/newsfirstlive-kannada/media/post_attachments/wp-content/uploads/2024/11/IPL_2025_5.jpg)
ಐಪಿಎಲ್ನ ಮೆಗಾ ಹರಾಜಿನಲ್ಲಿ ಎಲ್ಲ ಆಟಗಾರರು ಭಾರೀ ದುಡ್ಡನ್ನು ಕಮಾಯಿ ಮಾಡುತ್ತಿದ್ದಾರೆ. ಶ್ರೇಯಸ್ ಅಯ್ಯರ್, ಚಹಾಲ್, ರಿಷಬ್ ಪಂತ್, ಅರ್ಷ್ದೀಪ್ ಸಿಂಗ್ ಸೇರಿದಂತೆ ಆಟಗಾರರು ನಿರೀಕ್ಷೆಗೂ ಮೀರಿ ಹಣವನ್ನು ಜೇಬಿಗೆ ಇಳಿಸಿದ್ದಾರೆ. ಅದರಂತೆ ವಿದೇಶಿ ಪ್ಲೇಯರ್ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಕೋಟಿ ಕೋಟಿ ಹಣ ಸುರಿದು ಖರೀದಿ ಮಾಡಿದೆ.
ಆರ್ಸಿಬಿ ಫ್ರಾಂಚೈಸಿ ಆಕ್ಷನ್ನಲ್ಲಿ ಮೊದಲ ಆಟಗಾರನಾಗಿ ಲಿಯಾಮ್ ಲಿವಿಂಗ್ಸ್ಟನ್ ಅವರನ್ನು 8.75 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದೆ. ಇಂಗ್ಲೆಂಡ್ ಕ್ರಿಕೆಟರ್ ಆಗಿರುವ ಲಿವಿಂಗ್ಸ್ಟನ್ ಹೊಡಿ ಬಡಿ ಆಟಕ್ಕೆ ಖ್ಯಾತಿ ಪಡೆದ ಆಟಗಾರ. ಯಾವ ತಂಡದಲ್ಲೇ ಇರಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಎತ್ತಿದ ಕೈ. ಆಲ್ರೌಂಡರ್ ಆಗಿರುವ ಲಿಯಾಮ್ ಲಿವಿಂಗ್ಸ್ಟನ್ ತಂಡಕ್ಕೆ ಕೊಡುಗೆ ನೀಡುವುದಂತೂ ಗ್ಯಾರಂಟಿ. ಹೀಗಾಗಿಯೇ ಮೆಗಾ ಆಕ್ಷನ್ನಲ್ಲಿ ಆರ್ಸಿಬಿ ಮಣೆ ಹಾಕಿದೆ.
ಇದನ್ನೂ ಓದಿ:IPL 2025 Auction; ಸ್ಪಿನ್ನರ್ ಚಹಾಲ್ಗೂ ಒಲಿದ ಬಂದ ಲಕ್ಷ್ಮಿ.. ಬಾರೀ ಮೊತ್ತಕ್ಕೆ ಸೇಲ್ ಆದ RCB ಮಾಜಿ ಪ್ಲೇಯರ್
ಬೆಂಗಳೂರು ಟೀಮ್ಗೆ ಲಿವಿಂಗ್ಸ್ಟನ್ ಬಂದಿದ್ದರಿಂದ ಸದ್ಯ 4 ಜನ ಆಟಗಾರರು ಆದಂತೆ ಆಗಿದೆ. ಆಕ್ಷನ್ನಲ್ಲಿ ಇನ್ನು ಕೆಲವು ಆಟಗಾರರನ್ನು ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಬೇಕಿದೆ. ರಿಷಬ್ ಪಂತ್, ಚಹಾಲ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಎಲ್ಲ ಬೇರೆ ಬೇರೆ ಟೀಮ್ಗೆ ಸೇರ್ಪಡೆ ಆಗಿದ್ದಾರೆ. ಹೀಗಾಗಿ ಆರ್ಸಿಬಿ ಯಾವ ಸ್ಟಾರ್ ಆಟಗಾರರನ್ನು ಖರೀದಿ ಮಾಡುತ್ತೋ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ