/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ 2ನೇ ದಿನದ ಮೆಗಾ ಹರಾಜಿನಲ್ಲಿ ಭರ್ಜರಿ ಬೇಟೆಗೆ ಮುಂದಾಗಿದೆ. 2ನೇ ದಿನಕ್ಕಾಗಿ ಆರ್‌ಸಿಬಿ ಈಗಾಗಲೇ ತನ್ನ ಪರ್ಸ್ನಲ್ಲಿ ಅತೀ ಹೆಚ್ಚು ಹಣ ಉಳಿಸಿಕೊಂಡಿದೆ.
ಆರ್‌ಸಿಬಿ ಮೊದಲ ದಿನ ಹಲವು ಸ್ಟಾರ್ ಆಟಗಾರರನ್ನು ಖರೀದಿ ಮಾಡಿ ಒಳ್ಳೆಯ ಬಿಡ್ ಮಾಡಿತು. ಆದ್ರೆ, ತಂಡದಲ್ಲಿ ಒಂದು ಸ್ಥಾನ ಮಾತ್ರ ಇನ್ನೂ ಫಿಲ್ ಆಗಿಲ್ಲ. ಆ ಸ್ಲಾಟ್ಗೆ ಆರ್‌ಸಿಬಿ ಸೂಕ್ತ ಆಟಗಾರನ ಹುಡುಕಾಟದಲ್ಲಿದೆ. ಹಾಗಾಗಿ ಈ ಸ್ಲಾಟ್ ಯಾರು ತುಂಬಲಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿದೆ.
ಬೆಂಗಳೂರು ತಂಡದ ಬಳಿ 32 ಕೋಟಿ
ಇನ್ನು, ಬೆಂಗಳೂರು ತಂಡವು ಬರೋಬ್ಬರಿ 83 ಕೋಟಿ ರೂ. ಜತೆಗೆ ಮೆಗಾ ಹರಾಜಿಗೆ ಬಂದಿತ್ತು. ಮೊದಲ ದಿನದ ಬಳಿಕ ಆರ್‌ಸಿಬಿ ಇನ್ನೂ 32 ಕೋಟಿ ರೂಪಾಯಿ ಉಳಿಸಿಕೊಂಡಿದೆ. 50 ಕೋಟಿಗೂ ಹೆಚ್ಚು ಇನ್ವೆಸ್ಟ್ ಮಾಡಿದ್ರೂ ಆರ್ಸಿಬಿಗೆ ಇನ್ನೂ ಕ್ಯಾಪ್ಟನ್ ಸಿಕ್ಕಿಲ್ಲ. ಹೀಗಾಗಿ ಆರ್‌ಸಿಬಿ 2ನೇ ದಿನದ ಹರಾಜಿನಲ್ಲಿ ನಾಯಕನ ಹುಡುಕಾಟವನ್ನು ಮುಂದುವರೆಸಲಿದೆ.
ಮತ್ತೆ ಕೊಹ್ಲಿ ಕ್ಯಾಪ್ಟನ್
2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆದ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು. ಅದಾದ ಬಳಿಕ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳ ಹೊರೆ ಕಡಿಮೆಯಾಗಿರುವ ಕಾರಣ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:RCB ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್; 53 ಕೋಟಿಯಲ್ಲಿ ಎಷ್ಟು ಮಂದಿ ಕನ್ನಡಿಗರ ಖರೀದಿ ಮಾಡ್ತು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್