/newsfirstlive-kannada/media/post_attachments/wp-content/uploads/2024/05/KL-Rahul-next-captain.jpg)
ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆದ ಕೆ.ಎಲ್ ರಾಹುಲ್ ಅವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿದೆ. ಸದ್ಯ ನಡೆಯುತ್ತಿರೋ ಹರಾಜಿನಲ್ಲಿ ಕೆ.ಎಲ್ ರಾಹುಲ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ರಾಹುಲ್ ಅವರನ್ನು 14 ಕೋಟಿ ನೀಡಿ ಖರೀದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ 2025ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು ಎಂಬುದು ಆರ್ಸಿಬಿ ಪ್ಲಾನ್. ಅದರಲ್ಲೂ ರಾಹುಲ್ ಖರೀದಿ ಮಾಡಲೇಬೇಕು ಎಂಬುದು ಆರ್ಸಿಬಿ ಸ್ಟ್ರಾಟರ್ಜಿ ಆಗಿತ್ತು. ಆದರೆ, 14 ಕೋಟಿಗೆ ರಾಹುಲ್ ಅವರನ್ನು ಬಿಟ್ಟುಕೊಟ್ಟು ಆರ್ಸಿಬಿ ಬಿಗ್ ಶಾಕ್ ನೀಡಿದೆ.
ಆರ್ಸಿಬಿ ಸೇರೋ ಆಸೆ ವ್ಯಕ್ತಪಡಿಸಿದ್ದ ರಾಹುಲ್
ಆರ್ಸಿಬಿ ಬೆಂಗಳೂರು ಫ್ರಾಂಚೈಸಿ. ನಾನು ಬೆಂಗಳೂರು ಹುಡುಗ. ಎಲ್ಲರೂ ನನ್ನ ಲೋಕಲ್ ಬಾಯ್ ಎಂದು ಕರೆಯುತ್ತಾರೆ. 2016 ರಲ್ಲಿ ಆರ್ಸಿಬಿ ಪರ ಆಡಿದ್ದು, ಬಹಳ ಖುಷಿ ತಂದಿತ್ತು. ಮತ್ತೆ ಆರ್ಸಿಬಿ ಸೇರೋ ಆಸೆ ಇದೆ. ಆದರೆ, ಆಕ್ಷನ್ನಲ್ಲಿ ಏನಾಗುತ್ತೋ ಕಾದು ನೋಡಬೇಕು ಎಂದಿದ್ದರು. ಈಗ ಡೆಲ್ಲಿ ತಂಡ ಸೇರಿದ್ದಾರೆ ರಾಹುಲ್.
ರಾಹುಲ್ ಐಪಿಎಲ್ ಸಾಧನೆ
ಕರ್ನಾಟಕದ ಸ್ಟಾರ್ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಇದುವರೆಗೆ 132 ಪಂದ್ಯಗಳನ್ನು ಆಡಿದ್ದಾರೆ. 45.47 ಸರಾಸರಿ ಮತ್ತು 134.61 ಸ್ಟ್ರೈಕ್ ರೇಟ್‌ನಲ್ಲಿ 4683 ರನ್ ಗಳಿಸಿದ್ದಾರೆ. ಇದೇ ವೇಳೆ ರಾಹುಲ್ ನಾಲ್ಕು ಶತಕ ಸಿಡಿಸಿದ್ದು, 37ಕ್ಕೂ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಗುಜರಾತ್ ತಂಡ ಸೇರಿದ ಮೊಹಮ್ಮದ್ ಸಿರಾಜ್; ಅಬ್ಬಬ್ಬಾ! ಎಷ್ಟು ಕೋಟಿಗೆ ಸೇಲಾದ್ರು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ