ಫ್ಯಾನ್ಸ್​ ತಲೆಗೆ ಕೆಲಸ ಕೊಟ್ಟ RCB.. ರಿಟೈನ್ ಪ್ಲೇಯರ್ಸ್​ ಹೆಸರು ಅಭಿಮಾನಿಗಳು ಹೇಳಬೇಕಾ?

author-image
Bheemappa
Updated On
ಫ್ಯಾನ್ಸ್​ ತಲೆಗೆ ಕೆಲಸ ಕೊಟ್ಟ RCB.. ರಿಟೈನ್ ಪ್ಲೇಯರ್ಸ್​ ಹೆಸರು ಅಭಿಮಾನಿಗಳು ಹೇಳಬೇಕಾ?
Advertisment
  • ರಿಟೈನ್ ಮಾಡಿಕೊಳ್ಳಲು ಹೊಸದೊಂದು ಐಡಿಯಾ ಇದೆನಾ?
  • ಕೊಹ್ಲಿ, ಪಾಟೀದರ್, ಸಿರಾಜ್ ಸೇರಿ ಕೆಲ ಹೆಸರು ಇದರಲ್ಲಿವೆ
  • ಆರ್​ಸಿಬಿಯ ಈ ಪೋಸ್ಟ್​ನಲ್ಲಿ ಆಟಗಾರರ ಹೆಸರು ಹುಡುಕಿ

ಬಿಸಿಸಿಐ ನಿಯಮದಂತೆ ಎಲ್ಲ ಐಪಿಎಲ್ ಫ್ರಾಂಚೈಸಿಗಳು ಇಂದು ತಮ್ಮ ಧಾರಣಪಟ್ಟಿ ಅಂದರೆ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಹೆಸರು ಘೋಷಣೆ ಮಾಡಬೇಕಿದೆ. ಇದಕ್ಕಾಗಿ ಎಲ್ಲ ಟೀಮ್​ಗಳು ಈಗಾಗಲೇ ತಯಾರಿ ನಡೆಸಿಕೊಂಡಿದ್ದು ಯಾವ್ಯಾವ ಪ್ಲೇಯರ್​​ಗಳನ್ನ ಉಳಿಸಿಕೊಳ್ಳುತ್ತಾರೆ ಎಂದು ಇನ್ನೇನು ಕೆಲ ಸಮಯದಲ್ಲಿ ಗೊತ್ತಾಗಲಿದೆ. ಸದ್ಯ ಇದರ ಬೆನ್ನಲ್ಲೇ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಜಲ್ ರೀತಿಯಲ್ಲಿ ರಿಟೈನ್ ಆಗುವ ಹೆಸರುಗಳನ್ನು ಬಿಟ್ಟಿದ್ದು ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದೆ.

ಸದ್ಯ ಆರ್​ಸಿಬಿ ರಿಟೈನ್ ಮಾಡಿಕೊಳ್ಳುವ ಹೆಸರುಗಳನ್ನು ಪಜಲ್ (ಸುಡೋಕು) ರೀತಿಯಲ್ಲಿರುವ ಫೋಟೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ನಿಯಮದ ಪ್ರಕಾರ ಯಾವುದೇ ತಂಡ 6 ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಬೇಕು. ಆದರೆ ಆರ್​ಸಿಬಿ ಪೋಸ್ಟ್ ಮಾಡಿರುವ ಪಜಲ್​ನಲ್ಲಿ 9 ಪ್ಲೇಯರ್ಸ್​ ಹೆಸರುಗಳು ಬರುತ್ತಿವೆ. ಆದರೆ ಆರ್​ಸಿಬಿ ಆಯ್ಕೆ ಮಾಡಿಕೊಳ್ಳುವ ಆ 6 ಪ್ಲೇಯರ್ಸ್ ಯಾರು ಇರಬಹುದು ಎನ್ನುವುದು ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ:RCB ಫ್ರಾಂಚೈಸಿಯಿಂದ ಹೊರಬಿತ್ತು ಬಿಗ್​ ನ್ಯೂಸ್.. ವಿರಾಟ್ ಕೊಹ್ಲಿಗೆ ದೊಡ್ಡ ಜವಾಬ್ದಾರಿ?

publive-image

ಇನ್ನು ಮೂಲಗಳ ಪ್ರಕಾರ ಬೆಂಗಳೂರು ಫ್ರಾಂಚೈಸಿ 4 ಪ್ಲೇಯರ್ಸ್​ಗಳನ್ನ ಮಾತ್ರ ಉಳಿಸಿಕೊಳ್ಳಲ್ಲಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಮೊದಲನೇ ಆಯ್ಕೆ ಆಗಿ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿಕೊಳ್ಳಲಿದೆ. 2ನೇ ಪ್ಲೇಯರ್ ಆಗಿ ಮೊಹಮ್ಮದ್ ಸಿರಾಜ್ ಅದ್ರೆ 3ನೇ ಆಟಗಾರನಾಗಿ ರಜತ್ ಪಾಟೀದರ್ ಆಗಿದ್ದಾರೆ. ಇವರೆಲ್ಲ ದೇಶಿಯ ಆಟಗಾರರು ಆದರೆ ಫಾರಿನ್ ಪ್ಲೇಯರ್ ಯಾರು ಎಂದು ನೋಡುವುದಾದರೆ 4ನೇ ಪ್ಲೇಯರ್​ ಆಗಿ ವಿಲ್ ಜಾಕ್ಸ್ ಅವರನ್ನು ಆರ್​ಸಿಬಿ ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇವೆಲ್ಲ ಗೊತ್ತಾಗಬೇಕು ಎಂದರೆ ಇನ್ನು ಕೆಲ ಸಮಯ ಕಾಯಬೇಕಿದೆ.


">October 30, 2024

ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿರುವ ಈ ಪೋಸ್ಟ್​ಗೆ ಸಾಕಷ್ಟು ಅಭಿಮಾನಿಗಳು ತಮಗೆ ಇಷ್ಟ ಬಂದಂತೆ ಉತ್ತರ ಕೊಟ್ಟಿದ್ದಾರೆ. ಆರ್​ಸಿಬಿ ಈ ಪಜಲ್​ ಗೇಮ್​ಗೆ ಹಲವಾರು ಅಭಿಮಾನಿಗಳು ಉತ್ತರ ಕೊಟ್ಟಿದ್ದಾರೆ. ಆದರೆ ಇದರಲ್ಲಿ 6ಕ್ಕಿಂತ ಹೆಚ್ಚು ಹೆಸರುಗಳು ಬರುತ್ತಿರುವುದು ಫ್ಯಾನ್ಸ್​ಗೆ ತಲೆ ಕೆಟ್ಟು ಹೋಗಿದೆ.


">October 30, 2024

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment