/newsfirstlive-kannada/media/post_attachments/wp-content/uploads/2025/04/RCB_TEAM-1-1.jpg)
ಭಾನುವಾರದ ಡಬಲ್​ ಹೆಡ್ಡರ್​ನಲ್ಲಿ ರಾಜಸ್ತಾನ್ ರಾಯಲ್ಸ್​ ವಿರುದ್ಧ ಪಂಜಾಬ್ ಕಿಂಗ್ಸ್​ ಗೆಲುವು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್​ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್​ ಹೋಗುವ ತಂಡಗಳು ಯಾವ್ಯಾವು ಎಂಬುದು ಕನ್​ಫರ್ಮ್ ಆಗಿದೆ. ಇದರ ಬೆನ್ನಲ್ಲೇ ಪ್ಲೇ ಆಫ್​ನ 4ನೇ ಸ್ಥಾನಕ್ಕೆ ಎಂಟ್ರಿ ಕೊಡುವ ಟೀಮ್ ಯಾವುದು ಎನ್ನುವುದು ಈಗ ಕುತೂಹಲವಾಗಿದೆ.
ಗುಜರಾತ್​ ಟೈಟನ್ಸ್​, ಆರ್​ಸಿಬಿ ಹಾಗೂ ಪಂಜಾಬ್​ ಕಿಂಗ್ಸ್​ ಪಾಯಿಂಟ್ ಟೇಬಲ್​ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆಯುವ ಮೂಲಕ ಪ್ಲೇ ಆಫ್​ ಅನ್ನು ಕನ್​ಫರ್ಮ್ ಮಾಡಿಕೊಂಡಿವೆ. ಉಳಿದ ತಂಡಗಳು ಕಡಿಮೆ ಅಂಕಗಳನ್ನು ಹೊಂದಿರುವುದರಿಂದ ಪ್ಲೇ ಆಫ್​ನಿಂದ ಹೊರ ಬಿದ್ದಿವೆ. ಆದರೆ 4ನೇ ಸ್ಥಾನದ ಪ್ಲೇ ಆಫ್​ಗಾಗಿ ಮೂರು ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆದಿದೆ. ಆದರೆ ಮುಂದಿನ ಎಲ್ಲ ಪಂದ್ಯಗಳನ್ನು ಈ ತಂಡಗಳು ಗೆದ್ದರೇ ಮಾತ್ರ 4ನೇ ಸ್ಥಾನದ ಪ್ಲೇ ಆಫ್​ ದಕ್ಕುತ್ತದೆ.
ಮುಂಬೈ ಇಂಡಿಯನ್ಸ್​
ಮುಂಬೈ ಇಂಡಿಯನ್ಸ್​ ಸದ್ಯ 14 ಅಂಕ ಪಡೆದಿದ್ದು ಇನ್ನು ಎರಡು ಮ್ಯಾಚ್​ಗಳಿದ್ದು ಈ ಎರಡರಲ್ಲೂ ಗೆಲುವು ಪಡೆದರೆ ಒಟ್ಟು 18 ಅಂಕಗಳಿಂದ ಪ್ಲೇ ಆಫ್​ಗೆ ಬರುತ್ತದೆ. ಒಳ್ಳೆಯ ರನ್​ರೇಟ್ ಇದ್ದರೇ ಅವಕಾಶ ಸಿಗುವುದು ದಟ್ಟವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್​ 13 ಅಂಕ ಪಡೆದಿದ್ದು ಇನ್ನೂ 2 ಪಂದ್ಯ ಆಡಲಿದೆ. ಈ ಎರಡನ್ನು ಗೆದ್ದರೇ 17 ಅಂಕ ಪಡೆದು ನೆಟ್​ ರನ್​ರೇಟ್​ ಮೇಲೆ ಪ್ಲೇಆಫ್ ನಿಗದಿಯಾಗುತ್ತದೆ.
ಲಕ್ನೋ ತಂಡ
ರಿಷಬ್ ಪಂತ್ ನೇತೃತ್ವದ ಲಕ್ನೋ ತಂಡ ಪ್ಲೇ ಆಫ್​ಗೆ ಬರಬೇಕು ಎಂದರೆ ದೊಡ್ಡ ಪವಾಡವೇ ನಡೆಯಬೇಕು. ಏಕೆಂದರೆ ಉಳಿದ 3 ಪಂದ್ಯಗಳನ್ನು ಗೆಲ್ಲಬೇಕು. ಜೊತೆಗೆ ಅಧಿಕ ರನ್​ರೇಟ್​ ಇರಬೇಕು. ಆವಾಗ ಉಳಿದ ತಂಡಗಳ ಫಲಿತಾಂಶದ ಮೇಲೆ ಲಕ್ನೋ ತಂಡದ ಪ್ಲೇಆಫ್​ ನಿರ್ಧಾರ ವಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ