ಪ್ಯಾಡ್ ಕಟ್ಟಿ ಕಣಕ್ಕಿಳಿದ್ರೆ ರನ್ ಸುನಾಮಿ ಎಬ್ಬಿಸುವ ಆಟಗಾರ DK
ದಿನೇಶ್ ಕಾರ್ತಿಕ್ಗೆ ಐಪಿಎಲ್ ಎಲ್ಲವನ್ನೂ ಕೊಟ್ಟಿದೆ, ಆದರೆ..!
ನೇಮ್ ಅಂಡ್ ಫೇಮ್ ಇದ್ರೂ ಡಿಕೆಗೆ ಈಗಲೂ ಒಂದು ಕೊರಗು
ದಿನೇಶ್ ಕಾರ್ತಿಕ್ಗೆ ಐಪಿಎಲ್ ಎಲ್ಲವನ್ನ ಕೊಟ್ಟಿದೆ. ಅಭಿಮಾನಿಗಳು ದೇವರುಗಳು ಡಿಕೆಯನ್ನು ತಲೆಮೇಲೆ ಹೊತ್ತು ಮೆರೆಸ್ತಿದ್ದಾರೆ. ಇಷ್ಟೆಲ್ಲಾ ನೇಮ್ ಅಂಡ್ ಫೇಮ್ ಇದ್ರೂ ಡಿಕೆಗೆ ಈಗಲೂ ಒಂದು ಕೊರಗು ಕಾಡ್ತಿದೆ.
ದಿನೇಶ್ ಕಾರ್ತಿಕ್..! ಪ್ಯಾಡ್ ಕಟ್ಟಿ ಕಣಕ್ಕಿಳಿದ್ರೆ ರನ್ ಸುನಾಮಿ ಎಬ್ಬಿಸುವ ಆಟಗಾರ. ಈತನಿಗೆ ಬೌಲರ್ ಮ್ಯಾಟರ್ ಅಲ್ಲವೇ ಅಲ್ಲ. ಗೊತ್ತಿರೋದೊಂದೇ ದಂಡಂ ದಶಗುಣಂ ಆಟ. ಹೀಗಾಗಿನೇ ಡಿಕೆ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಐಪಿಎಲ್ನಲ್ಲಿ ಆರ್ಸಿಬಿ ಪರ ಡಿಕೆ ಆರ್ಭಟ ಜೋರಾಗಿದೆ. ಫಿನಿಶಿಂಗ್ನಲ್ಲಿ ಜಾದೂ ಮಾಡ್ತಿದ್ದಾರೆ. ಐಪಿಎಲ್ನಿಂದ ಮನೆಮಾತಾದ ದಿನೇಶ್ ಕಾರ್ತಿಕ್ಗೆ ಅದೇ ಐಪಿಎಲ್ ಎಂದೆಂದೂ ಮರೆಲಾಗದ ನೋವನ್ನು ಕೊಟ್ಟಿದೆ. ಎಲ್ಲಾ ಇದ್ರೂ ಆ ಒಂದು ಡ್ರೀಮ್ ಈಡೇರಲಿಲ್ಲ ಅನ್ನೋ ಕೊರಗು ಈಗಲೂ ಅವರನ್ನು ಕಾಡ್ತಿದೆ.
ಇದನ್ನೂ ಓದಿ:ಧೋನಿಯನ್ನು ಹುಡ್ಕೊಂಡು ಹೋಗಿದ್ದ ಕೊಹ್ಲಿಗೆ ಸಿಕ್ಕಿದೆ ಸ್ಪೆಷಲ್ ಮೆಸೇಜ್.. ಇದು RCB ಫ್ಯಾನ್ಸ್ಗೆ ಖುಷಿ ಸುದ್ದಿ..!
2008 ರಲ್ಲಿ ಐಪಿಎಲ್ ಜನ್ಮತಾಳಿತು. ಆಗ ತಾನೇ ಪ್ರವರ್ಧಮಾನಕ್ಕೆ ಬಂದಿದ್ದ ಡಿಕೆ ಹರಾಜಿನಲ್ಲಿ ಸಿಎಸ್ಕೆ ತಂಡ ತನ್ನನ್ನ ಖರೀದಿಸುತ್ತೆ ಅನ್ನೋ ಅತಿಯಾದ ವಿಶ್ವಾಸದಲ್ಲಿದ್ರು. ಯಾಕಂದ್ರೆ ಸಿಎಸ್ಕೆ ಮಾಲೀಕ ತಮಿಳುನಾಡಿನವರು. ತಾನು ಕೂಡ ಅದೇ ರಾಜ್ಯದವನು. ಹಾಗಾಗಿ ತಾನು ಚೊಚ್ಚಲ ಐಪಿಎಲ್ನಲ್ಲಿ ತವರಿನ ಫ್ರಾಂಚೈಸಿ ಪರ ಆಡುವುದು ಫಿಕ್ಸ್ ಎಂದೇ ಭಾವಿಸಿದ್ರು. ಧೋನಿಯನ್ನ ಸಿಎಸ್ಕೆ ಬಿಡ್ ಮಾಡಿದ ಮೇಲಂತೂ ಆ ನಿರೀಕ್ಷೆ ಇನ್ನಷ್ಟು ಹೆಚ್ಚಾಯ್ತು. ಯಾಕಂದ್ರೆ ಡಿಕೆ, ಧೋನಿ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ರು.
ಇದನ್ನೂ ಓದಿ:Rain alert: ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ
ಹಾಗಾಗಿ ಕಣ್ಣು ಪಿಟುಕಿಸದೇ ನಾಲ್ಕು ತಾಸು ಇಂಗ್ಲೆಂಡ್ನಲ್ಲಿ ಟಿವಿ ಮುಂದೆ ಕೂತಿದ್ರು. ಆದ್ರೆ ಚೆನ್ನೈ ತಂಡ ಡಿಕೆಯನ್ನ ಖರೀದಿಸಲೇ ಇಲ್ಲ. ಇದರಿಂದ ಬೇಸರಗೊಂಡಿದ್ದ ಡಿಕೆ ರೂಮ್ನಿಂದ ಹೊರನಡೆದಿದ್ರು. ಕೊನೆಗೆ ದಿನೇಶ್ ಕಾರ್ತಿಕ್ರನ್ನ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ ಮಾಡ್ತಂತೆ. ಈ ವಿಚಾರವನ್ನ ಡಿಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್