/newsfirstlive-kannada/media/post_attachments/wp-content/uploads/2025/06/KOHLI_ANUSHKA_RCB_CHAMPION.jpg)
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿ 191 ರನ್‌ಗಳ ಟಾರ್ಗೆಟ್ ನೀಡಿತ್ತು. ಆದರೆ ಈ ಗುರಿ ಬೆನ್ನಟ್ಟುವಲ್ಲಿ ಪಂಜಾಬ್ ವಿಫಲವಾಯಿತು. ಪಂದ್ಯ ಗೆದ್ದ ಬಳಿಕ ಆರ್ಸಿಬಿ ಬಿಗ್ ಸೆಲೆಬ್ರೆಷನ್ನಲ್ಲಿ ಮುಳುಗಿತ್ತು. ಈ ವೇಳೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಕಂಡು ಬಂದ ಕೆಲ ಕ್ಷಣಗಳು ಇಲ್ಲಿವೆ.
ಆರ್ಸಿಬಿ ಗೆಲುವಿನ ಕುರಿತು ವಿರಾಟ್ ಕೊಹ್ಲಿ ಅವರು ಈಗಾಗಲೇ ತಮ್ಮ ಇನ್ಸ್ಟಾದಲ್ಲಿ ಭಾವನಾತ್ಮಕವಾಗಿ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದಾರೆ. ನನ್ನನ್ನು 18 ವರ್ಷಗಳ ಕಾಲ ಕಾಯಿಸಿ ಈಗ ನನ್ನ ಕೈಸೇರಿದೆ ಎಂದು ಹೇಳಿದ್ದಾರೆ. ಕಿಂಗ್ ಕೊಹ್ಲಿ ಟ್ರೋಫಿ ಗೆದ್ದ ಖುಷಿಯಲ್ಲಿ ಇರುವಾಗ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಅವರ ಹೆಂಡತಿ ಅನುಷ್ಕಾ ಶರ್ಮಾ ಓಡೋಡಿ ಬಂದು ತಬ್ಬಿಕೊಂಡಿದ್ದಾರೆ. ಈ ವೇಳೆ ಇಬ್ಬರು ಭಾವುಕರಾಗಿದ್ದು ಇದೆ.
ಐಪಿಎಲ್ ಕಪ್ ಆರ್ಸಿಬಿಯ ಕೈ ಸೇರಿದೆ, 18 ವರ್ಷಗಳ ಕಾಯುವಿಕೆಗೆ ನಿನ್ನೆಯೇ ಕೊನೆಯಾಗಿದೆ. ಹಳ್ಳಿಗಳಿಂದ ದೆಹಲಿವರೆಗೆ ವಿರಾಟ್ ಪರ್ವ ಮಾರ್ದನಿಸಿದೆ. ಅಭಿಮಾನದ ಸಂಭ್ರಮಕ್ಕೆ ಕಿಂಗ್ ಕೊಹ್ಲಿ ಕಣ್ಣೀರು ಹಾಕಿದ್ದು ಎಲ್ಲರನ್ನೂ ಭಾವುಕರನ್ನಾಗಿಸಿದೆ.
ಟ್ರೋಫಿ ಗೆದ್ದಾಗ ಪತ್ನಿ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡ ವಿರಾಟ್ ಕೊಹ್ಲಿ. ಇದೇ ಸಮಯದಲ್ಲಿ ತನ್ನ ಆತ್ಮೀಯ ಗೆಳೆಯ ಹಾಗೂ ಆರ್ಸಿಬಿ ಮಾಜಿ ಪ್ಲೇಯರ್ ಎಬಿ ಡಿವಿಲಿಯರ್ಸ್ ಅವರನ್ನು ಮಾತನಾಡಿಸಿದರು.
ಫೈನಲ್ ಪಂದ್ಯ ಗೆದ್ದ ಮೇಲೆ ಹೆಂಡತಿ ಬಳಿಗೆ ಬಂದ ವಿರಾಟ್ ಕೊಹ್ಲಿ ಯಾವುದೋ ವಿಚಾರವನ್ನು ಸಂತಸದಿಂದ ಹಂಚಿಕೊಳ್ಳುತ್ತಿರುವ ದೃಶ್ಯವಿದು.
ಟ್ರೋಫಿಗೆ ಮುತ್ತಿಟ್ಟ ಮೇಲೆ ಇಡೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿದ್ದವರೆಲ್ಲ ಸಂಭ್ರಮದಲ್ಲಿ ಮುಳುಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ದಂಪತಿಯನ್ನ, ಇಂಗ್ಲೆಂಡ್ನ ಮಾಜಿ ಪ್ರಧಾನಿ, ಪ್ರಸ್ತುತ ಅಲ್ಲಿನ ಸಂಸದರು ಆಗಿರುವ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಮೀಟ್ ಮಾಡಿ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟರು.
ಐಪಿಎಲ್ ಟ್ರೋಫಿಯ ಗೆಲುವಿನ ಖುಷಿಯಲ್ಲಿ ಸ್ಟಾರ್ ದಂಪತಿ.. ಐಪಿಎಲ್ ಕಪ್ನೊಂದಿಗೆ ನಗುತ್ತಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ.
ಫೈನಲ್ ಪಂದ್ಯ ಗೆದ್ದ ಮೇಲೆ ಬೌಂಡರಿ ಲೈನ್ ಬಳಿ ಕುಳಿತುಕೊಂಡು ವಿರಾಟ್ ಕೊಹ್ಲಿ ಅವರು ಕಣ್ಣೀರು ಹಾಕಿರುವ ದೃಶ್ಯ.
ಆರ್ಸಿಬಿಯ ಡೆತ್ ಓವರ್ ಸ್ಪೆಷಲಿಸ್ಟ್ ಯಶ್ ದಯಾಳ್ ಅವರ ಕುಟುಂಬದೊಂದಿಗೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಫೋಟೋ ತೆಗೆಸಿಕೊಂಡರು.
ಇದನ್ನೂ ಓದಿ:IPL ಟ್ರೋಫಿಗಾಗಿ ಪ್ರತಿ ಹೆಜ್ಜೆ ಹೆಜ್ಜೆಗೂ, ಇಂಚು ಇಂಚಿಗೂ ಶ್ರಮ.. ಕಿಂಗ್ ಕೊಹ್ಲಿ ಭಾವನಾತ್ಮಕ ಪೋಸ್ಟ್!
ಆರ್ಸಿಬಿ ವಿಜಯ ಸಾಧಿಸುತ್ತಿದ್ದಂತೆ ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ಇರುವ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಸಿನಿಮಾ ನಟ, ನಟಿಯರು, ನಿರ್ದೇಶಕರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳು ಕೂಡ ಆರ್ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. 4ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಬೆಂಗಳೂರು ತಂಡ ಟ್ರೋಫಿಯೊಂದಿಗೆ ಮರಳಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ