/newsfirstlive-kannada/media/post_attachments/wp-content/uploads/2024/08/Kohli_Andy-Flower.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಕೇವಲ 4 ದಿನಗಳ ಮಾತ್ರ ಬಾಕಿ ಇದೆ. ಈ ಮೆಗಾ ಹರಾಜು ಪ್ರಕ್ರಿಯೆ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ. ಮುಂದಿನ ಸೀಸನ್ಗಾಗಿ ಬಲಿಷ್ಠ ತಂಡ ಕಟ್ಟಲು ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ಆರ್‌ಸಿಬಿ ತಂಡ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಮಾತ್ರ ರಿಟೈನ್ ಮಾಡಿಕೊಂಡು ಉಳಿದ ಎಲ್ಲರನ್ನು ರಿಲೀಸ್ ಮಾಡಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿಗೆ ಆರ್‌ಸಿಬಿ ಸಜ್ಜಾಗಿದೆ. ಇದಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಹೊಸ ಬೌಲಿಂಗ್ ಕೋಚ್ ನೇಮಕ ಆಗಿದ್ದಾರೆ. ಇದರ ಮಧ್ಯೆ ಐಪಿಎಲ್ ಆಕ್ಷನ್ಗಾಗಿ ತಾವು ಮಾಡಿಕೊಂಡಿರೋ ಪ್ಲಾನ್ ಬಗ್ಗೆ ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಮಾತಾಡಿದ್ದಾರೆ.
ಆಕ್ಷನ್ ಪ್ಲಾನ್ ಬಗ್ಗೆ ಆರ್‌ಸಿಬಿ ಮುಖ್ಯ ಕೋಚ್ ಏನಂದ್ರು?
ಮೆಗಾ ಆಕ್ಷನ್ಗೆ ಇನ್ನೇನು 4 ದಿನ ಮಾತ್ರ ಇದೆ. ನಾವು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಆರ್‌ಸಿಬಿ ಆಟಗಾರರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಹೆಚ್ಚು ಪಂದ್ಯಗಳನ್ನು ಆಡುತ್ತಾರೆ. ಈ ಸ್ಟೇಡಿಯಮ್ ಎಲ್ಲದಕ್ಕಿಂತಲೂ ಭಿನ್ನ. ಹಾಗಾಗಿ ಇಲ್ಲಿ ಆಡೋರಿಗೆ ಸ್ಪೆಷಲ್ ಕ್ವಾಲಿಟಿಗಳು ಇರಬೇಕಿದೆ. ಅದರಲ್ಲೂ ಹೆಚ್ಚು ಕೌಶಲ್ಯ ಹೊಂದಿರೋ ಆಟಗಾರರೇ ಬೇಕು ಎಂದರು.
ಸಿಂಪಲ್ ಆಗಿ ಪೇಸ್ ಬೌಲರ್ಸ್ ಇಟ್ಟುಕೊಂಡರೆ ವರ್ಕೌಟ್ ಆಗಲ್ಲ. ನಿರ್ದಿಷ್ಟ ಪ್ಲಾನ್ ಜೊತೆಗೆ ಕೆಲಸ ಮಾಡುವ ಬೌಲರ್ಸ್ ಬೇಕು. ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಟೆಂಪೋ ಜತೆಗೆ ಪವರ್ ಹಿಟ್ಟರ್ಸ್ ಇರಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಪವರ್ ಹಿಟ್ಟರ್ಸ್ ಮತ್ತು ಹೆಚ್ಚು ಕೌಶಲ್ಯ ಇರೋ ಬೌಲರ್ಗಳನ್ನೇ ಖರೀದಿ ಮಾಡುತ್ತೇವೆ ಎಂದರು.
ದಿನೇಶ್ ಕಾರ್ತಿಕ್, ವಿರಾಟ್ ಜತೆಗೆ ಚರ್ಚೆ
ಈಗಾಗಲೇ ಆರ್‌ಸಿಬಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಮೆಗಾ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು ಎಂದು ಭರ್ಜರಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ದಿನೇಶ್ ಕಾರ್ತಿಕ್, ನೂತನ ಬೌಲಿಂಗ್ ಕೋಚ್ ಓಂಕಾರ್ ಸಾಲ್ವಿ, ವಿರಾಟ್ ಕೊಹ್ಲಿ ಅವರೊಂದಿಗೆ ಆ್ಯಂಡಿ ಫ್ಲವರ್ ಚರ್ಚೆ ಮಾಡಿ ಲಿಸ್ಟ್ ರೆಡಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹರಾಜಿಗೆ ಮುನ್ನ RCB ಮಹತ್ವದ ಹೆಜ್ಜೆ; ಬೆಂಗಳೂರು ತಂಡ ಸೇರಿದ ಚಾಂಪಿಯನ್ ಕೋಚ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ