/newsfirstlive-kannada/media/post_attachments/wp-content/uploads/2025/06/rcb27.jpg)
ಬೆಂಗಳೂರು: ನಿನ್ನೆ ಯಾರು ಊಹಿಸಲಾರದ ಘಟನೆ ನಡೆದು ಹೋಗಿದೆ. ಏಕಾಏಕಿ ಚಿನ್ನಸ್ವಾಮಿ ಮೈದಾನಕ್ಕೆ ಅಪಾರ ಅಭಿಮಾನಿಗಳು ಹರಿದು ಬಂದ ಪರಿಣಾಮ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಘೋರ ದುರಂತದಲ್ಲಿ 11 ಮಂದಿ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: RCB ವಿಜಯೋತ್ಸವ, ಪ್ರಾಣ ಬಿಟ್ಟ ಅಭಿಮಾನಿಗಳು.. ಮಾತೇ ಬರ್ತಿಲ್ಲ, ವಿರಾಟ್ ಕೊಹ್ಲಿ ಸಂತಾಪ!
ಇದೇ ವಿಚಾರದ ಬಗ್ಗೆ ಆರ್‌ಸಿಬಿ ಟ್ವೀಟರ್ ಖಾತೆಯಲ್ಲಿ ಸಂತಾಪ ಸೂಚಿಸಿದೆ. ಜೊತೆಗೆ RCBಯಿಂದ ಮೃತರಿಗೆ ಪರಿಹಾರ ಧನ ಘೋಷಣೆ ಮಾಡಲಾಗಿದೆ. ಪ್ರತಿಯೊಬ್ಬ ಮೃತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಧನ ಘೋಷಣೆ ಮಾಡಿದೆ. ಇಷ್ಟೇ ಅಲ್ಲದೇ ಗಾಯಾಳುಗಳಿಗೂ ಕೂಡ ಹಣದ ವ್ಯವಸ್ಥೆ ಮಾಡುವುದಾಗಿ RCB ತಿಳಿಸಿದೆ.
ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ನಡೆದ ದುರದೃಷ್ಟಕರ ಘಟನೆಯು ಆರ್‌ಸಿಬಿ ಕುಟುಂಬಕ್ಕೆ ತೀವ್ರ ನೋವು ಮತ್ತು ನೋವನ್ನುಂಟು ಮಾಡಿದೆ. ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ, ಆರ್‌ಸಿಬಿ ಮೃತರ 11 ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದೆ. ಇದರ ಜೊತೆಗೆ, ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳಿಗೂ ಆರ್‌ಸಿಬಿ ಕೇರ್ಸ್ ಎಂಬ ನಿಧಿಯನ್ನು ಸಹ ರಚಿಸಲಾಗುತ್ತಿದೆ. ನಮ್ಮ ಅಭಿಮಾನಿಗಳು ನಾವು ಮಾಡುವ ಎಲ್ಲದರಲ್ಲೂ ಯಾವಾಗಲೂ ಹೃದಯಭಾಗದಲ್ಲಿ ಇರುತ್ತಾರೆ. ನಾವು ದುಃಖದಲ್ಲಿ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಬರೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ