/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಮುಂದಿನ ಸೀಸನ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಇದರ ಮಧ್ಯೆ ಒಂದು ವೇಳೆ ಕೊಹ್ಲಿ ಕೈ ಕೊಟ್ಟರೆ ಆರ್ಸಿಬಿ ತಂಡವನ್ನು ಲೀಡ್ ಮಾಡೋರು ಯಾರು? ಅನ್ನೋ ಚರ್ಚೆ ಶುರುವಾಗಿದೆ.
ರಜತ್ ಪಾಟಿದಾರ್ಗೆ ಕ್ಯಾಪ್ಟನ್ಸಿ
ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ಗೆ ನಾಯಕತ್ವ ಪಟ್ಟ ಕಟ್ಟುವ ಬಗ್ಗೆ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಮಾತಾಡಿದ್ದಾರೆ. ರಜತ್ ಪಾಟಿದಾರ್ ಹೊಡಿಬಡಿ ಆಟಗಾರ. ಇವರು ಸ್ಪಿನ್ನರ್ಗಳ ವಿರುದ್ಧ ಸಖತ್ ಆಗಿ ಬ್ಯಾಟ್ ಬೀಸುತ್ತಾರೆ. ಪಾಟಿದಾರ್ ಒಳ್ಳೆಯ ಲೀಡರ್. ದೂರದೃಷ್ಟಿಯಿಂದ ರಜತ್ ಪಾಟಿದಾರ್ ಅವರಲ್ಲಿ ಲೀಡರ್ಶೀಪ್ ಕ್ವಾಲಿಟಿ ಬೆಳೆಸೋದು ಮುಖ್ಯ ಎಂದರು. ಈ ಮೂಲಕ ಪಾಟಿದಾರ್ ಮುಂದಿನ ಕ್ಯಾಪ್ಟನ್ ರೇಸ್ನಲ್ಲಿದ್ದಾರೆ ಅನ್ನೋ ಸ್ಫೋಟಕ ಸುಳಿವು ನೀಡಿದ್ರು.
ಯಾರು ಈ ರಜತ್ ಪಾಟಿದಾರ್?
2024ರ ಐಪಿಎಲ್‌ನಲ್ಲಿ ಆರ್ಸಿಬಿ ತಂಡದ ಬ್ಯಾಟಿಂಗ್ ಬಲವಾಗಿದ್ದವರು ರಜತ್ ಪಟಿದಾರ್. ಆರಂಭದ ಕೆಲವು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾದ್ರೂ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿ ಅಬ್ಬರಿಸಿದ್ರು. ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲರ್ಗಳಿಗೆ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಪಾಟಿದಾರ್ ಐಪಿಎಲ್ ಸಾಧನೆ
ಇದುವರೆಗೂ 27 ಐಪಿಎಲ್ ಪಂದ್ಯಗಳನ್ನು ಆಡಿರುವ ಪಟಿದಾರ್, 37.74 ಸರಾಸರಿ, 158.85 ಸ್ಟ್ರೈಕ್‌ರೇಟ್‌ನಲ್ಲಿ 799 ರನ್ ಗಳಿಸಿದ್ದಾರೆ. 112 ರನ್ ಅವರ ಹೈಎಸ್ಟ್ ಸ್ಕೋರ್ ಆಗಿದೆ. ಇದರ ಜೊತೆ 7 ಅರ್ಧಶತಕ ಕೂಡ ಬಾರಿಸಿದ್ದಾರೆ. ಈ ಪೈಕಿ 51 ಫೋರ್, 54 ಸಿಕ್ಸರ್ ಬಾರಿಸೋ ಮೂಲಕ ಗಮನ ಸೆಳೆದಿದ್ದಾರೆ. 2025ರ ಐಪಿಎಲ್‌ನಲ್ಲಿ ಆರ್ಸಿಬಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದು, ಕೊಹ್ಲಿ ಒಪ್ಪದೇ ಇದ್ದರೆ ಪಟಿದಾರ್ ಕೂಡ ನಾಯಕತ್ವದ ರೇಸ್‌ನಲ್ಲಿ ಇರಲಿದ್ದಾರೆ.
ಇದನ್ನೂ ಓದಿ:ಕೆ.ಎಲ್ ರಾಹುಲ್ಗೆ ಸುವರ್ಣಾವಕಾಶ; ಟೀಮ್ ಇಂಡಿಯಾದಲ್ಲಿ ಮಹತ್ವದ ಜವಾಬ್ದಾರಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ