ಬೆಂಗಳೂರು ತಂಡದ ಹೊಸ ಫಿನಿಶರ್​ ಯಾರು? ಈ ಸ್ಟಾರ್​ ಪ್ಲೇಯರ್​ ಖರೀದಿಗೆ RCB ಮಾಸ್ಟರ್​​ ಪ್ಲಾನ್​​!

author-image
Ganesh Nachikethu
Updated On
ಗಿಲ್​ ಪಡೆಗೂ ಇದು ಡು ಆರ್​​ ಡೈ ಪಂದ್ಯ.. ಗೆಲುವಿನ ಉತ್ಸಾಹದಲ್ಲಿರೋ RCB ಮುಂದಿದೆ ಬಿಗ್​ ಚಾಲೆಂಜ್
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಆರ್​​ಸಿಬಿ ಭರ್ಜರಿ ತಯಾರಿ
  • ವರ್ಷದ ಕೊನೆಗೆ ನಡೆಯಲಿರೋ ಬಹುನಿರೀಕ್ಷಿತ ಮೆಗಾ ಐಪಿಎಲ್​ ಹರಾಜು
  • ಹರಾಜಿನಲ್ಲಿ ವಿಕೆಟ್​ ಕೀಪರ್​​ ಸ್ಟಾರ್​ ಫಿನಿಶರ್​ಗಾಗಿ ಆರ್​​ಸಿಬಿ ಹುಡುಕಾಟ!

ಕಳೆದ ಮೂರು ವರ್ಷಗಳಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಫಿನಿಶರ್​ ಆಗಿದ್ದವರು ದಿನೇಶ್​ ಕಾರ್ತಿಕ್​​. ದಿನೇಶ್​ ಕಾರ್ತಿಕ್​ ಅವರು 2025ರ ಐಪಿಎಲ್​ ಸೀಸನ್​ಗೂ ಮುನ್ನ ಆರ್​​ಸಿಬಿ ತಂಡದ ಮೆಂಟರ್​ ಮತ್ತು ಬ್ಯಾಟಿಂಗ್​ ಕೋಚ್​ ಆಗಿ ನೇಮಕವಾಗಿದ್ದಾರೆ. ಹಾಗಾಗಿ ಆರ್​​ಸಿಬಿ ತಂಡಕ್ಕೆ ಫಿನಿಶರ್​ ಬೇಕಿದೆ.

ಆರ್​​ಸಿಬಿ ತಂಡವು ಮುಂದಿನ ಸೀಸನ್​ಗೆ ಹೊಸ ಫಿನಿಶರ್​ಗಾಗಿ ಹುಡುಕಾಟದಲ್ಲಿದೆ. ವಿಕೆಟ್​ ಕೀಪಿಂಗ್​ ಜತೆಗೆ ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ ಫಿನಿಶ್​ ಮಾಡಬೇಕಿರೋ ಆಟಗಾರ ಆರ್​ಸಿಬಿಗೆ ಬೇಕಾಗಿದೆ. ಹಾಗಾಗಿ ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಸ್ಪೋಟಕ ಬ್ಯಾಟರ್‌ ರಿಷಭ್‌ ಪಂತ್‌ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಪಂತ್​​ ಆರ್​​ಸಿಬಿಗೆ ಬಂದರೆ ಮೂರು ಸ್ಲಾಟ್​ಗಳು ಫಿಲ್​ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್​ ಪ್ಲಾನ್​​.

publive-image

ಪಂತ್​ಗೆ ಮಣೆ ಹಾಕಲಿರೋ ಆರ್​ಸಿಬಿ!

ಈ ವರ್ಷದ ಕೊನೆಗೆ 2025ರ ಐಪಿಎಲ್​ ಮೆಗಾ ಹರಾಜು ನಡೆಯಲಿದೆ. ದಿನೇಶ್​ ಕಾರ್ತಿಕ್​ ಇಲ್ಲದ ಕಾರಣ ಹರಾಜಿನಲ್ಲಿ ಆರ್​​ಸಿಬಿ ಅನುಭವಿ ಮಿಡಲ್​ ಆರ್ಡರ್​ ವಿಕೆಟ್​ ಕೀಪರ್​ ಬ್ಯಾಟರ್​ಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ಬಿಟ್ಟರೆ, ಆರ್​​ಸಿಬಿಗೆ ಬರಬಹುದು. ಇದರಿಂದ ಆರ್‌ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್‌ ವರ್ಕ್‌ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ.

ಪಂತ್​ ಒಳ್ಳೆ ಕ್ಯಾಪ್ಟನ್​​. ಆರ್‌ಸಿಬಿ ಬಲಿಷ್ಠ ತಂಡ ಕಟ್ಟೋ ಉದ್ದೇಶದಿಂದ ಯುವ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಪಂತ್​​ ಸಿಕ್ಕರೆ ಆರ್​​ಸಿಬಿ ಹಣದ ಹೊಳೆಯನ್ನೇ ಹರಿಸಬಹುದು. ಅಲ್ಲದೆ ಇವರು ವಿಕೆಟ್‌ ಕೀಪಿಂಗ್ ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಆರ್‌ಸಿಬಿ ಒಂದೇ ಕಲ್ಲಿಗೆ ಮೂರು ಸ್ಲಾಟ್‌ಗಳನ್ನು ಫಿಲ್‌ ಮಾಡಿಕೊಳ್ಳು ಪ್ಲ್ಯಾನ್‌ ಮಾಡಿಕೊಂಡಿದೆ.

ಇದನ್ನೂ ಓದಿ: VIDEO: RCB ಫ್ಯಾನ್ಸ್​​ಗೆ ಗುಡ್​ನ್ಯೂಸ್​ ಕೊಟ್ಟ ಕೊಹ್ಲಿ, KL​ ರಾಹುಲ್​​.. ನೀವು ನೋಡಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment