ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ RCB ಎಷ್ಟೋ ವರ್ಷಗಳಿಂದ ಗೆದ್ದಿಲ್ಲ.. ಆ ದಾಖಲೆಗೆ ಬ್ರೇಕ್ ಬೀಳುತ್ತಾ?

author-image
Bheemappa
Updated On
ಪ್ಲೇ ಆಫ್​ ಅಲ್ಲವೇ ಅಲ್ಲ, RCB ಟಾರ್ಗೆಟ್ ‘ಮಿಷನ್ ಟಾಪ್​- 2’.. ಇದು ಫೈನಲ್ ಲೆಕ್ಕಾಚಾರ!
Advertisment
  • 17 ವರ್ಷಗಳ ಬಳಿಕ ತವರಿನಲ್ಲಿ ಚೆನ್ನೈ ಅನ್ನು ಸೋಲಿಸಿದ್ದ RCB
  • ಎಬಿ ಡಿವಿಲಿಯರ್ಸ್ ತಂಡದಲ್ಲಿದ್ದಾಗ ಆರ್​ಸಿಬಿ ಮ್ಯಾಚ್ ಗೆದ್ದಿತ್ತಾ?
  • ವಾಂಖೆಡೆಯಲ್ಲಿ ಎಷ್ಟು ವರ್ಷಗಳಿಂದ ಬೆಂಗಳೂರು ಸೋಲುತ್ತಿದೆ?

ಮುಂಬೈ ಇಂಡಿಯನ್ಸ್​ ವಿರುದ್ಧ ಐಪಿಎಲ್ ಪಂದ್ಯ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದೊಂದು ಕೊರಗನ್ನು ಇಂದು ನೀಗಿಸಬೇಕಿದೆ. ಕಳೆದ 10 ವರ್ಷಗಳಿಂದ ಬೆಂಗಳೂರು ದೊಡ್ಡ ಭಾರವನ್ನು ಹೊತ್ತುಕೊಂಡು ಮುಂಬೈಗೆ ಹೋಗುತ್ತಿದೆ. ಆದರೆ ಆ ಭಾರ ಆರ್​ಸಿಬಿ ತಂಡದ ಹೆಗಲಿನಿಂದ ಇಳಿಯುತ್ತಿಲ್ಲ. ಸದ್ಯ ಇಂದಿನ ಪಂದ್ಯದಲ್ಲಿ ಅದಕ್ಕೆ ಬ್ರೇಕ್ ಹಾಕಬೇಕಾಗಿದೆ.

ಆರ್​​ಸಿಬಿ ಹಾಗೂ ಮುಂಬೈ ಇಂಡಿಯನ್ಸ್​ ಟೀಮ್ ಯಾವುದೇ ತಂಡವಾಗಲಿ ತಮ್ಮ ತಮ್ಮ ತವರು ಮೈದಾನದಲ್ಲಿ ಹುಲಿಯಂತೆ ಘರ್ಜನೆ ಮಾಡುತ್ತವೆ. ಅದರಂತೆ ಕಳೆದ 10 ವರ್ಷಗಳಿಂದ ಮುಂಬೈ ಇಂಡಿಯನ್ಸ್​, ಆರ್​ಸಿಬಿ ಮೇಲೆ ತನ್ನ ಪ್ರಾಬಲ್ಯ ಸಾಧಿಸುತ್ತ ಬಂದಿದೆ. ಅಂದರೆ ತನ್ನ ತವರಿನ ಪಿಚ್​ ಅಂಧರೆ ವಾಂಖೆಡೆಯಲ್ಲಿ ಆರ್​ಸಿಬಿಯ ಅಟ ಏನು ನಡೆಯದಂತೆ ಮುಂಬೈ ಇಂಡಿಯನ್ಸ್​ ಮಾಡುತ್ತಿದೆ. ಹೀಗಾಗಿ 10 ವರ್ಷಗಳಿಂದ ಆರ್​ಸಿಬಿ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಪಂದ್ಯ ಗೆದ್ದಿಲ್ಲ.

ಇದೊಂದು ಕೊರಗಿಗೆ ರಾಯಲ್ ಚಾಲೆಂಜರ್ಸ್​ ಪ್ಲೇಯರ್ಸ್ ಬ್ರೇಕ್ ಹಾಕಬೇಕಿದೆ. ವಾಂಖೆಡೆಯಲ್ಲಿ ಆರ್​ಸಿಬಿ ಕೊನೆಯದಾಗಿ 2015ರಲ್ಲಿ ಜಯ ಸಾಧಿಸಿತ್ತು. ಅಂದಿನಿಂದ ಇಂದಿನವರೆಗೂ ಮುಂಬೈ ವಿರುದ್ಧ ವಾಂಖೆಯಲ್ಲಿ ಗೆಲುವು ಅನ್ನೋದೇ ಆರ್​ಸಿಬಿ ನೋಡಿಲ್ಲ. 2015ರಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 82 ಹಾಗೂ ಎಬಿ ಡಿವಿಲಿಯರ್ಸ್​ 133 ರನ್​ಗಳಿಂದ ಆರ್​ಸಿಬಿ 235 ರನ್​ಗಳ ಟಾರ್ಗೆಟ್ ಸೆಟ್ ಮಾಡಿತ್ತು. ಆದ್ರೆ ಈ ಟಾರ್ಗೆಟ್​ನಿಂದ ಭಯ ಬಿದ್ದಿದ್ದ ಮುಂಬೈ 39 ರನ್​ಗಳಿಂದ ಸೋಲೋಪ್ಪಿಕೊಂಡಿತ್ತು.

ಇದನ್ನೂ ಓದಿ:ಟಾಸ್ ಗೆದ್ದವನೇ ಬಾಸು.. ಆರ್​ಸಿಬಿ ಪ್ಲೇಯಿಂಗ್-11ನಲ್ಲಿ ಭಾರೀ ಬದಲಾವಣೆ ನಿರೀಕ್ಷೆ..!

publive-image

2015ರ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿ 6 ಪಂದ್ಯಗಳನ್ನು ಆಡಿದ್ದು ಈ 6ರಲ್ಲೂ ಸೋತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. 2016ರಲ್ಲಿ 6 ವಿಕೆಟ್​ನಿಂದ ಸೋತಿತ್ತು. ಇದಾದ ಮೇಲೆ 2017ರಲ್ಲಿ 5 ವಿಕೆಟ್​ನಿಂಧ ಪರಾಭವಗೊಂಡಿತು. 2018ರಲ್ಲಿ 46 ರನ್​ಗಳಿಂದ ಸೋಲೋಪ್ಪಿತು. 2019ರಲ್ಲಿ 5 ವಿಕೆಟ್​ನಿಂದ ತಲೆ ಬಾಗಿತು.

2023ರಲ್ಲಿ 6 ವಿಕೆಟ್ ಹಾಗೂ 2024ರಲ್ಲಿ 7 ವಿಕೆಟ್​ನಿಂದ ಮುಂಬೈ ವಿರುದ್ಧ ಬೆಂಗಳೂರು ಸೋತಿದೆ. ಇಂತಹ ಕೆಟ್ಟ ದಾಖಲೆಗೆ ಆರ್​ಸಿಬಿ ಈಗ ಬ್ರೇಕ್ ಹಾಕಬೇಕಿದೆ. ಇದೇ ಸೀಸನ್​ನಲ್ಲಿ ಆರ್​ಸಿಬಿ 2ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ತಂಡವನ್ನು ಅವರ ನೆಲದಲ್ಲಿಯೇ 17 ವರ್ಷಗಳ ಬಳಿಕ ಸೋಲಿಸಿ ಸಂಭ್ರಮಿಸಿತು. ಇಂತಹ ಕ್ಷಣ ಮುಂಬೈ ವಿರುದ್ಧವೂ ನಡೆಯಬಹುದು ಎಂದು ನಿರೀಕ್ಷಣೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment