IPL 2025: ಆರ್​​ಸಿಬಿ ತಂಡದಿಂದ ಸ್ಟಾರ್​​ ಆಲ್​ರೌಂಡರ್​ ಮ್ಯಾಕ್ಸ್​ವೆಲ್​ ಔಟ್​​!

author-image
Ganesh Nachikethu
Updated On
ಇವತ್ತು RCB ಗೆಲ್ಲಲು ಪಾಲಿಸಬೇಕು ಐದು ಸೂತ್ರಗಳು.. ರೆಡ್​ ಆರ್ಮಿಗೆ ಟಫ್ ಚಾಲೆಂಜ್..!
Advertisment
  • ಕ್ರಿಕೆಟ್​ ಲೋಕದಲ್ಲಿ ಈಗ ಇಂಡಿಯನ್​ ಪ್ರೀಮಿಯರ್​ ಲೀಗ್​ನದ್ದೇ ಸದ್ದು
  • ವರ್ಷದ ಕೊನೆಗೆ ನಡೆಯಲಿರೋ 2025ರ ಐಪಿಎಲ್​​ ಮೆಗಾ ಹರಾಜು..!
  • ಆರ್​​ಸಿಬಿ ತಂಡದಿಂದ ಸ್ಟಾರ್​ ಆಲ್​ರೌಂಡರ್​ ಗ್ಲೆನ್​​ ಮ್ಯಾಕ್ಸ್​​ವೆಲ್​ ಔಟ್​

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗಾಗಿ ಇಡೀ ಕ್ರೀಡಾ ಜಗತ್ತೇ ಕಾಯುತ್ತಿದೆ. ಈ ವರ್ಷದ ಕೊನೆಗೆ 2025ರ ಐಪಿಎಲ್​ ಮೆಗಾ ಆಕ್ಷನ್​ ನಡೆಯಲಿದೆ. ಇದಕ್ಕೂ ಮುನ್ನವೇ ಐಪಿಎಲ್​ ತಂಡಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬಹುದು. ಬಳಿಕ ಉಳಿದ ಆಟಗಾರರನ್ನು ಆಕ್ಷನ್​ಗಾಗಿ ಬಿಡಲೇಬೇಕಿದೆ.

ಇನ್ನು, ಆರ್​​ಸಿಬಿ ತಂಡವು ವಿರಾಟ್​ ಕೊಹ್ಲಿ ಹೊರತುಪಡಿಸಿ ಮತ್ಯಾರನ್ನ ರೀಟೈನ್​ ಮಾಡಿಕೊಳ್ಳಲಿದೆ ಎಂದು ಇದುವರೆಗೂ ಸ್ಪಷ್ಟನೆ ನೀಡಿಲ್ಲ. ರೀಟೈನ್​​​ ಲಿಸ್ಟ್​ನಲ್ಲಿ ಕೊಹ್ಲಿ ಜೊತೆಗೆ ವಿಲ್​ ಜಾಕ್ಸ್​​, ರಜತ್​ ಪಾಟಿದಾರ್​ ಹೆಸರು ಇದೆ ಎಂದು ಹೇಳಲಾಗುತ್ತಿದೆ. ಗ್ಲೆನ್​ ಮ್ಯಾಕ್ಸ್​ವೆಲ್​​ ಹೆಸರು ಇತ್ತು ಎಂದು ವರದಿ ಆಗಿತ್ತು ಈ ಬೆನ್ನಲ್ಲೇ ಗ್ಲೆನ್​ ಮ್ಯಾಕ್ಸ್​​​ವೆಲ್​ ಅವರನ್ನು ರೀಟೈನ್​ ಮಾಡಿಕೊಳ್ಳುವುದು ಡೌಟ್​ ಎಂದು ಆರ್​​ಸಿಬಿ ಮೂಲಗಳು ತಿಳಿಸಿವೆ.

publive-image

ಮ್ಯಾಕ್ಸ್​ವೆಲ್​ ಕಳಪೆ ಪ್ರದರ್ಶನ

ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮ್ಯಾಕ್ಸ್​ವೆಲ್ ಕಳಪೆ ಪ್ರದರ್ಶ ನೀಡಿದ್ರು. ಒಂದು ಮ್ಯಾಚ್​​ನಲ್ಲೂ 30ಕ್ಕಿಂತಲೂ ಹೆಚ್ಚು ರನ್​​ ಮ್ಯಾಕ್ಸಿ ಗಳಿಸಲೇ ಇಲ್ಲ. ಇದು ತಂಡದ ಫಲಿತಾಂಶಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ತಾನು ಆಡಿದ 10 ಪಂದ್ಯಗಳಲ್ಲಿ ಕೇವಲ 52 ರನ್​ ಗಳಿಸಿದ್ರು. ಈ ಪೈಕಿ ಹೈಎಸ್ಟ್​ ಸ್ಕೋರ್​​ 28 ಆಗಿತ್ತು.

ಇದನ್ನೂ ಓದಿ: IPL​​ 2025: ಆರ್​​ಸಿಬಿ ತಂಡಕ್ಕೆ ಸ್ಟಾರ್​ ಬೌಲರ್ ಜಸ್ಪ್ರೀತ್​​​ ಬುಮ್ರಾ ಎಂಟ್ರಿ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment