/newsfirstlive-kannada/media/post_attachments/wp-content/uploads/2024/05/RCB-KGF.jpg)
ಹೋಮ್​​ಗ್ರೌಂಡ್​​ನಲ್ಲಿ ಸತತ 3 ಸೋಲು ಕಂಡಿದ್ರೂ ಇಂದಿನ ಪಂದ್ಯದಲ್ಲೀ ಆರ್​​ಸಿಬಿಯೇ ಗೆಲ್ಲೋ ಫೇವರಿಟ್​ ಅನಿಸಿಕೊಂಡಿದೆ. ಕಳಪೆ ಬೌಲಿಂಗ್​ನಂತ ದೊಡ್ಡ ವೀಕ್​ನೆಸ್​​ ಇದ್ರೂ, ಫ್ಯಾನ್ಸ್​ ಗೆಲುವು ನಮ್ದೇ ಅಂತಿದ್ದಾರೆ. ಇದಕ್ಕೆ ಕಾರಣ ಈ ತ್ರಿಮೂರ್ತಿಗಳು. ಇವ್ರ ಅಬ್ಬರದ ಆಟ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿರೋದು ಮಾತ್ರವಲ್ಲ. ಎದುರಾಳಿ ಗುಜರಾತ್​ ಪಾಳಯದಲ್ಲಿ ನಡುಕವನ್ನೂ ಹುಟ್ಟಿಸಿದೆ.
KGF.. ಕಿಂಗ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್​, ಫಾಫ್​ ಡುಪ್ಲೆಸಿ.. ಈ ಮೂವರು ಆರ್​​ಸಿಬಿ ಬಲವಾಗಿದ್ರು. ಈ ತ್ರಿಮೂರ್ತಿಗಳು ಅಬ್ಬರಿಸಿದ್ರೆ, ಆರ್​​ಸಿಬಿ ಗೆಲುವು ಪಕ್ಕಾ ಅನ್ನೋದು ಅಭಿಮಾನಿಗಳ ಮಾತಾಗಿತ್ತು. ಕಳೆದ 2 ಸೀಸನ್​ಗಳಲ್ಲಿ ಇವ್ರ ಪರ್ಫಾಮೆನ್ಸ್​ ಹಂಗೇ ಇತ್ತು ಬಿಡಿ. ಕೆಜಿಎಫ್​ ಅಬ್ಬರಕ್ಕೆ ಎದುರಾಳಿಗಳು ಅಕ್ಷರಶಃ ಥಂಡಾ ಹೊಡೆದುಬಿಟ್ಟಿದ್ರು.
/newsfirstlive-kannada/media/post_attachments/wp-content/uploads/2024/05/RCB-win-against.jpg)
'KGF' ಫ್ಲಾಪ್​​.. ‘KJP' ಬ್ಲಾಕ್​ಬಸ್ಟರ್​​ ಹಿಟ್
ಈ ಸೀಸನ್​ನಲ್ಲಿ ಕಿಂಗ್​​ ಕೊಹ್ಲಿ ಒಬ್ಬರೆ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಫಾಫ್​ ಡುಪ್ಲೆಸಿ ಇನ್​​ಕನ್ಸಿಸ್ಟೆಂಟ್​ ಆಗಿದ್ರೆ, ಮ್ಯಾಕ್ಸ್​ವೆಲ್​ ಮ್ಯಾಜಿಕ್​​ ಮಾಯವಾಗಿದೆ. ಕೊಹ್ಲಿ ಏಂಕಾಗಿಯಾದ ಪರಿಣಾಮವೇ ಫಸ್ಟ್​ ಹಾಫ್​ನಲ್ಲಿ ಆರ್​​ಸಿಬಿ ಹೀನಾಯ ಪರ್ಫಾಮೆನ್ಸ್​ ನೀಡ್ತು. ಇದೀಗ ಆರ್​​ಸಿಬಿ ಗೆಲುವಿನ ಹಳಿಗೆ ಮರಳಿದೆ. ವಿರಾಟ್​ ಕೊಹ್ಲಿಗೆ ಜೊತೆಗಾರರೂ ಸಿಕ್ಕಿದ್ದಾರೆ. ಇಂದಿನ ಪಂದ್ಯದಲ್ಲೀ ಇವ್ರ ಮೇಲೆಯೇ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟಿರೋದು.
ಕಿಂಗ್​ ಕೊಹ್ಲಿ ಆಟ ನೋಡಲು ಫ್ಯಾನ್ಸ್​ ಕಾತರ..!
ಈ ಸೀಸನ್​ನಲ್ಲಿ ಆರ್​​ಸಿಬಿ ಫ್ಲಾಪ್​ ಶೋ ನೀಡಿದೆ ನಿಜ. ಅಭಿಮಾನಿಗಳಿಗೆ ಅತೀವ ನಿರಾಸೆಯಾಗಿರೋದು ಅಷ್ಟೇ ಸತ್ಯ. ಆದ್ರೆ, ಕಿಂಗ್​ ಕೊಹ್ಲಿ ಮಾತ್ರ ಫ್ಯಾನ್ಸ್​ಗೆ ಸಖತ್​ ಎಂಟರ್​​ಟೈನ್​ಮೆಂಟ್​ ನೀಡಿದ್ದಾರೆ. 71.43ರ ಸರಾಸರಿಯಲ್ಲಿ 500 ರನ್​ ಚಚ್ಚಿದ್ದಾರೆ. ಕಿಂಗ್​ ಕೊಹ್ಲಿ ಆಟಕ್ಕೆ ಫಿದಾ ಆಗಿರುವ ಫ್ಯಾನ್ಸ್​, ಇಂದು ಚಿನ್ನಸ್ವಾಮಿ ಅಂಗಳದಲ್ಲೂ ಅದ್ದೂರಿ ಆಟದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ
/newsfirstlive-kannada/media/post_attachments/wp-content/uploads/2024/04/Kohli_RCB_Team.jpg)
ವಿಲ್​​ ಜಾಕ್ಸ್​ರಿಂದ​​ ಜಬರ್ದಸ್ತ್​​ ಆಟದ ನಿರೀಕ್ಷೆ
ಇದೇ ಗುಜರಾತ್​ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ವಿಲ್​ ಜಾಕ್ಸ್​​ ಎಲ್ಲರನ್ನೂ ಬೆರಗಾಗಿಸಿದ್ರು. ಕೇವಲ 6 ನಿಮಿಷಗಳಲ್ಲಿ ಗೇಮ್​ ಚೇಂಜಿಂಗ್​ ಇನ್ನಿಂಗ್ಸ್​ ಕಟ್ಟಿದ್ದ ಜಾಕ್ಸ್​, ಬೌಂಡರಿ, ಸಿಕ್ಸರ್​ಗಳ ಸುನಾಮಿ ಎಬ್ಬಿಸಿದ್ರು. ನಮೋ ಅಂಗಳದಲ್ಲಿ ಗುಜರಾತ್​​ ಬೌಲರ್​​ಗಳ ಬೆಂಡೆತ್ತಿ ಸೆಂಚುರಿ ಸಿಡಿಸಿದ್ರು. ಇಂದಿನ ಪಂದ್ಯದಲ್ಲೂ ಯಂಗ್​​ ಟೈಗರ್ ವಿಲ್​ ಜಾಕ್ಸ್​​ರಿಂದ ಜಬರ್ದಸ್ತ್​​ ಆಟದ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ.
ಫಾರ್ಮ್​ ಕಂಡುಕೊಂಡ ಪಟಿದಾರ್​, ಫ್ಯಾನ್ಸ್​ ಖುಷ್​..!
ಸೀಸನ್​ನ ಫಸ್ಟ್​ ಹಾಫ್​ನಲ್ಲಿ ರನ್​ಗಳಿಕೆಗೆ ಪರದಾಡಿದ ರಜತ್​ ಪಟಿದಾರ್​​ ಸೆಕೆಂಡ್​ ಹಾಫ್​ನಲ್ಲಿ ಭರ್ಜರಿ ಕಮ್​ಬ್ಯಾಕ್​​ ಮಾಡಿದ್ದಾರೆ. ಎದುರಿಸೋ ಮೊದಲ ಎಸೆತದಿಂದಲೇ ಆರ್ಭಟಿಸಲು ಶುರುವಿಟ್ಟುಕೊಳ್ತಿದ್ದಾರೆ. ವಾಂಖೆಡೆ, ಈಡನ್​ ಗಾರ್ಡನ್​, ಹೈದ್ರಾಬಾದ್​ನಲ್ಲಿ ಅಬ್ಬರದ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದೀಗ ಚಿನ್ನಸ್ವಾಮಿ ಅಂಗಳದಲ್ಲೂ ಅಂತದ್ದೇ ಅಬ್ಬರದ ಇನ್ನಿಂಗ್ಸ್​ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ:Breaking News: ರಾಯಚೂರಲ್ಲಿ ಹೃದಯ ವಿದ್ರಾವಕ ಘಟನೆ.. ಇಬ್ಬರ ಬಲಿ ಪಡೆದ ರಣ ಬಿಸಿಲು
/newsfirstlive-kannada/media/post_attachments/wp-content/uploads/2024/04/RCB-30.jpg)
ಆರ್​​​ಸಿಬಿ ಬೌಲರ್​​ಗಳು ಕಳಪೆ ಪರ್ಫಾಮೆನ್ಸ್​ ಈ ಸೀಸನ್​ನಲ್ಲಿ ಸರಿದಾರಿಗೆ ಬರೋ ಯಾವುದೇ ಲಕ್ಷಣಗಳೂ ಕಾಣ್ತಿಲ್ಲ. ಚಿನ್ನಸ್ವಾಮಿ ಅಂಗಳಲ್ಲಿ ನಡೆಯೋ ಇಂದಿನ ಪಂದ್ಯಕ್ಕೂ ಮುನ್ನವೂ ಬೌಲಿಂಗ್​ ವಿಭಾಗವೇ ಟೆನ್ಶನ್​ ಹೆಚ್ಚಿಸಿದೆ. ಆದ್ರೂ, ಫ್ಯಾನ್ಸ್​ ಇಂದಿನ ಪಂದ್ಯದಲ್ಲಿ ಆರ್​​ಸಿಬಿ ಗೆಲ್ಲೋದು ಪಕ್ಕಾ ಅನ್ನೋ ವಿಶ್ವಾಸದಲ್ಲಿದ್ದಾರೆ. ವಿರಾಟ್​ ಕೊಹ್ಲಿ, ವಿಲ್​ ಜಾಕ್ಸ್​, ರಜತ್​​ ಪಟಿದಾರ್​ ಆ ಆತ್ಮವಿಶ್ವಾಸದ ಹಿಂದಿನ ಸೀಕ್ರೆಟ್. ಈ ತ್ರಿಮೂರ್ತಿಗಳು ನಿರೀಕ್ಷೆಯಂತೆ ಅಬ್ಬರದ ಪರ್ಫಾಮೆನ್ಸ್​ ನೀಡಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು ಆರೋಪ.. ಈ ಸಾವು ನ್ಯಾಯವೇ..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us