RCBಗೆ ಮತ್ತೆ ಕೈಕೊಟ್ಟ ವಿಸ್ಫೋಟಕ ಬ್ಯಾಟರ್.. ಸಾಲ್ಟ್​ ವಿರುದ್ಧ ಭಾರೀ ಆಕ್ರೋಶ​!

author-image
Bheemappa
Updated On
RCBಗೆ ಮತ್ತೆ ಕೈಕೊಟ್ಟ ವಿಸ್ಫೋಟಕ ಬ್ಯಾಟರ್.. ಸಾಲ್ಟ್​ ವಿರುದ್ಧ ಭಾರೀ ಆಕ್ರೋಶ​!
Advertisment
  • ಆರಂಭದಲ್ಲೇ ಆಘಾತಕ್ಕೆ ಒಳಗಾದ ರಾಯಲ್ ಚಾಲೆಂಜರ್ಸ್​
  • ಆರ್​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ ಮ್ಯಾಚ್
  • ಪಂದ್ಯದಲ್ಲಿ ಫಿಲಿಪ್ ಸಾಲ್ಟ್ ಔಟ್ ಆಗಿರುವುದು ಹೇಗೆ ಗೊತ್ತಾ?

ಪಂಜಾಬ್​​ ತಂಡ ನೀಡಿದ 158 ರನ್​ಗಳ ಸಾಧಾರಣ ಮೊತ್ತ ಬೆನ್ನಟ್ಟಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಆರಂಭದಲ್ಲೇ ಆಘಾತಕ್ಕೆ ಒಳಗಾಗಿದೆ. ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ್ದ ವಿಸ್ಫೋಟಕ ಬ್ಯಾಟರ್​ ಸಾಲ್ಟ್ ಔಟ್ ಆಗಿದ್ದಾರೆ.

ಚಂಡೀಗಢದ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಪಂಜಾಬ್​ ಕಿಂಗ್ಸ್​ 158 ರನ್​ಗಳ ಗುರಿಯನ್ನು ಆರ್​ಸಿಬಿಗೆ ನೀಡಿದೆ. ಈ ಗುರಿಯನ್ನು ಚೇಸ್ ಮಾಡಲು ಮೈದಾನಕ್ಕೆ ಬಂದ ಆರ್​ಸಿಬಿಯ ಓಪನರ್ಸ್ ಆರಂಭದಲ್ಲೇ ಆತಂಕಕ್ಕೆ ಒಳಗಾದರು. ಮೈದಾನಕ್ಕೆ ಬಂದ ಫಿಲಿಪ್ ಸಾಲ್ಟ್​ ಹೀಗೆ ಬಂದು ಹಾಗೇ ಪೆವಿಲಿಯನ್​ಗೆ ಹೆಜ್ಜೆ ಹಾಕಿದರು.

ಇದನ್ನೂ ಓದಿ:ಆರ್​ಸಿಬಿ ಮುಂದೆ ಸಾಧಾರಣ ಟಾರ್ಗೆಟ್​.. ಪಂಜಾಬ್​ ಕಿಂಗ್ಸ್​ಗೆ ಸೇಡಿನ ಡಿಚ್ಚಿ ಗ್ಯಾರಂಟಿ!

publive-image

ಕಳೆದ ಪಂದ್ಯದಲ್ಲಿ ಮುಗ್ಗರಿಸಿದ್ದ ಫಿಲಿಪ್ ಸಾಲ್ಟ್ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಫ್ಯಾನ್ಸ್​ ಭಾವಿಸಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಡಿರುವ ಸಾಲ್ಟ್​ ಕೇವಲ ಒಂದೇ 1 ರನ್​ಗೆ ವಿಕೆಟ್​ ಒಪ್ಪಿಸಿ ಬೇಸರದಿಂದಲೇ ಪೆವಿಲಿಯನ್​ಗೆ ನಡೆದಿದ್ದಾರೆ. ಆರ್ಷ್​ದೀಪ್ ಹಾಕಿದ ತಂಡದ ಮೊದಲ ಓವರ್​ನ ಕೊನೆ ಎಸೆತದಲ್ಲಿ ಫಿಲ್ ಸಾಲ್ಟ್​ ಜೋಶ್ ಇಂಗ್ಲಿಸ್​ಗೆ ಕ್ಯಾಚ್ ಕೊಟ್ಟರು. ಇದು ಆರ್​ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಶೆ ಮೂಡಿಸಿತು.

ಆರ್​ಸಿಬಿ 158 ರನ್​ಗಳ ಚೇಸ್ ಮಾಡಿ ಗೆಲುವು ಪಡೆಯಬೇಕಿದೆ. ಈಗಾಗಲೇ ಪಂಜಾಬ್ ವಿರುದ್ಧ ಆಡಿರುವ ಮೊದಲ ಪಂದ್ಯದಲ್ಲಿ ಆರ್​ಸಿಬಿ ಹೀನಾಯ ಸೋಲು ಕಂಡಿದೆ. ಹೀಗಾಗಿ ಈ ಪಂದ್ಯ ಆರ್​ಸಿಬಿಗೆ ಪ್ರತಿಷ್ಠೆ ಎಂದು ಹೇಳಬಹುದು. ತವರಿನಲ್ಲಿ ಮುಗ್ಗರಿಸಿರುವ ಆರ್​ಸಿಬಿ ಈಗ ಅವರ ಪಿಚ್​ಗೆ ಹೋಗಿ ಪಂದ್ಯವನ್ನು ಗೆದ್ದುಕೊಂಡು ಬರಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment