ಕೆ.ಎಲ್​​ ರಾಹುಲ್​ ಬೆನ್ನಲ್ಲೇ ಆರ್​​ಸಿಬಿಗೆ ಮತ್ತೋರ್ವ ಕರ್ನಾಟಕದ ಕ್ರಿಕೆಟರ್​ ಎಂಟ್ರಿ.. ಯಾರದು?

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ
  • ಐಪಿಎಲ್​ 2025ರ ಮೆಗಾ ಆಕ್ಷನ್​​ನಲ್ಲಿ ರಾಹುಲ್​ ಖರೀದಿಗೆ ಮಾಸ್ಟರ್​ ಪ್ಲಾನ್​..!
  • ಕೆ.ಎಲ್​ ರಾಹುಲ್​ ಜೊತೆಗೆ ಮತ್ತೋರ್ವ ಕನ್ನಡಿಗನಿಗೆ ಆರ್​​ಸಿಬಿ ಮಣೆ ಸಾಧ್ಯತೆ

ಲಕ್ನೋ ಸೂಪರ್​ ಜೈಂಟ್ಸ್​ ತಂಡ ತೊರೆದು ಕೆ.ಎಲ್​ ರಾಹುಲ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಈ ಮಧ್ಯೆ ಮತ್ತೋರ್ವ ಸ್ಟಾರ್​ ಕ್ರಿಕೆಟರ್​​ ಆರ್​​ಸಿಬಿ ತಂಡ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದು ಕರ್ನಾಟಕ ಮೂಲದ ಕ್ರಿಕೆಟರ್​ ಎಂಬುದು ವಿಶೇಷ.

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ವರ್ಷದ ಕೊನೆ ಡಿಸೆಂಬರ್​ನಲ್ಲಿ ನಡೆಯಲಿರೋ 2025ರ ಐಪಿಎಲ್​​​​ ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು ಎಂಬುದು ಆರ್​​ಸಿಬಿ ಪ್ಲಾನ್​​.

publive-image

ದೇವದತ್​ ಪಡಿಕ್ಕಲ್​​ಗೆ ಮತ್ತೆ ಮಣೆ!

ಆರ್​​ಸಿಬಿ ತಂಡದಲ್ಲಿದ್ದಾಗ ಅದ್ಭುತ ಪ್ರದರ್ಶನ ನೀಡುತ್ತಿದ್ದ ದೇವದತ್​ ಪಡಿಕ್ಕಲ್​​​ ರಾಜಸ್ಥಾನ್​​​ ರಾಯಲ್ಸ್​ ಸೇರಿದ ಮೇಲೆ ಮಂಕಾಗಿದ್ದಾರೆ. ದೇಸಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೂ ಐಪಿಎಲ್​​ನಲ್ಲಿ ಮಾತ್ರ ಎಡವುತ್ತಿದ್ದಾರೆ. ಹಾಗಾಗಿ ರಾಜಸ್ಥಾನ್​ ರಾಯಲ್ಸ್​​ ಪಡಿಕ್ಕಲ್​ ಅವರನ್ನು ಕೈ ಬಿಡುವ ಸಾಧ್ಯತೆ ಇದ್ದು, ಮತ್ತೆ ಆರ್​​ಸಿಬಿ ಇವರನ್ನು ಖರೀದಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಬ್ಬಬ್ಬಾ! KL​​ ರಾಹುಲ್​ ಖರೀದಿಗೆ ಆರ್​​ಸಿಬಿ ಮೀಸಲಿಟ್ಟ ಹಣ ಎಷ್ಟು ಕೋಟಿ ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment