ಪ್ರಿಯಾಂಶ್​ ಆರ್ಯನ ಮಿಸ್​ ಮಾಡಿಕೊಂಡ RCB.. ಸೆಂಚುರಿ ಬ್ಯಾಟರ್​ನನ್ನ ಬಿಟ್ಟುಕೊಟ್ಟಿದ್ದು ಹೇಗೆ?

author-image
Bheemappa
Updated On
ಪ್ರಿಯಾಂಶ್​ ಆರ್ಯನ ಮಿಸ್​ ಮಾಡಿಕೊಂಡ RCB.. ಸೆಂಚುರಿ ಬ್ಯಾಟರ್​ನನ್ನ ಬಿಟ್ಟುಕೊಟ್ಟಿದ್ದು ಹೇಗೆ?
Advertisment
  • 6 ಬಾಲ್​ಗೆ 6 ಸಿಕ್ಸರ್​ ಸಿಡಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆರ್ಯ
  • ಯುವ ಆಟಗಾರನನ್ನ ಗುರುತಿಸಿ, ಆ ಮೇಲೆ RCB ಕೈಬಿಟ್ಟಿದ್ದು ಹೇಗೆ?
  • 7 ಬೌಂಡ್ರಿ, 9 ಬಿಗ್​​ ಸಿಕ್ಸರ್​ಗಳಿಂದ ಸಿಡಿಲಬ್ಬರದ ಶತಕ ಸಿಡಿಸಿದ್ದ ಆರ್ಯ

ಪ್ರಿಯಾಂಶ್ ಆರ್ಯ ಸದ್ಯ ನಡೆಯುತ್ತಿರುವ ಐಪಿಎಲ್​ ಟೂರ್ನಿಯಲ್ಲಿ ಇಶನ್ ಕಿಶನ್ ಬಳಿಕ 2ನೇ ಸೆಂಚುರಿ ಬಾರಿಸಿ ಸೆನ್ಸೇಷನ್ ಆಗಿದ್ದಾರೆ. ಈ ಯಂಗ್​ ಬ್ಯಾಟರ್​ನ ಬ್ಯಾಟಿಂಗ್ ನೋಡಿ ಆರ್ಯ ಮುಂದಿನ ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಎಂದು ಹೊಗಳುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ, ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಬೇಸರಗೊಂಡಿದ್ದಾರೆ. ಆರ್​ಸಿಬಿಗೂ ಪಂಜಾಬ್​​ ತಂಡದ ಪ್ರಿಯಾಂಶ್​ಗೂ ಏನ್​ ಸಂಬಂಧ?.

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ತಂಡದಲ್ಲಿದ್ದ ಸ್ಟಾರ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸ್ತಿದ್ರೆ, ಮತ್ತೊಂದು ತುದಿಯಲ್ಲಿದ್ದ ಯಂಗ್​ ಬ್ಯಾಟರ್​ ಏಕಾಂಗಿಯಾಗಿ ಸಿಎಸ್​ಕೆ ಬೌಲರ್​ಗಳ ಬೆಂಡೆತ್ತಿದರು. ಚೆನ್ನೈನ ಮತೀಶಾ ಪತಿರಣರಂಥ ಎಫೆಕ್ಟೀವ್​​​​​​​​​ ಬೌಲರ್​ನೇ ಹೇಗೆಂದರೆ ಹಾಗೇ ಉಡಾಯಿಸಿದರು. ಕೇವಲ 42 ಎಸೆತದಲ್ಲೇ 7 ಬೌಂಡರಿ, 9 ಆಕಾಶದೆತ್ತರ ಸಿಕ್ಸರ್​ನಿಂದ 103 ರನ್ ಚಚ್ಚಿ ಸಂಭ್ರಮಿಸಿದರು.

publive-image

ಪ್ರಿಯಾಂಶ್ ಆರ್ಯ ಕೇವಲ ₹3.8 ಕೋಟಿಗೆ ಖರೀದಿ..!

ಐಪಿಎಲ್​ ಟೂರ್ನಿಯಲ್ಲಿ ಆಡಿದ 4ನೇ ಪಂದ್ಯದಲ್ಲೇ ಶರವೇಗದ ಶತಕ ಸಿಡಿಸಿರುವ ಪ್ರಿಯಾಂಶ್ ಆರ್ಯ, ಐಪಿಎಲ್ ಸೀಸನ್​ 18ರ ಸೆನ್ಸೇಷನ್ ಎಂದೇ ಹೇಳಬಹುದು. ಈ ಪ್ರಿಯಾಂಶ್ ಆರ್ಯ, 2024ರ ಐಪಿಎಲ್ ಹರಾಜಿನಲ್ಲಿ ಅನ್​​ಸೋಲ್ಡ್​ ಆಗಿದ್ದ ಯುವ ಆಟಗಾರ. ಆವತ್ತು ಯಾವೊಂದು ಫ್ರಾಂಚೈಸಿ ಕೂಡ ಕನಿಷ್ಠ ಬೇಸ್ ಪ್ರೈಸ್ ನೀಡಿಯೂ ಖರೀದಿಸಲು ಮುಂದಾಗಿರಲಿಲ್ಲ ಎಂಬುದು ಬೇಸರದ ಸಂಗತಿ ಆಗಿದೆ.

ಇದಾದ ಮೇಲೆ 2024ರ ಆಗಸ್ಟ್​ನಲ್ಲಿ ಚೊಚ್ಚಲ ಡೆಲ್ಲಿ ಪ್ರೀಮಿಯರ್ ಲೀಗ್ ನಡೆಯಿತು. ಈ ಟೂರ್ನಿಯಲ್ಲಿ ಸೌತ್​ ಡೆಲ್ಲಿ ಸೂಪರ್​ ಸ್ಟಾರ್ಸ್ ಪರ ಆಡಿದ್ದ ಪ್ರಿಯಾಂಶ್, ಒಂದೇ ಓವರ್​ನಲ್ಲಿ 6 ಸಿಕ್ಸರ್ ಸಿಡಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿ, ತಾನೇನು ಎಂಬುದನ್ನು ಸಾಬೀತು ಮಾಡಿದರು. ಟೂರ್ನಿಯುದ್ದಕ್ಕೂ ಅದ್ಭುತ ಆಟವಾಡಿದ್ದ ಪ್ರಿಯಾಂಶ್, 10 ಪಂದ್ಯಗಳಿಂದ 198.69ರ ಸ್ಟ್ರೈಕ್​ರೇಟ್​ನಲ್ಲಿ 608 ರನ್ ಗಳಿಸಿದ್ದರು. ಈ ಪೈಕಿ 2 ಶತಕ, 4 ಅರ್ಧಶತಕ ಸಿಡಿಸಿದ್ದ ಪ್ರಿಯಾಂಶ್, ಬರೋಬ್ಬರಿ 46 ಬೌಂಡರಿ, 43 ಸಿಕ್ಸರ್ ಚಚ್ಚಿದ್ದರು.

ಇದಿಷ್ಟೇ ಅಲ್ಲ, 2024ರ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲೂ ಡೆಲ್ಲಿ ಪರ ಅದ್ಬುತ ಪ್ರದರ್ಶನ ನೀಡಿದ್ದ ಪ್ರಿಯಾಂಶ್, 9 ಪಂದ್ಯಗಳಿಂದ 176.63ರ ಸ್ಟ್ರೈಕ್​ರೇಟ್​ನಲ್ಲಿ 325 ರನ್ ಸಿಡಿಸಿದ್ದರು. ಈ ಆಟ ನೋಡಿದ ಬಳಿಕ ಐಪಿಎಲ್​ ಫ್ರಾಂಚೈಸಿಗಳು ಈ ಬಾರಿಯ ಹರಾಜಿನಲ್ಲಿ ಖರೀದಿಗೆ ಪೈಪೋಟಿ ನಡೆಸಲು ಯೋಜಿಸಿದ್ದವು.

ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ ಸತತ 2ನೇ ಸೋಲು.. ಪಿಚ್ ಕ್ಯೂರೇಟರ್ ಹೊಣೆ ಮಾಡಿದ ಮ್ಯಾನೇಜ್ಮೆಂಟ್..!

publive-image

ಬಿಡ್ಡಿಂಗ್​ನಲ್ಲಿ ಏನೆಲ್ಲಾ ಆಯಿತು?

ಅದರಂತೆ 2025ರ ಮೆಗಾ ಆಕ್ಷನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್​ ಕಿಂಗ್ಸ್​ ಬಿಡ್ಡಿಂಗ್​ ವಾರ್​ ನಡೆಸಿದ್ದವು. ಪ್ರಿಯಾಂಶ್​ ಕೂಡ ಆರ್​​ಸಿಬಿ ತಂಡದ ಪರ ಆಡಬೇಕು ಅನ್ನೋದೆ ನನ್ನಾಸೆ ಅಂತಾ ಹೇಳಿಕೊಂಡಿದ್ದರು. ಆರಂಭದಲ್ಲಿ ಬಿಡ್​ ಮಾಡಿದ ಆರ್​ಸಿಬಿ ಬಳಿಕ ಸುಮ್ಮನಾಯಿತು. ಆ ಮೇಲೆ ಪ್ರಿಯಾಂಶ್ ಹೆಸರು ಕೂಗಲು ಹಿಂದೇಟು ಹಾಕಿತು. ಅಂತಿಮವಾಗಿ 3.80 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್​ ಖರೀದಿಸಿತು.

ಆಕ್ಷನ್​ನಲ್ಲಿ ಆರ್​ಸಿಬಿ ಮಾಡಿದ ಇದೊಂದರಿಂದ ಈಗ ಯಂಗ್ ಆಂಡ್ ಎನರ್ಜಿಟಿಕ್ ಬ್ಯಾಟರ್​ನನ್ನ ಮಿಸ್ ಮಾಡಿಕೊಂಡಿದೆ. ಆಕ್ಷನ್​ನಲ್ಲಿ ಇನ್ನೊಂದು ಸಲ ಪ್ರಿಯಾಂಶ ಹೆಸರು ಕೂಗಿದ್ದರೇ ಆರ್​ಸಿಬಿ ಪಾಲು ಆಗುತ್ತಿದ್ದರೋ ಏನೋ. ಆದರೆ ಈಗ ಎಲ್ಲ ಮುಗಿದು ಹೋಗಿದ್ದು, ಪ್ರಿಯಾಂಶ್ ಆರ್ಯ ಪಂಜಾಬ್​ನಲ್ಲಿ ತನ್ನ ಸಾಮರ್ಥ್ಯ ಏನು ಎಂಬುದನ್ನ ಬ್ಯಾಟಿಂದ ತೋರಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment