/newsfirstlive-kannada/media/post_attachments/wp-content/uploads/2025/05/RCB-24.jpg)
ಪಂಜಾಬ್ ವಿರುದ್ಧದ ಕ್ವಾಲಿಫೈಯರ್ ಕಾದಾಟದಲ್ಲಿ ಆರ್ಸಿಬಿ ನಿಜಕ್ಕೂ ಬೆಂಕಿಯಂಥ ಆಟವಾಡಿದೆ. ಆರ್ಸಿಬಿ ಬೌಲರ್ಗಳಂತೂ ಬಿರುಗಾಳಿಯಂತಹ ಬೌಲಿಂಗ್ ದಾಳಿ ನಡೆಸಿದ್ರು. ಆರ್ಸಿಬಿ ಅಬ್ಬರದ ಮುಂದೆ ಹೋಮ್ಗ್ರೌಂಡ್ನಲ್ಲಿ ಪಂಜಾಬ್ ಪಡೆ ಠುಸ್ ಆಯ್ತು. ಗೆದ್ದ ಆರ್ಸಿಬಿ ಫೈನಲ್ಗೆ ರಾಯಲ್ ಎಂಟ್ರಿ ಕೊಡ್ತು. ಇದಕ್ಕೆ ಸರಿಸಮನಾಗಿ ಆರ್ಸಿಬಿ ಫ್ಯಾನ್ಸ್ನ ಸಂಭ್ರಮ ಮುಗಿಲುಮುಟ್ಟಿತ್ತು.
ಫೈನಲ್ಗೆ ರಾಯಲ್ ಎಂಟ್ರಿ ಕೊಟ್ಟ ಬೆಂಗಳೂರು ಬಾಯ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ ರಜತ್ ಪಟಿದಾರ್ ಪ್ಲಾನ್ ಆರಂಭದಲ್ಲೇ ಸಕ್ಸಸ್ ಕಾಣ್ತು. ಪಂಜಾಬ್ ಓಪನರ್ಗಳು ಬಾಲ ಬಿಚ್ಚೋಕೆ ಆರ್ಸಿಬಿ ಬೌಲರ್ಸ್ ಬಿಡಲಿಲ್ಲ. ಕಮ್ಬ್ಯಾಕ್ ಪಂದ್ಯದಲ್ಲಿ ಫುಲ್ ಜೋಷ್ನಲ್ಲಿ ಹೇಜಲ್ವುಡ್.. ಬ್ಯಾಕ್ ಟು ಬ್ಯಾಕ್ ಇಬ್ಬರ ವಿಕೆಟ್ ಉರುಳಿಸಿ ಪಂಜಾಬ್ ಪವರ್ ಕಟ್ ಮಾಡಿದ್ರು. ಸುಯಶ್ ಶರ್ಮಾ ಅಕ್ಷರಶಃ ಸ್ಪಿನ್ ಜಾದೂ ಮಾಡಿದ್ರು. 14.1 ಓವರ್ಗಳಲ್ಲಿ 101 ರನ್ಗಳಿಸಿ ಪಂಜಾಬ್ ಆಲೌಟ್ ಆಯ್ತು.
ಈ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ, ವಿರಾಟ್ ಕೊಹ್ಲಿ 2 ಬೌಂಡರಿ ಬಾರಿಸಿ 12 ರನ್ಗಳಿಸಿ ಆಟ ಮುಗಿಸಿದ್ರು. ಅಗ್ರೆಸ್ಸಿವ್ ಆಟವಾಡಿದ ಫಿಲ್ ಸಾಲ್ಟ್ ಕ್ಲಾಸ್ ಬೌಂಡರಿಗಳನ್ನ ಬಾರಿಸಿ ಕೇವಲ 23 ಎಸೆತಗಳಲ್ಲಿ 56 ರನ್ ಸಿಡಿಸಿ ಸಂಭ್ರಮಿಸಿದ್ರು. 60 ಎಸೆತಗಳು ಇರುವಂತೆ ಭರ್ಜರಿ ಜಯಭೇರಿ ಬಾರಿಸಿ 4ನೇ ಬಾರಿಗೆ ಫೈನಲ್ಗೆ ಆರ್ಸಿಬಿ ರಾಯಲ್ ಎಂಟ್ರಿ ಕೊಡ್ತು.
ಬೆಂಗಳೂರಿನಲ್ಲಿ ಸಂಭ್ರಮಾಚರಣೆ
ಆರ್ಸಿಬಿ ನಡೆಸಿದ ದಂಗಲ್ಗೆ ಪಂಜಾಬ್ ಕಂಗಾಲ್ ಆಗಿದೆ. ಆರ್ಸಿಬಿ ಅಬ್ಬರಿಸಿದಷ್ಟೇ ಅವರ ಅಭಿಮಾನಿಗಳೂ ಅಬ್ಬರಿಸಿದ್ದಾರೆ. ಬೆಂಗಳೂರಿನಲ್ಲಿ ಬೆಂಗಳೂರು ಬಾಯ್ಸ್ ಫ್ಯಾನ್ಸ್ ಸೆಲೆಬ್ರೇಷನ್ನ ಬೇರೆ ಲೆವೆಲ್ಗೆ ಇತ್ತು.. ನಗರದ ಪಟಾಕಿಗಳು ಒಂದ್ಕಡೆ ಸಿಡೀತಿದ್ರೆ.. ರಸ್ತೆ ಮಧ್ಯೆ ಜನ ಸೇರಿ ಆರ್ಸಿಬಿ.. ಆರ್ಸಿಬಿ ಅನ್ನೋ ಕೂಗು ಕಿವಿಯಲ್ಲಿ ಗುಂಯ್ ಗುಡುತ್ತಿತ್ತು.
ಬೆಂಗಳೂರಿನ ವಿಜಯನಗರದಲ್ಲೂ ಆರ್ಸಿಬಿ ಅಭಿಮಾನಕ್ಕೆ ಪಾರವೇ ಇರಲಿಲ್ಲ. ಮಹಿಳೆಯರು.. ಯುವಕ.. ಯುವತಿಯರು.. ಮಕ್ಕಳ ಸಮೇತ ಎಲ್ಲರೂ ರಸ್ತೆ ಮಧ್ಯೆ ಕುಣಿದು ಕುಪ್ಪಳಿಸಿದ್ರು.
ಇತ್ತ ಆರ್.ಆರ್ ನಗರದಲ್ಲಿ ಪಟಾಕಿ ಸರಗಳನ್ನ ಸಿಡಿಸಿ ಸಂಭ್ರಮಿಸಿದ್ರು.. ಆರ್ಸಿಬಿ ಕ್ವಾಲಿಫೈಯರ್ ಆದ ಫೈಯರ್ ಇಲ್ಲಿ ಎದ್ದು ಕಾಣ್ತಿತ್ತು..
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಸಂಭ್ರಮದ ಜೊತೆ ಪಟಾಕಿ ಸದ್ದು ಜೋರಾಗಿತ್ತು. ಆರ್ಸಿಬಿ ಫೈನಲ್ಗೆ ಪ್ರವೇಶ ಮಾಡುತ್ತಿದ್ದಂತೆಯೇ ಅಭಿಮಾನಿಗಳ ಹರ್ಷಕ್ಕೆ ಪಾರವೇ ಇರಲಿಲ್ಲ. ಒಟ್ಟಾರೆ ಆರ್ಸಿಬಿ ಆರ್ಸಿಬಿ ಅನ್ನೋ ಘೋಷವಾಕ್ಯ ಕ್ರೀಡಾಂಗಣದಲ್ಲಿ ಮಾತ್ರವಲ್ಲದೇ ನಾಡಿನೆಲ್ಲೆಡೆ ಮೊಳಗಿತ್ತು.
ಪಂಜಾಬ್ ವರ್ಸಸ್ ಮುಂಬೈ ನಡುವೆ ಇಂದು ಎಲಿಮಿನಟೇರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಜೂನ್ 3ರಂದು ಅಹಮದಾಬಾದ್ನಲ್ಲಿ ನಡೆಯುವ ಫೈನಲ್ನಲ್ಲಿ ಕಾದಾಡಲಿದ್ದಾರೆ. ಸದ್ಯ ಫೈನಲ್ಗೆ ಲಗ್ಗೆ ಇಟ್ಟಿರುವ ಆರ್ಸಿಬಿ ಈ ಸಲನಾದ್ರೂ ಕಪ್ ಗೆಲ್ಲಲಿ ಅನ್ನೋದೇ ಕೋಟಿ ಕೋಟಿ ಅಭಿಮಾನಿಗಳ ಆಶಯ.. ಹಾರೈಕೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ