/newsfirstlive-kannada/media/post_attachments/wp-content/uploads/2025/06/RCB-OWNER-2.jpg)
ಐಪಿಎಲ್​ ಸೀಸನ್​ 18ರಲ್ಲಿ ಕಪ್​ ಗೆದ್ದ ಆರ್​​ಸಿಬಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ನೀವು ಕನಿಷ್ಠ ನಿರೀಕ್ಷೆಯನ್ನೂ ಮಾಡಿರಲ್ಲ. ಕಪ್ ಮಾತ್ರವಲ್ಲ.. ಕೋಟಿ ಕೋಟಿ ಹಣ ಆರ್​​ಸಿಬಿಯ ಖಜಾನೆಗೆ ಸೇರಿದೆ. ಕಪ್​ ಗೆದ್ದಿದ್ದಕ್ಕೆ ಸಿಕ್ಕ ಬಹುಮಾನ ಕೇವಲ 20 ಕೋಟಿ. ಆದ್ರೆ ಆರ್​​​ಸಿಬಿ ಫ್ರಾಂಚೈಸಿ ಈ ಸೀಸನ್​ನಲ್ಲಿ ಗಳಿಸಿದ ಅಂದಾಜು ಮೊತ್ತ 3,244 ಕೋಟಿ.
ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​ 18 ಅಂತ್ಯ ಕಂಡಿದೆ. ಸುದೀರ್ಘ 17 ವರ್ಷಗಳ ಕಾಯುವಿಕೆ ಬ್ರೇಕ್​ ಬಿದ್ದು 18ನೇ ಸೀಸನ್​ನಲ್ಲಿ ಆರ್​​​ಸಿಬಿ ಟ್ರೋಫಿ ಗೆದ್ದಿದ್ದೂ ಆಗಿದೆ. ಕೊಟ್ಯಂತರ ಆರ್​​​ಸಿಬಿ ಅಭಿಮಾನಿಗಳ ಕನಸು ನನಸಾಗಿದೆ. ಅಂದ್ಹಾಗೆ ಚಾಂಪಿಯನ್​ ಪಟ್ಟವೇರಿದ ಆರ್​​ಸಿಬಿ ಕಪ್​ನ್ನ ಮಾತ್ರ ಗೆದ್ದಿಲ್ಲ. ಕೋಟ್ಯಂತರ ಅಭಿಮಾನಿಗಳ ಮನಸನ್ನೂ ಗೆದ್ದಿದೆ. ಕೋಟಿ ಕೋಟಿ ಹಣವನ್ನೂ ಬಾಚಿಕೊಂಡಿದೆ.
ಚಾಂಪಿಯನ್​ ಆರ್​​​ಸಿಬಿಗೆ ಬಂಪರ್​ ಆದಾಯ
ಐಪಿಎಲ್​ ಅಂದ್ರೆ ಅಲ್ಲಿ ಕ್ರಿಕೆಟ್​ ಆಟದ ಜೊತೆಗೆ ಝಣಝಣ ಕಾಂಚಾಣದ ಸದ್ದು ಜೋರಾಗಿರುತ್ತೆ. ಪ್ರತಿ ಎಸೆತ, ಪ್ರತಿ ರನ್​, ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಕೋಟಿ ಕೋಟಿ ಲೆಕ್ಕಾಚಾರದಲ್ಲೇ ವ್ಯವಹಾರಗಳು ನಡೀತವೆ. ಅದೇ ರೀತಿ ಐಪಿಎಲ್​ ಸೀಸನ್​ 18ರಲ್ಲಿ ಆರ್​​ಸಿಬಿ ತಂಡಕ್ಕೂ ಬಂಪರ್ ಲಾಟರಿ ಹೊಡೆದಿದೆ. ಸುದೀರ್ಘ 18 ವರ್ಷಗಳ ಕನಸು ನನಸಾಗೋದ್ರ ಜೊತೆಗೆ ಆರ್​​ಸಿಬಿ ಫ್ರಾಂಚೈಸಿಗೆ ಕೋಟಿ ಕೋಟಿ ಹಣವೂ ಹರಿದು ಬಂದಿದೆ.
ಕಪ್​ ಗೆದ್ದಿದ್ದಕ್ಕೆ ಸಿಕ್ಕಿದ್ದು ಜಸ್ಟ್​ 20 ಕೋಟಿ ಮಾತ್ರ
ಐಪಿಎಲ್​ ಚಾಂಪಿಯನ್​ ಪಟ್ಟವೇರಿದ ಆರ್​ಸಿಬಿಗೆ ಕಪ್​ ಜೊತೆಗೆ ಬಹುಮಾನದ ರೂಪದಲ್ಲಿ 20 ಕೋಟಿ ಹಣ ಕೂಡ ಸಿಕ್ಕಿದೆ. ಇದಲ್ಲದೇ ಬಿಸಿಸಿಐ ಕಡೆಯಿಂದ 861 ಕೋಟಿ ರೂಪಾಯಿ ಹಣವೂ ಆರ್​​ಸಿಬಿ ಅಕೌಂಟ್​ಗೆ ಬಂದಿದೆ. ಪ್ರತಿ ಫ್ರಾಂಚೈಸಿಗೆ ಸೀಸನ್​​ಗೆ ಬಿಸಿಸಿಐ ಕಡೆಯಿಂದ 250 ಕೋಟಿ ಹಣ ಸಿಗಲಿದೆ. ಇದ್ರ ಜೊತೆಗೆ ಕಪ್​ ಗೆದ್ದಿದ್ದಕ್ಕೆ 171 ಕೋಟಿ ಪರ್ಫಾಮೆನ್ಸ್​ ಬೋನಸ್​ ಆರ್​​ಸಿಬಿಗೆ ಸಿಕ್ಕಿದ್ದು, ಒಟ್ಟು 421 ಹಣ ಶೇರ್​ ರೂಪದಲ್ಲಿ ಸಿಕ್ಕಿದೆ. ಟಿವಿ, ಡಿಜಿಟಲ್​ ರೈಟ್ಸ್​​, ಸೆಂಟ್ರಲ್​ ಸ್ಪಾನ್ಸರ್​​ಶಿಪ್​ನಿಂದ ಒಟ್ಟು 420 ಕೋಟಿ ಹಣ ಆರ್​​​ಸಿಬಿ ಪಾಲಾಗಿದೆ. ಎಲ್ಲಾ ಸೇರಿ ಬಿಸಿಸಿಐ ಕಡೆಯಿಂದ 861 ಕೋಟಿ ಹಣ ಆರ್​​​ಸಿಬಿ ಖಜಾನೆ ಸೇರಿದೆ.
ಇದನ್ನೂ ಓದಿ: ಗಿಲ್ ‘ಯಶಸ್ವಿ’ ಶತಕ ವೈಭವ, ಪಂತ್​ ಫೆಂಟಾಸ್ಟಿಕ್.. ಆಂಗ್ಲರ ನಾಡಲ್ಲಿ ಹೇಗಿದೆ ತಾಳ್ಮೆಯ ಆಟ..?
ಸ್ಪಾನ್ಸರ್​ಶಿಪ್​, ಟಿಕೆಟ್ಸ್​​, ಮರ್ಚಂಡೈಸ್​ದಲೂ ಕೋಟಿ ಕೋಟಿ
ಬಿಸಿಸಿಐ ಶೇರ್ಸ್​​ನ ಹೊರತಾಗಿ ಕೋಟಿ ಕೋಟಿ ಹಣ ಫ್ರಾಂಚೈಸಿಗೆ ಬಂದಿದೆ. ಫ್ರಾಂಚೈಸಿಯ ವೈಯಕ್ತಿಯ ಸ್ಪಾನ್ಸರ್​ಶಿಪ್, ಮರ್ಚಂಡೈಸ್, ಹೋಮ್​​ಗ್ರೌಂಡ್​​ನಲ್ಲಾಡಿದ 7 ಪಂದ್ಯಗಳ ಟಿಕೆಟ್​​ನಿಂದ ಕೋಟಿ ಕೋಟಿ ಆದಾರ ಆರ್​​ಸಿಬಿ ಬೊಕ್ಕಸ ಸೇರಿದೆ. ಅಂದಾಜು 220 ಕೋಟಿ ಹಣವನ್ನ ಈ ಮೂಲಗಳಿಂದ ಇದೊಂದು ಸೀಸನ್​ನಲ್ಲಿ ಆರ್​​ಸಿಬಿ ಫ್ರಾಚೈಸಿ ಸಂಪಾದಿಸಿದೆ.
ಕೋಟಿ, ಕೋಟಿ ಆದಾಯ
- ಡಿಜಿಟಲ್​ ಮೀಡಿಯಾ - 10 ಕೋಟಿ
- ಮರ್ಚಂಡೈಸ್​ - 30 ಕೋಟಿ
- ಟಿಕೆಟ್ಸ್​​ - 60 ಕೋಟಿ
- ಸ್ಪಾನ್ಸರ್​​ಶಿಪ್​, ಅಡ್ವೈಟೈಸಿಂಗ್​ - 120 ಕೋಟಿ
ಯುನೈಟೆಡ್​ ಸ್ಪಿರಿಟ್ಸ್​ನ ಶೇರ್ಸ್​ ದುಬಾರಿ.. ದುಬಾರಿ..!​
ಚೊಚ್ಚಲ ಕಪ್​ ಗೆದ್ದ ಬಳಿಕ ಯುನೈಟೆಡ್​ ಸ್ಪಿರಿಟ್ಸ್​ ಶೇರ್ಸ್​ ಬೆಲೆ ಕೂಡ ಗಗನಕ್ಕೇರಿದೆ. ಲಂಡನ್ ಮೂಲದ ಕಂಪನಿಗೆ ಚೊಚ್ಚಲ ಟ್ರೋಫಿ ಭರಪೂರ​ ಐಶ್ವರ್ಯವನ್ನ ತಂದಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 2163 ಕೋಟಿ ರೂಪಾಯಿಯಷ್ಟು ಯುನೈಟೆಡ್​ ಸ್ಪಿರಿಟ್ಸ್​ನ ಶೇರ್ಸ್​​ ಬೆಲೆ ಹೆಚ್ಚಾಗಿದೆ ಅನ್ನೋದು ಷೇರು ಮಾರುಕಟ್ಟೆಯ ಟಾಕ್​ ಆಗಿದೆ.
2025 ಆರ್​​ಸಿಬಿ ಫ್ರಾಂಚೈಸಿ ಪಾಲಿಗೆ ಅದೃಷ್ಟದ ವರ್ಷ ಅನಿಸ್ತಿದೆ. 17 ವರ್ಷಗಳ ಸುದೀರ್ಘ ಕಾಯುವಿಕೆಗೆ ಬ್ರೇಕ್​ ಬಿದ್ದು, ಟ್ರೋಫಿ​ ಕೊರಗನ್ನ ನೀಗಿಸಿಕೊಂಡ ಹರ್ಷ ಒಂದು ಕಡೆ ಇದೆ. ಇನ್ನೊಂದು ಕಡೆ ಕಪ್​ ಜೊತೆಗೆ ಕೋಟಿ ಕೋಟಿ ಹಣ ಕೂಡ ಆರ್​​ಸಿಬಿಯ ಖಜಾನೆ ಸೇರಿದೆ. ಬಂಪರ್​​ ಲಾಟರಿ ಹೊಡೆದ ಮೇಲೆ ಇದನ್ನ ಅದೃಷ್ಟ ವರ್ಷ ಅನ್ನದೇ ಇರೋಕಾಗುತ್ತಾ?
ಇದನ್ನೂ ಓದಿ: ಕೊಹ್ಲಿ ಸ್ಲಾಟ್​​ಗೆ ನ್ಯಾಯ ಸಿಕ್ಕಾಗಿದೆ.. ಆಂಗ್ಲರ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿದೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ