/newsfirstlive-kannada/media/post_attachments/wp-content/uploads/2024/05/Dinesh-Karthik-4-1.jpg)
ಬುಧವಾರ ಐಪಿಎಲ್ ಎಲಿಮಿನೇಟರ್ ಪಂದ್ಯ ನಡೆಯಿತು. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನ್ನು ಎದುರಿಸಿತು. ಈ ನಿರಾಶಾದಾಯಕ ಸೋಲಿನ ನಂತರ ಆರ್​ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ನಿವೃತ್ತಿ ಪಡೆದುಕೊಂಡರು.
ಈ ವೇಳೆ ಆರ್​ಸಿಬಿ ಹಾಗೂ ರಾಜಸ್ಥಾನ್ ಆಟಗಾರರು ದಿನೇಶ್ ಕಾರ್ತಿಕ್ ಅವರ ನಿವೃತ್ತಿಯನ್ನು ಅಭಿನಂದಿಸಿದರು. ಕಾರ್ತಿಕ್ ತಮ್ಮ ಸುದೀರ್ಘ ಐಪಿಎಲ್ ವೃತ್ತಿಜೀವನದಲ್ಲಿ 6 ತಂಡಗಳಿಗಾಗಿ ಆಡಿದ್ದಾರೆ. 257 ಪಂದ್ಯಗಳನ್ನು ಆಡಿರುವ ಅವರು 4,842 ರನ್ ಗಳಿಸಿದ್ದಾರೆ ಮತ್ತು 22 ಅರ್ಧಶತಕ ಬಾರಿಸಿದ್ದಾರೆ. ವಿಕೆಟ್ ಕೀಪರ್ ಆಗಿರುವ ಅವರು ತಮ್ಮ ಹೆಸರಿನಲ್ಲಿ 145 ಕ್ಯಾಚ್‌ಗಳು ಮತ್ತು 37 ಸ್ಟಂಪ್ ಔಟ್‌ಗಳನ್ನು ಮಾಡಿದ್ದಾರೆ. ನಿವೃತ್ತಿ ಬೆನ್ನಲ್ಲೇ ಕಾರ್ತಿಕ್ ಮುಂದೆ ಏನು ಮಾಡ್ತಾರೆ ಎಂಬ ಪ್ರಶ್ನೆ ಶುರುವಾಗಿದೆ.
ಎಲಿಮಿನೇಟರ್ ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್​ರನ್ನು RCB ಮುಖ್ಯ ಕೋಚ್ ಆಂಡಿ ಫ್ಲವರ್ ಹೊಗಳಿದರು. ಕಾರ್ತಿಕ್ ಐಪಿಎಲ್ 2024ರ ಆರಂಭಕ್ಕೂ ಮುನ್ನ ಹೆಚ್ಚು ಕ್ರಿಕೆಟ್ ಆಡಿರಲಿಲ್ಲ. ಹೀಗಿದ್ದೂ ಅವರು ಋತುವಿನಲ್ಲಿ ತಂಡಕ್ಕಾಗಿ ಉತ್ತಮ ಆಟವನ್ನಾಡಿದ್ದಾರೆ. ನೀವು ಭವಿಷ್ಯದಲ್ಲಿ ತರಬೇತುದಾರರಾಗಿ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು.
ಕಾರ್ತಿಕ್ ಕಾಮೆಂಟರಿ ಮಾಡಲು ಇಷ್ಟಪಡುತ್ತಾರೆ. ಅದರಲ್ಲಿ ಅವರು ಯಶಸ್ಸನ್ನೂ ಸಾಧಿಸಿದ್ದಾರೆ. ಜೊತೆಗೆ ಟ್ರೈನಿಂಗ್ ಕಾನ್​ಸೆಪ್ಟ್​ ಕೂಡ ಇಷ್ಟಪಡುತ್ತಾರೆ, ಬೇರೆಯವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ಒಂದು ವೇಳೆ ಅವರು ಕೋಚ್​ ಆಗಿ ಬರಲು ನಿರ್ಧರಿಸಿದ್ದರೆ ಆ ಕೆಲಸವನ್ನು ಚೆನ್ನಾಗಿ ಮಾಡುವ ಭರವಸೆ ನನಗೆ ಇದೆ ಎಂದು ಫ್ಲವರ್ ಹೇಳಿದ್ದಾರೆ. ಈ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಆರ್​ಸಿಬಿ ತಂಡಕ್ಕೆ ಕೋಚ್​ ಆಗಿ ಬರುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ.
ಇದನ್ನೂ ಓದಿ: ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ