newsfirstkannada.com

ಅಭಿಮಾನಿಗಳ ಅಭಿಮಾನವೇ RCB ಬಂಡವಾಳ; ಇವೆಂಟ್​ ಹೆಸರಲ್ಲಿ ಈ ವರ್ಷವೂ ಲೂಟಿ..!

Share :

Published March 12, 2024 at 2:26pm

    IPL ಸೀಸನ್​​ -17ರ ಆರಂಭಕ್ಕೆ ಕೌಂಟ್​​ಡೌನ್​

    ಪಕ್ಕಾ ವ್ಯಾವಹಾರಿಕ ಫ್ರಾಂಚೈಸಿ ಆರ್​ಸಿಬಿ

    ಬೆಂಗಳೂರಿನ ಮ್ಯಾಚ್ ಟಿಕೆಟ್​ ಬಲು ದುಬಾರಿ

ನಿಷ್ಠೆ.. ಎಲ್ಲರಿಗೂ ಇರಲ್ಲ.. ಎಲ್ಲರಿಗೂ ಸಿಗಲ್ಲ. ಸಿಕ್ಕಿದ್ರೆ ಜೋಪಾನ ಮಾಡಿಕೊಳ್ಳಬೇಕು. ಆದರೆ ಆ ಈ ನಿಷ್ಠೆ, ಅಭಿಮಾನವನ್ನೇ ಬಂಡವಾಳ ಮಾಡಿಕೊಂಡ್ರೆ? ನಿಜಕ್ಕೂ ತಪ್ಪು.. ಇದು ಯಾರ ಬಗ್ಗೆಯೇ ಹೇಳ್ತಿರೋ ಮಾತಲ್ಲ. ನಮ್ಮ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಬಗ್ಗೆಯೇ ಹೇಳ್ತಿರೋ ಮಾತು.

ಸೋಲೇ ಬರಲಿ.. ಗೆಲುವೆ ಇರಲಿ.. ಎಂದೆಂದಿಗೂ ಎಂದೆಂದಿಗೂ ಆರ್​​ಸಿಬಿ.. ಇವತ್ತು ನಿನ್ನೆಯದಲ್ಲ.. ಕಳೆದ 17 ವರ್ಷಗಳಿಂದ, ಆರ್​ಸಿಬಿ ಫ್ಯಾನ್ಸ್​ ಹೇಳ್ತಿರೋ ಮಾತಿದು.. ಐದೇದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದ ಚೆನ್ನೈ, ಮುಂಬೈ ಫ್ರಾಂಚೈಸಿಗಳಿಗೂ ಸಿಗದ ಲಾಯಲ್ ಫ್ಯಾನ್ಸ್​, ಆರ್​ಸಿಬಿಗೆ ಸಿಕ್ಕಿದ್ದಾರೆ. ಇದೇ ಲಾಯಲಿಟಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಿಗೆ ಬಂಡವಾಳವಾಗ್ತಿದೆ.

ಆರ್​​ಸಿಬಿ ಗೆಲ್ಲುತ್ತೋ.. ಸೋಲುತ್ತೋ.. ಪ್ರತಿ ಸೀಸನ್​ನಲ್ಲೂ ತಂಡದ ಕೈಹಿಡಿದು ಆಟಗಾರರಿಗೆ ಜೋಶ್ ತುಂಬುತ್ತಾರೆ. ಇವರ ಅಭಿಮಾನಕ್ಕೆ ವಿಶ್ವ ಕ್ರಿಕೆಟ್ ಲೋಕವೇ ಫಿದಾ ಆಗಿದೆ. ದಿಗ್ಗಜರೇ ಸಲಾಂ ಹೊಡೆದಿದ್ದಾರೆ. ಆದರೆ ಇಂಥ ಅಭಿಮಾನಿಗಳಿಗೆ ಉಪಕಾರಿಯಾಗಬೇಕಿದ್ದ ಫ್ರಾಂಚೈಸಿ, ಈಗ ಮಾಡ್ತಿರೋದು ಮಾತ್ರ ಫ್ಯಾನ್ಸ್​ ಜೇಬಿಗೆ ಕತ್ತರಿ ಹಾಕುವ ಕೆಲಸ.

ಅಭಿಮಾನಿಗಳ ಅಭಿಮಾನವೇ ಫ್ರಾಂಚೈಸಿಗೆ ಬಂಡವಾಳ?
ಸೀಸನ್​ 17ರ ಆರಂಭಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಫ್ರಾಂಚೈಸಿಗಳ ಸಿದ್ಧತೆಯೂ ಜೋರಾಗಿದೆ. ಈಗಾಗಲೇ ಅಭಿಮಾನಿಗಳು, ಈ ಸಲ ಕಪ್​ ನಮ್ದೇ ಎಂಬ ಘೋಷವಾಕ್ಯ ಮೊಳಗಿಸ್ತಿದ್ದಾರೆ. ಆದ್ರೆ, ಫ್ರಾಂಚೈಸಿ ಮಾತ್ರ, ಅಭಿಮಾನಿಗಳ ಅಭಿಮಾನವನ್ನೇ ಬಂಡವಾಳ ಮಾಡಿಕೊಂಡಿ, ದುಡ್ಡು ಕೊಳ್ಳೆ ಹೊಡೆಯೋಕೆ ಸಜ್ಜಾಗಿದೆ.

ಕಳೆದ ಸೀಸನ್​ನಲ್ಲೂ ಚಿನ್ನಸ್ವಾಮಿ ಅನ್​ಬಾಕ್ಸ್​ ಈವೆಂಟ್ ಮಾಡಿದ್ದ ಆರ್​ಸಿಬಿ, ಕ್ರಿಸ್ ​ಗೇಲ್ ಹಾಗೂ ಎಬಿ ಡಿವಿಲಿಯರ್ಸ್​​ಗೆ ಹಾಲ್​ ಅಫ್​ ಫೇಮ್​ ಗೌರವ ನೀಡಿತ್ತು. ಈ ಈವೆಂಟ್​ನಲ್ಲೂ ಟಿಕೆಟ್ ರೇಟ್ ಫಿಕ್ಸ್​ ಮಾಡಿತ್ತು. ಇದೇ ರೀತಿ ಈ ವರ್ಷನೂ ಅನ್​ ಬಾಕ್ಸ್ ಇವೆಂಟ್​​​​​​​​​​​​ಗೆ 800ರಿಂದ 4 ಸಾವಿರ ತನಕ ಚಾರ್ಜ್ ಮಾಡ್ತಿದೆ.

ಅನ್​​ಬಾಕ್ಸ್ ಇವೆಂಟ್​​ ಟಿಕೆಟ್ ದರ ಎಷ್ಟು..?
ಅನ್​ಬಾಕ್ಸ್​ ಈವೆಂಟ್​ನ ಡಿ ಕಾರ್ಪೋರೇಟ್​, ಎಕ್ಸಿಕ್ಯುಟಿವ್ ಲಾಂಜ್, ಜಿಯೋ ಪಿ3 ಅನೆಕ್ಸ್ ಹಾಗೂ ಕತಾರ್​ ಏರ್​ವೇಸ್​ ಪಿ1 ಅನೆಕ್ಸ್ ಹಾಗೂ ಪಿ3 ಸ್ಟ್ಯಾಂಡ್​ನ ದರ 800 ರೂಪಾಯಿಯಾಗಿದ್ರೆ. ಕತಾರ್​ ಏರ್​ವೇಸ್​ ಪಿ1 ಸ್ಟ್ಯಾಂಡ್ ದರ ಒಂದು ಸಾವಿರ, ಪೆವಿಲಿಯನ್ ಟೇರೆಸ್​ ಟಿಕೆಟ್ ದರ 1500 ಹಾಗೂ ಪಿ ಕಾರ್ಪೋರೇಟ್ಸ್​ ಟಿಕೆಟ್ ರೇಟ್​ 4 ಸಾವಿರದಿಂದ ಆಗಿದೆ. ಈ ಅನ್​ಬಾಕ್ಸ್​ ಇವೆಂಟ್​ನಿಂದಲೇ ಮಾತ್ರವೇ ಆರ್​ಸಿಬಿ ಫ್ರಾಂಚೈಸಿ ಹಣ ಗಳಿಸ್ತಿಲ್ಲ. ಮತ್ತೊಂದು ಮಾರ್ಗವೂ ಆಯ್ದುಕೊಂಡಿದೆ.

ಆರ್​ಸಿಬಿ ಬಾರ್ ಆ್ಯಂಡ್ ಕಫೆ ಮೂಲಕವೂ ಬ್ಯುಸಿನೆಸ್..!
ಆರ್​ಸಿಬಿ ಪಕ್ಕ ಬ್ಯುಸಿನೆಸ್ ಮೈಂಡೆಡ್ ಫ್ರಾಂಚೈಸಿ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್​.. ಆರ್​ಸಿಬಿ ಆರಂಭಿಸಿರುವ ಬಾರ್ ಆ್ಯಂಡ್ ಕೆಫೆಯೇ ಆಗಿದೆ. ಯಾಕಂದ್ರೆ, ಬೇರೆ ತಂಡಗಳ ಫ್ರಾಂಚೈಸಿಗಳು, ಕ್ರಿಕೆಟ್​​ ಅಕಾಡಮಿಗಳನ್ನ ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ರೆ. ಆರ್​ಸಿಬಿ ಮಾತ್ರ, ಹೆಸರನ್ನೇ ಬ್ರ್ಯಾಂಡ್ ಮಾಡಿ ರೆಸ್ಟೋರೆಂಟ್​ ಮೂಲಕ ಬ್ಯುಸಿನೆಸ್ ಮಾಡ್ತಿದೆ.

​ಒಟ್ನಲ್ಲಿ, ವಿಶ್ವ ಕ್ರಿಕೆಟ್​​ನಲ್ಲೇ ಯಾರು ಸಿಗದ ಲಾಯಲ್​ ಫ್ಯಾನ್ ಬೇಸ್​ ಆರ್​ಸಿಬಿಗೆ ಇದೆ. ಅಭಿಮಾನಿಗಳ ನಿಷ್ಠೆ ಬಗ್ಗೆ ಕ್ರಿಕೆಟರ್​ಗಳೇ ಹೆಮ್ಮೆಯಿಂದ ಹೇಳಿಕೊಂಡಿದ್ದಿದೆ.ಆದ್ರೆ, ಇದೇ ನಿಷ್ಠೆಯನ್ನೇ ಬಂಡವಾಳ ಮಾಡಿಕೊಳ್ತಿರೋದು ಮಾತ್ರ ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮಾನಿಗಳ ಅಭಿಮಾನವೇ RCB ಬಂಡವಾಳ; ಇವೆಂಟ್​ ಹೆಸರಲ್ಲಿ ಈ ವರ್ಷವೂ ಲೂಟಿ..!

https://newsfirstlive.com/wp-content/uploads/2024/03/RCB-1.jpg

Load More