/newsfirstlive-kannada/media/post_attachments/wp-content/uploads/2024/10/NITISH_KUMAR-1.jpg)
ಯುವ ಆಲ್​​ರೌಂಡರ್​​ ನಿತೀಶ್​ ರೆಡ್ಡಿ ಭಾರತೀಯ ಕ್ರಿಕೆಟ್​​ನಲ್ಲಿ ಹೊಸ ಹವಾ ಸೃಷ್ಟಿಸಿದ್ದಾರೆ. ಹೈದ್ರಾಬಾದ್​ ಹುಡುಗ ಟೀಮ್​ ಇಂಡಿಯಾ ಪರ ಧೂಳೆಬ್ಬಿಸಿದ್ದೇ ತಡ, ಐಪಿಎಲ್ ಫ್ರಾಂಚೈಸಿಗಳ​ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೂ ಹಿಂದೆ ಮಾಡಿದ್ದ ಮಹಾಪ್ರಮಾದದ ಅರಿವಾಗಿದೆ. ಆರ್​​​ಸಿಬಿ ಮಾಡಿದ್ದ ಮಹಾ ಪ್ರಮಾದ ಏನು?.
ಇಂಡೋ- ಬಾಂಗ್ಲಾ ಟಿ20​ ಸರಣಿಯಲ್ಲಿ ಯಂಗ್​ ಆಲ್​​ರೌಂಡರ್​​ ನಿತೀಶ್​ ರೆಡ್ಡಿ ಧೂಳೆಬ್ಬಿಸಿದ್ದಾರೆ. ಡೆಬ್ಯೂ ಸೀರಿಸ್​​ನಲ್ಲೇ ಆಲ್​​ರೌಂಡ್​ ಪರ್ಫಾಮೆನ್ಸ್​ನಿಂದ ಗಮನ ಸೆಳೆದಿದ್ದಾರೆ. ಒತ್ತಡದ ನಡುವೆ ಬೌಲರ್​ಗಳ ಮೇಲೆ ದಂಡೆತ್ತಿ ಹೋಗಿ, ಬೌಂಡರಿ-ಸಿಕ್ಸರ್​​ ಸಿಡಿಸೋ ನಿತೀಶ್ ರೆಡ್ಡಿ​ ಬ್ಯಾಟಿಂಗ್​ ಪರಾಕ್ರಮಕ್ಕೆ ಎಲ್ರೂ​ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಕಿವೀಸ್ ಸಂಹಾರಕ್ಕೆ ಕಿಂಗ್ ಕೊಹ್ಲಿ ರೆಡಿ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್​ನಲ್ಲಿ ವಿರಾಟ್!
ಆಲ್​​ರೌಂಡರ್​​ ನಿತೀಶ್​ ರೆಡ್ಡಿಗೆ ಫುಲ್​ ಡಿಮ್ಯಾಂಡ್​.!
ಒಂದೆಡೆ ಟೀಮ್​ ಇಂಡಿಯಾ ಪರ ನಿತೀಶ್​ ರೆಡ್ಡಿ ಆರ್ಭಟಿಸ್ತಾ ಇದ್ರೆ, ಇನ್ನೊಂದೆಡೆ ಐಪಿಎಲ್​ ವಲಯದಲ್ಲಿ ಡಿಮ್ಯಾಂಡ್​ ಹೆಚ್ಚಾಗುತ್ತಿದೆ. ಹಾರ್ದಿಕ್​ ಪಾಂಡ್ಯಗಿಂತ ಹೆಚ್ಚಿನ ಕ್ವಾಲಿಟಿ ಹೊಂದಿರುವ ಆಲ್​​ರೌಂಡರ್​ ಮೇಲೆ ತಂಡಗಳ ಕಣ್ಣು ಬಿದ್ದಿದೆ. ಸದ್ಯದ ಟ್ರೆಂಡಿಂಗ್​ ನೋಡಿದ್ರೆ, ಐಪಿಎಲ್​ ಆಕ್ಷನ್​ಗೇನಾದ್ರೂ ನಿತೀಶ್​ ರೆಡ್ಡಿ ಬಂದಿದ್ದೇ ಆದ್ರೆ, ಕೋಟಿ ಕೋಟಿ ಕಮಾಯ್​ ಮಾಡೋದು ಪಕ್ಕಾ. ಹಲವು ಫ್ರಾಂಚೈಸಿಗಳು ಆಲ್​ರೌಂಡರ್​​ಗೆ ಗಾಳ ಹಾಕಲು ಸಜ್ಜಾಗಿವೆ.
ಆಲ್​​ರೌಂಡರ್​​ ಖರೀದಿಗೆ ಆರ್​​ಸಿಬಿ ಆಸಕ್ತಿ.!
ನಿತೀಶ್​ ರೆಡ್ಡಿಯ ಆಟಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಕೂಡ ಕ್ಲೀನ್​ಬೋಲ್ಡ್​ ಆಗಿದೆ. ಬ್ಯಾಟಿಂಗ್​, ಬೌಲಿಂಗ್​ನಿಂದ ಮೋಡಿ ಮಾಡಿರುವ ನಿತೀಶ್​ ರೆಡ್ಡಿಯನ್ನ ಖರೀದಿಸಲು ತೆರೆಮರೆಯಲ್ಲಿ ಪ್ಲಾನ್​ ರೂಪಿಸುತ್ತಿದೆ. ಹಿಂದೆ ಮಾಡಿದ್ದ ಮಹಾ ಪ್ರಮಾದದ ಅರಿವೂ ಆರ್​​ಸಿಬಿಗೆ ಈಗ ಆದಂತಿದೆ.
ಅಸಲಿಗೆ ನಿತೀಶ್​ ರೆಡ್ಡಿ ಹೈದ್ರಾಬಾದ್​ ತಂಡ ಸೇರೋಕು ಮುನ್ನವೇ ಆರ್​​ಸಿಬಿಯ ಭಾಗವಾಗಿದ್ದರು. ಆರ್​​ಸಿಬಿ ಟ್ರಯಲ್ಸ್​ಗೆ ಬಂದಿದ್ದ 2 ವರ್ಷಗಳ ಕಾಲ ಆರ್​​ಸಿಬಿ ತಂಡದೊಂದಿಗೆ ಇದ್ದರು. ಆದ್ರೆ, 2023ರ ಹರಾಜಿನಲ್ಲಿ ನಿತೀಶ್​ ರೆಡ್ಡಿ ಹೆಸ್ರು ಬಂದಾಗ ಆರ್​​ಸಿಬಿ ಖರೀದಿಸೋ ಆಸಕ್ತಿ ತೋರಿಸಿರಲಿಲ್ಲ. ಕೇವಲ 20 ಲಕ್ಷಕ್ಕೆ ಸನ್​ರೈಸರ್ಸ್​ ಹೈದ್ರಾಬಾದ್​ ತಂಡ ಖರೀದಿಸಿತ್ತು.
2023 ಐಪಿಎಲ್​ ವೇಳೆ ಹೈದ್ರಾಬಾದ್​ ತಂಡ ಸೇರಿ ಡಿಸೆಂಟ್​ ಪರ್ಫಾಮೆನ್ಸ್​ ನೀಡಿದ ನಿತೀಶ್​ ರೆಡ್ಡಿ, 2024ರ ಸೀಸನ್​ನಲ್ಲಿ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದರು. ಇದರ ಫಲವಾಗೇ ಟೀಮ್​ ಇಂಡಿಯಾಗೂ ಎಂಟ್ರಿ ಕೊಟ್ಟರು.
ಇದನ್ನೂ ಓದಿ: ಜಂಬೂ ಸವಾರಿಯಲ್ಲಿ ಕಾಡಲಿದೆ ಅರ್ಜುನನ ಅನುಪಸ್ಥಿತಿ; ಅಂಬಾರಿ ಹೊರುವ ಅಭಿಮನ್ಯುಗೆ ಅರ್ಜುನನೇ ಆದರ್ಶವಾಗಿದ್ದ..
ಲೋಕಲ್​ ಬಾಯ್​ನ ಹೈದ್ರಾಬಾದ್​ ರಿಲೀಸ್​ ಮಾಡುತ್ತಾ.?
ಆಕ್ಷನ್​​ನಲ್ಲಿ ನಿತೀಶ್​ ರೆಡ್ಡಿ ಖರೀದಿಗೆ ಆರ್​​ಸಿಬಿ ಸೇರಿದಂತೆ ಹಲವು ಫ್ರಾಂಚೈಸಿಗಳು ಆಸಕ್ತಿ ಹೊಂದಿವೆ. ಆದ್ರೆ, ಹೈದ್ರಾಬಾದ್​ ಫ್ರಾಂಚೈಸಿ ಲೋಕಲ್​ ಬಾಯ್​ನ ರಿಲೀಸ್​ ಮಾಡುತ್ತಾ.? ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಟೀಮ್​ ಇಂಡಿಯಾ ಪರ ಆಡಿರೋದ್ರಿಂದ, ಕ್ಯಾಪ್ಡ್​​​ ಪ್ಲೇಯರ್​ ಆಗಿ ನಿತೀಶ್​ ರೆಡ್ಡಿಯನ್ನ ರಿಟೈನ್​ ಮಾಡಬೇಕಿದ್ದು, ಕನಿಷ್ಟ 11 ಕೋಟಿ ನೀಡಬೇಕಾಗುತ್ತೆ. ನಿತೀಶ್​ ರೆಡ್ಡಿಗೆ ಹೈದ್ರಾಬಾದ್ ಇಷ್ಟೊಂದು ಹಣ ಕೊಡುತ್ತಾ?. ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಒಂದು ವೇಳೆ ರಿಲೀಸ್​ ಮಾಡಿದ್ರೂ, ಆಕ್ಷನ್​ ವೇಳೆ ರೈಟ್​ ಟು ಮ್ಯಾಚ್​ ಉಪಯೋಗಿಸೋ ದಾಳ ಹೈದ್ರಾಬಾದ್​ ಬಳಿಯಿದೆ. ಒಂದೆಡೆ, ಐಪಿಎಲ್​ ವಲಯದಲ್ಲಿ ನಿತೀಶ್​ ರೆಡ್ಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​​ ಕ್ರಿಯೇಟ್​ ಆಗಿದೆ. ಇನ್ನೊಂದೆಡೆ, ಹೈದ್ರಾಬಾದ್​ ಯುವ ಆಲ್​​ರೌಂಡರ್​ನ ರಿಟೈನ್​ ಮಾಡುತ್ತಾ, ಇಲ್ವಾ ಅನ್ನೋ ದೊಡ್ಡ ಪ್ರಶ್ನೆ ಹುಟ್ಟಿದೆ. ನಿತೀಶ್​ ರೆಡ್ಡಿ ಐಪಿಎಲ್​ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಮುಂದೇನಾಗುತ್ತೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ