/newsfirstlive-kannada/media/post_attachments/wp-content/uploads/2025/04/RAJAT_PATIDHAR.jpg)
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೇನು ಕೆಲವೇ ಕ್ಷಣಗಳಲ್ಲಿ ಅಖಾಡಕ್ಕೆ ಧುಮಕಲಿದೆ. ಇದರ ನಡುವೆ ಆರ್ಸಿಬಿಯ ಪ್ಲೇಯಿಂಗ್- 11 ರಲ್ಲಿ ಬದಲಾವಣೆ ಏನಾದರು ಮಾಡುತ್ತಾ ಎನ್ನುವ ಕುತೂಹಲವಿದೆ. ಕನ್ನಡಿಗನಿಗೆ ಬೆಂಚ್ ಕಾಯ್ದಿರಿಸಿ ಇನ್ನೊಬ್ಬ ಯುವ ಕನ್ನಡಿಗನಿಗೆ ಸ್ಥಾನ ಕೊಡವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಅದ್ಭುತವಾಗಿ ಬ್ಯಾಟ್ ಬೀಸಿದ್ದ ಆರ್ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಪಡಿಕ್ಕಲ್ ಅವರನ್ನು ಬೆಂಚ್ಗೆ ಕೂರಿಸಬಹುದು. ಏಕೆಂದರೆ ಈ ಹಿಂದಿನ ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟಿಂಗ್ ಹೇಳುವಂತೆ ಏನು ಇರಲಿಲ್ಲ. ಹೀಗಾಗಿ ಇವರ ಬದಲಿಗೆ ಯುವ ಕನ್ನಡಿಗ ಮನೋಜ್ ಭಾಂಡಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಆರ್ಸಿಬಿ ತಂಡದ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮನೋಜ್ ಭಾಂಡಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.
ರಾಜಸ್ಥಾನ್ ಜೊತೆಗಿನ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿಸಲಾಗಿತ್ತು. ಇವರ ಬದಲಿಗೆ ಬೌಲರ್ ಸುಯಶ್ ಶರ್ಮಾಗೆ ಅವಕಾಶ ನೀಡಲಾಗಿತ್ತು. ಅದರಂತೆ ಇಂದಿನ ಪಂದ್ಯದಲ್ಲಿ ಪಡಿಕ್ಕಲ್ ಬದಲಿಗೆ ಮನೋಜ್ ಭಾಂಡಗೆ ಚಾನ್ಸ್ ಸಿಗುತ್ತೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಪಂದ್ಯ ಆರಂಭದ ನಂತರವೇ ಉತ್ತರ ಸಿಗಲಿದೆ. ಮನೋಜ್ ಭಾಂಡಗೆ ಆಲ್ರೌಂಡರ್ ಆಗಿದ್ದು ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸಬಲ್ಲರು. ಏಕೆಂದರೆ ಇವರು 2024ರ ಮಹಾರಾಜ ಟಿ20 ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು.
ಮನೋಜ್ ಭಾಂಡಗೆ ಈ ಹೆಸರು RCB ಅಭಿಮಾನಿಗಳಿಗೆ ಚಿರಪರಿಚಿತ. ಕಳೆದ ಮೂರು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಯುವ ಕನ್ನಡಿಗ ಸ್ಥಾನ ಪಡೆದಿದ್ದಾರೆ. ಆದರೆ 2023, 2024 ಹಾಗೂ ಈ ವರ್ಷನೂ ಬೆಂಚ್ಗೆ ಸೀಮಿತವಾಗಿದ್ದು ಒಂದೇ ಒಂದು ಅವಕಾಶಕ್ಕಾಗಿ ಶಬರಿಯಂತೆ ಕಾಯುತ್ತಿದ್ದಾರೆ. ಆರ್ಸಿಬಿಯ ತವರಿನಲ್ಲೇ ಮನೋಜ್ ಭಾಂಡಗೆ ಅವರ ಆಸೆ ನೆರವೇರುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ