/newsfirstlive-kannada/media/post_attachments/wp-content/uploads/2024/04/Kohli_Andy-Flower.jpg)
2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಈ ವರ್ಷದ ಕೊನೆಗೆ 2025ರ ಮೆಗಾ ಐಪಿಎಲ್​ ಆಕ್ಷನ್​ ನಡೆಯಲಿದೆ. ಆಕ್ಷನ್​​ನಲ್ಲಿ ಬಲಿಷ್ಠ ಆಟಗಾರರ ಖರೀದಿ ಮಾಡಲು ಮಾಸ್ಟರ್​ ಪ್ಲಾನ್​ ಕೂಡ ಮಾಡಿಕೊಳ್ಳಲಾಗಿದೆ. ಇದರ ಮಧ್ಯೆ ಐಪಿಎಲ್​ ಆಕ್ಷನ್​ಗಾಗಿ ತಾವು ಮಾಡಿಕೊಂಡಿರೋ ಪ್ಲಾನ್​ ಬಗ್ಗೆ ಆರ್​​ಸಿಬಿ ಮುಖ್ಯ ಕೋಚ್​ ಆ್ಯಂಡಿ ಫ್ಲವರ್ ಮಾತಾಡಿದ್ದಾರೆ.
ಆಕ್ಷನ್​ ಪ್ಲಾನ್​ ಬಗ್ಗೆ ಆ್ಯಂಡಿ ಫ್ಲವರ್​​ ಏನಂದ್ರು?
ಆಕ್ಷನ್​ ಬಗ್ಗೆ ನಾನು ಈಗಲೇ ಮಾತಾಡುವುದಿಲ್ಲ. ಆದರೆ, ಆರ್​​ಸಿಬಿ ಆಟಗಾರರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಹೆಚ್ಚು ಪಂದ್ಯಗಳನ್ನು ಆಡುತ್ತಾರೆ. ಈ ಸ್ಟೇಡಿಯಮ್​ ಎಲ್ಲದಕ್ಕಿಂತಲೂ ಭಿನ್ನ. ಹಾಗಾಗಿ ಇಲ್ಲಿ ಆಡೋರಿಗೆ ಸ್ಪೆಷಲ್​ ಕ್ವಾಲಿಟಿಗಳು ಇರಬೇಕಿದೆ. ಅದರಲ್ಲೂ ಹೆಚ್ಚು ಕೌಶಲ್ಯ ಹೊಂದಿರೋ ಆಟಗಾರರೇ ಬೇಕು ಎಂದರು.
/newsfirstlive-kannada/media/post_attachments/wp-content/uploads/2024/08/Kohli_Andy-Flower.jpg)
ಸಿಂಪಲ್​ ಆಗಿ ಪೇಸ್​ ಬೌಲರ್ಸ್​ ಇಟ್ಟುಕೊಂಡರೆ ವರ್ಕೌಟ್​ ಆಗಲ್ಲ. ನಿರ್ದಿಷ್ಟ ಪ್ಲಾನ್​ ಜೊತೆಗೆ ಕೆಲಸ ಮಾಡುವ ಬೌಲರ್ಸ್​ ಬೇಕು. ಬ್ಯಾಟಿಂಗ್​ ವಿಚಾರಕ್ಕೆ ಬಂದರೆ ಟೆಂಪೋ ಜತೆಗೆ ಪವರ್​ ಹಿಟ್ಟರ್ಸ್​ ಇರಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಪವರ್​ ಹಿಟ್ಟರ್ಸ್​​ ಮತ್ತು ಹೆಚ್ಚು ಕೌಶಲ್ಯ ಇರೋ ಬೌಲರ್​ಗಳನ್ನೇ ಖರೀದಿ ಮಾಡುತ್ತೇವೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us