ಫ್ಯಾನ್ಸ್​ಗೆ ಬ್ಯಾಡ್​ನ್ಯೂಸ್​​; ಕೊಹ್ಲಿ ಸೇರಿದಂತೆ ಈ ಸ್ಟಾರ್​​ ಆಟಗಾರರಿಗೆ ಬಿಗ್​ ಶಾಕ್​ ಕೊಟ್ಟ RCB

author-image
Ganesh Nachikethu
Updated On
ಇದು ಅಂತಿಂಥಾ ದಾಖಲೆ ಅಲ್ಲವೇ ಅಲ್ಲ.. ಯಾವ ಟೀಮ್​ ಮಾಡಿರದ ರೆಕಾರ್ಡ್​ ಮಾಡಿದ RCB
Advertisment
  • ಕ್ರಿಕೆಟ್​ ಲೋಕದಲ್ಲಿ ಈಗ ಇಂಡಿಯನ್​ ಪ್ರೀಮಿಯರ್​ ಲೀಗ್​ನದ್ದೇ ಸದ್ದು
  • ವರ್ಷದ ಕೊನೆಗೆ ನಡೆಯಲಿರೋ 2025ರ ಐಪಿಎಲ್​​ ಮೆಗಾ ಹರಾಜು!
  • ಈ ಮುನ್ನವೇ ಆರ್​​ಸಿಬಿ ತಂಡದ ಅಭಿಮಾನಿಗಳಿಗೆ ದೊಡ್ಡ ಆಘಾತ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎಂದರೆ ಮೊದಲು ತಲೆಗೆ ಬರೋದು ಕೆಜಿಎಫ್​. ಕೆಜಿಎಫ್​ ಎಂದರೆ ಸಿನಿಮಾ ಅಲ್ಲ, ಬದಲಿಗೆ ಎಂಟರ್ಟೈನಿಂಗ್​​ ಸಿನಿಮಾ. ಕೊಹ್ಲಿ, ಗ್ಲೆನ್​ ಮ್ಯಾಕ್ಸ್​ವೆಲ್​​ ಮತ್ತು ಕ್ಯಾಪ್ಟನ್​​​ ಫಾಫ್​ಗೆ ಕೆಜಿಎಫ್​​ ಎಂದು ಕರೆಯೋದು. ಈ ಮೂವರು ಕ್ರೀಸ್​ನಲ್ಲಿ ಮನಸ್ಸು ಮಾಡಿ ನಿಂತರೆ ಎದುರಾಳಿಗಳಿಗೆ ಎದೆ ನಡುಗುತ್ತಿತ್ತು. ಇನ್ಮುಂದೆ ಈ ಜೋಡಿಯನ್ನು ಆರ್​​ಸಿಬಿ ಫ್ಯಾನ್ಸ್​​ ಮಿಸ್​ ಮಾಡಿಕೊಳ್ಳಲಿದ್ದಾರೆ.

ಹೌದು, ಆರ್​​ಸಿಬಿ ಫ್ಯಾನ್ಸ್​​ ಕೆಜಿಎಫ್​​ ಶೋ ಕಣ್ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​ ಮತ್ತು ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​ ಅವರನ್ನು ರಿಲೀಸ್​ ಮಾಡಲು ಸಜ್ಜಾಗಿದೆ.

publive-image

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಇನ್ನೊಂದು 2 ತಿಂಗಳಲ್ಲಿ 2025ರ ಮೆಗಾ ಐಪಿಎಲ್​​​ ಆಕ್ಷನ್​ ನಡೆಯಲಿದ್ದು, ಇದಕ್ಕೂ ಮುನ್ನ ಎಲ್ಲಾ ತಂಡಗಳು ರೀಟೈನ್​ ಮಾಡಿಕೊಳ್ಳಬೇಕಿದೆ. ಈಗ ಆರ್​​ಸಿಬಿ ರೀಟೈನ್​ ಲಿಸ್ಟ್​ನಲ್ಲಿ ಕ್ಯಾಪ್ಟನ್​​ ಫಾಫ್​ ಆಗಲಿ, ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಹೆಸರಾಗಲಿ ಇಲ್ಲ ಎಂಬುದು ಅಚ್ಚರಿ.

ಮ್ಯಾಕ್ಸ್​ವೆಲ್​ ಕಳಪೆ ಪ್ರದರ್ಶನ

ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮ್ಯಾಕ್ಸ್​ವೆಲ್ ಕಳಪೆ ಪ್ರದರ್ಶ ನೀಡಿದ್ರು. ಒಂದು ಮ್ಯಾಚ್​​ನಲ್ಲೂ 30ಕ್ಕಿಂತಲೂ ಹೆಚ್ಚು ರನ್​​ ಮ್ಯಾಕ್ಸಿ ಗಳಿಸಲೇ ಇಲ್ಲ. ಇದು ತಂಡದ ಫಲಿತಾಂಶಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ತಾನು ಆಡಿದ 10 ಪಂದ್ಯಗಳಲ್ಲಿ ಕೇವಲ 52 ರನ್​ ಗಳಿಸಿದ್ರು. ಈ ಪೈಕಿ ಹೈಎಸ್ಟ್​ ಸ್ಕೋರ್​​ 28 ಆಗಿತ್ತು.​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment