ಪ್ಲೇ ಆಫ್​ಗಾಗಿ 6 ಟೀಮ್​ಗಳ ನಡುವೆ ಬಿಗ್ ಫೈಟ್​.. RCBಯ ಮುಂದಿನ ದಾರಿ ಕಷ್ಟ.. ಕಷ್ಟ!

author-image
Bheemappa
Updated On
ಪ್ಲೇ ಆಫ್​ ಅಲ್ಲವೇ ಅಲ್ಲ, RCB ಟಾರ್ಗೆಟ್ ‘ಮಿಷನ್ ಟಾಪ್​- 2’.. ಇದು ಫೈನಲ್ ಲೆಕ್ಕಾಚಾರ!
Advertisment
  • ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಟಾಸ್ ಗೆದ್ದ ನಾಯಕನೇ ಬಾಸ್.!
  • ಆರ್​ಸಿಬಿ ಪ್ಲೇ ಆಫ್​ಗೆ ಹೋಗಲು ತವರಿನ ಪಂದ್ಯಗಳು ಮುಖ್ಯ
  • ಅಟ್ಯಾಕಿಂಗ್​ ಬ್ಯಾಟಿಂಗ್​​ ಜೊತೆಗೆ ಬಿಗ್ ಟಾರ್ಗೆಟ್​ ಕೊಡಬೇಕಿದೆ

ಐಪಿಎಲ್​ ಟೂರ್ನಿಯಲ್ಲಿ ಪ್ಲೇ ಆಫ್​ ಎಂಟ್ರಿಗೆ 6 ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯುತ್ತಿದೆ. ಇದರಿಂದ ತವರಿನ ಸೋಲಿಗೆ ಆರ್​​ಸಿಬಿ ಇಂದು ಬ್ರೇಕ್​ ಹಾಕಲೇಬೇಕಿದೆ. 8 ಪಂದ್ಯಗಳ ಪೈಕಿ 5 ಗೆದ್ದಿರುವ ಆರ್​​ಸಿಬಿ ಪಾಯಿಂಟ್ಸ್​ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದೆ. ಆದರೆ ಚಿನ್ನಸ್ವಾಮಿಯಲ್ಲಿ ಆಡಿದ 3 ಪಂದ್ಯಗಳಲ್ಲೂ ನೆಲಕಚ್ಚಿರುವುದು ಬೇಸರದ ಸಂಗತಿ.

ಇಂದಿನ ರಾಜಸ್ಥಾನ್ ವಿರುದ್ಧದ ಪಂದ್ಯ ಸೇರಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆರ್​​ಸಿಬಿ ಒಟ್ಟು 4 ಪಂದ್ಯಗಳನ್ನ ಆಡಲಿದೆ. ಇವುಗಳಲ್ಲಿ ಕನಿಷ್ಠ ಎಂದರೂ 3 ಪಂದ್ಯಗಳನ್ನಾದರೂ ಗೆಲ್ಲಬೇಕಿದೆ. ಇಲ್ಲದಿದ್ರೆ ಕಳೆದ ಬಾರಿಯಂತೆ ಈ ಬಾರಿಯೂ ಆರ್​ಸಿಬಿಗೆ ಪ್ಲೇ ಆಫ್​ ಹಾದಿ ಕಷ್ಟವಾಗುತ್ತದೆ. ಪ್ಲೇ ಆಫ್​ ಹಿನ್ನೆಲೆಯಲ್ಲಿ ತವರಿನಲ್ಲೇ ನಡೆಯುವ ಎಲ್ಲ ಪಂದ್ಯಗಳು ಆರ್​​ಸಿಬಿ ಈಗ ಅತ್ಯಂತ ಮುಖ್ಯವಾಗಿವೆ.

ಇದನ್ನೂ ಓದಿ: ಹಿಟ್​ಮ್ಯಾನ್​ ಸ್ಫೋಟಕ ಬ್ಯಾಟಿಂಗ್​.. ರೋಹಿತ್, ಸೂರ್ಯ ಹೊಡೆತಕ್ಕೆ SRHಗೆ ಸೋಲು

publive-image

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೇಸಿಂಗ್​ ಮಾಡುವ ಟೀಮ್​ಗೆ ಅಡ್ವಾಂಟೇಜ್​ ಇದೆ. ಇಲ್ಲಿ ಆಡಿದ 3 ಪಂದ್ಯಗಳಲ್ಲಿ ಆರ್​​ಸಿಬಿ ಈಗಾಗಲೇ ಸೋತಿರೋದಕ್ಕೆ ಟಾಸ್​ ಕೂಡ ಮುಖ್ಯ ಕಾರಣ. ಹಾಗಂತ ಟಾಸ್​ ಅನ್ನು ನಂಬಲು ಆಗಲ್ಲ. ಇಂದಿನ ಪಂದ್ಯದಲ್ಲೂ ಟಾಸ್​​ ಸೋತ್ರೆ, ಬ್ಯಾಟ್ಸ್​ಮನ್​ಗಳು ಜವಾಬ್ಧಾರಿಯುತ ಆಟವಾಡಬೇಕಿದೆ. ಅಟ್ಯಾಕಿಂಗ್​ ಆಟದ ಜೊತೆಗೆ ಸ್ವಲ್ಪ ಎಚ್ಚರಿಕೆಯ ಆಟವಾಡಿ ಬಿಗ್​ ಟಾರ್ಗೆಟ್​ ಸೆಟ್​ ಮಾಡಿದ್ರೆ, ಬೌಲರ್​ಗಳಿಗೆ ರಿಲೀಫ್ ಪಕ್ಕಾ.

ಇಂದಿನ ಪಂದ್ಯದಲ್ಲಿ ಆರ್​​ಸಿಬಿ ಪ್ಲೇಯಿಂಗ್​- 11​ನಲ್ಲಿ ಬದಲಾವಣೆ ಆಗೋ ಸಾಧ್ಯತೆಯಿದೆ. ಪಂಜಾಬ್​ ವಿರುದ್ಧ ಆಡಿದ ತಂಡವನ್ನೇ ಇಂದು ಮುಂದುವರೆಸೋ ಸಾಧ್ಯತೆಯಿದೆ. ಬಿಗ್​ಹಿಟ್ಟರ್​​ ರೊಮಾರಿಯೋ ಶೆಫರ್ಡ್​​ ಎಂಟ್ರಿ ತಂಡದ ಸ್ಟ್ರೆಂಥ್​ ಹೆಚ್ಚಿಸಿದೆ. ಚಿನ್ನಸ್ವಾಮಿಯಲ್ಲಿ ಆಡಿದ ಹಿಂದಿನ ಪಂದ್ಯದಲ್ಲಿ ದೇವದತ್​​ ಪಡಿಕ್ಕಲ್​ ಬದಲಿಗೆ ಮನೋಜ್​ ಬಾಂಡಗೆಗೆ ಚಾನ್ಸ್​ ನೀಡಿ ಮ್ಯಾನೇಜ್​ಮೆಂಟ್​ ಕೈ ಸುಟ್ಟುಕೊಂಡಿತ್ತು. ಆದ್ರೆ, ಇಂದು ಫಾರ್ಮ್​ನಲ್ಲಿರೋ ಪಡಿಕ್ಕಲ್ ​ಮುಂದುವರೆಯಲಿದ್ದಾರೆ. ಕೃನಾಲ್​ ಪಾಂಡ್ಯ ದುಬಾರಿ ಆಗ್ತಿರೋದ್ರಿಂದ ಸ್ವಪ್ನಿಲ್​ ಸಿಂಗ್​ ಎಂಟ್ರಿಯಾದ್ರೆ ಅಚ್ಚರಿ ಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment