲೈನ್​ ಫ್ಲಾಟ್​ಫಾರ್ಮ್​​ನಲ್ಲಿ ಇವೆಂಟ್​ ನೋಡೋಕೆ ಕೂಡ ಆರ್​​ಸಿಬಿ ಆ್ಯಪ್​​ನಲ್ಲಿ 99 ರೂಪಾಯಿ ಚಾರ್ಜ್​ ಮಾಡಲಾಗಿತ್ತು. ಹಣದ ದಾಹ ಯಾವ ರೇಂಜ್​ಗಿದೆ ನೋಡಿ. ಆನ್​​ಲೈನ್​ನಲ್ಲಾದ್ರೂ ಫ್ರಿಯಾಗಿ ಇವೆಂಟ್​ನ ಪ್ರಸಾರ ಮಾಡಬಹುದಿತ್ತಲ್ಲ.
ಇದನ್ನೂ ಓದಿ: ಸಾಗರದಲ್ಲಿ ಬಂದಿಳಿದ ಸಾಹಸಿಗೆ ಡಾಲ್ಫಿನ್​ಗಳು ಸ್ವಾಗತಕೋರಿದವು.. ವಿಡಿಯೋ ವೈರಲ್​
ಅಸಲಿಗೆ ಆರ್​​ಸಿಬಿ ಟೀಮ್​ ಇದ್ಯಲ್ಲ ಅದು ಹೆಸರಿಗೆ ಮಾತ್ರ ಬೆಂಗಳೂರಿನದ್ದು. ಆನ್​ ಫೀಲ್ಡ್​​ನಲ್ಲಿ ರೂಲ್​​ ಮಾಡ್ತಿರೋ ಬಹುತೇಕರು ತಮಿಳು ಮೂಲದವರು. ಆಫ್​ ದ ಪೀಲ್ಡ್​ನಲ್ಲಿ ರೂಲ್​ ಮಾಡ್ತಿರೋವ್ರು ಕೇರಳ ಮೂಲದವರು. ಹೆಸರಿಗೆ ಅಂತಾ ಇಬ್ಬರು ಕರ್ನಾಟಕದ ಪ್ಲೇಯರ್ಸ್​ನ ಆರ್​​ಸಿಬಿ ಖರೀದಿಸೋದು ಬೆಂಚ್​ಗೆ ಸೀಮಿತ ಮಾಡೋದು. ಇದ್ರಲ್ಲಿ ಹೊಸ ವಿಚಾರ ಏನಿಲ್ಲ ಬಿಡಿ.
ಇಷ್ಟೆಲ್ಲಾ ಇದ್ದರೂ ಅಭಿಮಾನಿಗಳು ಆರ್​​ಸಿಬಿಯನ್ನ ಬಿಟ್ಟು ಕೊಡಲ್ಲ. ಲಾಯಲ್​ ಫ್ಯಾನ್ಸ್​ ಪ್ರೀತಿ ಹಾಗೇ ಇದೆ. ಇದನ್ನ ಆರ್​​ಸಿಬಿ ಮ್ಯಾನೇಜ್​ಮೆಂಟ್​ ಅರ್ಥಮಾಡಿಕೊಳ್ಳಬೇಕು. ಅಭಿಮಾನವನ್ನೇ ಬಂಡವಾಳ ಮಾಡಿಕೊಂಡು ಜೇಬಿಗೆ ಕತ್ತರಿ ಹಾಕೋದ್ರ ಬದಲು ಕಡಿಮೆ ಬೆಲೆಗೆ ಟಿಕೆಟ್​ ನೀಡಬಹುದಿತ್ತು. ಮುಂದಾದ್ರೂ ಇದನ್ನ ಆರ್​​ಸಿಬಿ ಮ್ಯಾನೇಜ್​​ಮೆಂಟ್​ ಅರ್ಥ ಮಾಡಿಕೊಳ್ಳಬೇಕು. ಮುಂದಿನ ಹಂತದಲ್ಲಾದ್ರೂ, ಫ್ಯಾನ್ಸ್​ಗೆ ಹೊರೆಯಾಗದಂತೆ ಟಿಕೆಟ್​ ಪ್ರೈಸ್​​ ನಿಗದಿಪಡಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್