/newsfirstlive-kannada/media/post_attachments/wp-content/uploads/2024/04/KL_RAHUL_RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ಅವರನ್ನು ನೇಮಿಸಿದೆ. ಈ ಮಧ್ಯೆ ಮತ್ತೋರ್ವ ಸ್ಫೋಟಕ ಬ್ಯಾಟರ್ ಆರ್ಸಿಬಿಗೆ ಎಂಟ್ರಿ ಆಗೋ ಸೂಚನೆ ಸಿಕ್ಕಿದೆ.
ವರ್ಷದ ಕೊನೆ ಡಿಸೆಂಬರ್ನಲ್ಲಿ 2025ರ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಮೆಗಾ ಆಕ್ಷನ್ನಲ್ಲಿ 6 ಆಟಗಾರರನ್ನು ಖರೀದಿ ಮಾಡಲು ಎಲ್ಲಾ ಐಪಿಎಲ್ ತಂಡಗಳಿಗೂ ಬಿಸಿಸಿಐ ಅವಕಾಶ ನೀಡಿದೆ. ಹಾಗಾಗಿ ಕ್ವಾಲಿಟಿ ಆಟಾಗರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟು ಪ್ಲಾನ್ ಆರ್ಸಿಬಿಯದ್ದು. ಹಾಗಾಗಿ ಕೆ.ಎಲ್ ರಾಹುಲ್ ಅವರ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ.
ಸ್ಫೋಟಕ ಸುಳಿವು ಕೊಟ್ಟ ಆರ್ಸಿಬಿ
ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆದು ಕೆ.ಎಲ್ ರಾಹುಲ್ ಆರ್ಸಿಬಿ ಸೇರೋದು ಪಕ್ಕಾ ಆಗಿದೆ. ಈ ಬಗ್ಗೆ ಕೆ.ಎಲ್ ರಾಹುಲ್ ನೀಡಿರುವ ಬಹಿರಂಗ ಹೇಳಿಕೆ ಕೂಡ ಎಲ್ಲೆಡೆ ಹರಿದಾಡುತ್ತಿದೆ. ಅಷ್ಟೇ ಅಲ್ಲ ರಾಷ್ಟ್ರೀಯ ಮಾಧ್ಯಮಗಳಲ್ಲೂ ಕೆ.ಎಲ್ ರಾಹುಲ್ ಆರ್ಸಿಬಿ ಸೇರುವ ಬಗ್ಗೆ ವರದಿಯಾಗಿದೆ. ಈ ಮಧ್ಯೆ ಆರ್ಸಿಬಿಯೇ ತನ್ನ ಅಧಿಕೃತ ಖಾತೆ ಮೂಲಕ ಬೆಂಗಳೂರು ಬಾಯ್ಸ್ ಎಂದು ಕ್ಯಾಪ್ಷನ್ ನೀಡಿ ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಫೋಟೋ ಪೋಸ್ಟ್ ಮಾಡಿದೆ. ಇವ್ರು ನೆಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿರೋ ಫೋಟೋ ಇದಾಗಿದೆ. ಈ ಮೂಲಕ ಕೆ.ಎಲ್ ರಾಹುಲ್ ಆರ್ಸಿಬಿ ಸ್ಫೋಟಕ ಸುಳಿವು ನೀಡಲಾಗಿದೆ.
ಬೆಂಗಳೂರು boys! ?@klrahul | @imVkohli | #PlayBoldpic.twitter.com/eST1WarEhO
— Royal Challengers Bengaluru (@RCBTweets)
ಬೆಂಗಳೂರು boys! 😌@klrahul | @imVkohli | #PlayBoldpic.twitter.com/eST1WarEhO
— Royal Challengers Bengaluru (@RCBTweets) October 14, 2024
">October 14, 2024
ಲಕ್ನೋ ತಂಡದ ವಿರುದ್ಧ ಕೆ.ಎಲ್ ರಾಹುಲ್ ಫ್ಯಾನ್ಸ್ ಆಕ್ರೋಶ
ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆ.ಎಲ್ ರಾಹುಲ್ ಫ್ಯಾನ್ಸ್ ಅನ್ಫಾಲೋ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ನೋ ತಂಡವನ್ನು ಅನ್ಫಾಲೋ ಮಾಡಿ ಅನ್ನೋ ಕ್ಯಾಂಪೇನ್ ನಡೆಯುತ್ತಿದ್ದು, ಇದಕ್ಕೆ ಅಸಲಿ ಕಾರಣ ಕೆ.ಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಡಲು ಮುಂದಾಗಿರುವುದು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್