ಆರ್​​ಸಿಬಿಗೆ ಸ್ಫೋಟಕ ಆಲ್​ರೌಂಡರ್​ ಎಂಟ್ರಿ; ಲಿವಿಂಗ್​ಸ್ಟೋನ್​​ ಖರೀದಿಗೆ ಕಾರಣ ಬಿಚ್ಚಿಟ್ಟ ಕೋಚ್​

author-image
Ganesh Nachikethu
Updated On
IPL 2025: RCB ಸೇರಿದ್ದೇ ತಡ ಕೇವಲ 15 ಬಾಲ್​​ನಲ್ಲಿ 50 ರನ್​ ಚಚ್ಚಿದ್ದ ಸ್ಟಾರ್​ ಪ್ಲೇಯರ್​​
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು
  • ಆರ್​ಸಿಬಿಗೆ ಇಂಗ್ಲೆಂಡ್‌ ಸ್ಫೋಟಕ ಆಲ್‌ರೌಂಡರ್ ಎಂಟ್ರಿ!
  • ಲಿಯಾಮ್ ಲಿವಿಂಗ್​ಸ್ಟೋನ್ ಖರೀದಿಗೆ ಕಾರಣವೇನು?

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ ತಂಡದ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಅವರನ್ನು ಆರ್​​​ಸಿಬಿ ಖರೀದಿ ಮಾಡಿದೆ. ಆರ್​​ಸಿಬಿ ತಂಡಕ್ಕೆ ಸ್ಫೋಟಕ ಸ್ಪಿನ್​ ಆಲ್​ರೌಂಡರ್ ಅಗತ್ಯ ಇತ್ತು. ಹಾಗಾಗಿ ಮಾಸ್ಟರ್​ ಪ್ಲಾನ್​ ಮಾಡಿದ ಆರ್​​ಸಿಬಿ ಲಿಯಾಮ್​ ಲಿವಿಂಗ್​ಸ್ಟೋನ್​ ಅವರನ್ನು ಬಿಡ್​ ಮಾಡುವಲ್ಲಿ ಯಶಸ್ವಿಯಾಗಿದೆ.

ಆರಂಭದಲ್ಲೇ ಇವರನ್ನು ಬಿಡ್​ ಮಾಡಲು ಆರ್​ಸಿಬಿ ಕಣಕ್ಕಿಳಿಯಿತು. ಇತ್ತ ಆರ್​ಸಿಬಿ ಟಕ್ಕರ್ ನೀಡಲು ಹೈದರಾಬಾದ್ ಮುಂದಾಗಿತ್ತು. ಅಂತಿಮವಾಗಿ ಹೈದರಾಬಾದ್ 4 ಕೋಟಿಗೆ ತನ್ನ ಬಿಡ್ ನಿಲ್ಲಿಸಿತು. ಚೆನ್ನೈ ಸೂಪರ್​ ಕಿಂಗ್ಸ್​ ತಂಡ 7 ಕೋಟಿ ಬಿಡ್ ಮಾಡಿತು. ಕೊನೆಗೆ ಆರ್​ಸಿಬಿ 8.75 ಕೋಟಿ ನೀಡಿ ಇವರನ್ನು ಖರೀದಿ ಮಾಡಿದೆ.

ಐಪಿಎಲ್‌ನಲ್ಲಿ ಇದುವರೆಗೆ 39 ಪಂದ್ಯಗಳನ್ನಾಡಿರುವ ಲಿವಿಂಗ್​ಸ್ಟೋನ್ ಅವರು 939 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಇದರ ಜೊತೆಗೆ ಬೌಲಿಂಗ್​ನಲ್ಲಿ 11 ವಿಕೆಟ್​ ಕೂಡ ಉರುಳಿಸಿದ್ದಾರೆ.

ಆರ್​​ಸಿಬಿ ಹೆಡ್​ ಕೋಚ್​ ಏನಂದ್ರು?

ಬೆಂಗಳೂರು ತಂಡ ಸೇರಿದ ಲಿಯಾಮ್​​ ಲಿವಿಂಗ್​ಸ್ಟೋನ್ ಅವರಿಗೆ ಶುಭಾಶಯಗಳು. ನಮಗೆ ಬಹಳ ಖುಷಿ ಆಗುತ್ತಿದೆ. ಲಿವಿಂಗ್​ಸ್ಟೋನ್ ಬಹಳ ಡೇಂಜರಸ್​ ಮತ್ತು ವರ್ಸಟೈಲ್​ ಬ್ಯಾಟರ್​​. ಮಿಡಲ್​ ಆರ್ಡರ್​​ನಲ್ಲಿ ಆರ್​ಸಿಬಿಗೆ ನೆರವಾಗಬಲ್ಲ ಬ್ಯಾಟರ್​. ಮ್ಯಾಚ್​ ಗೆಲ್ಲಿಸೋ ಸಾಮರ್ಥ್ಯ ಅವರಿಗಿದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment