ಗ್ರೇಟ್​ ಫಿನಿಶರ್ ಅಶುತೋಷ್ ಶರ್ಮಾರನ್ನ ಮಿಸ್ ಮಾಡಿಕೊಂಡ RCB.. ಹೇಗೆ ಗೊತ್ತಾ?

author-image
Bheemappa
Updated On
ಕನಸು ಹೊತ್ತು ಇಂದೋರ್​​ಗೆ ಬಂದಾಗ ತಿನ್ನೋದ್ಕೂ ದುಡ್ಡು ಇರಲಿಲ್ಲ; ತುತ್ತು ಅನ್ನಕ್ಕಾಗಿ ಪರದಾಡಿದ್ದ ಈತ
Advertisment
  • ಅಶುತೋಷ್ ಅವರಿಗೆ ಎಷ್ಟು ಹಣ ಕೊಟ್ಟು ಡೆಲ್ಲಿ ಖರೀದಿಸಿದೆ?
  • ಹರಾಜಿಗೆ ಬಿಟ್ಟು ಮತ್ತೆ ಖರೀದಿ ಮಾಡಲು ಬಂದಿದ್ದ ಪಂಜಾಬ್​
  • RCB ಪಾಲಾಗುತ್ತಿದ್ದ ಅಶುತೋಷ್ ಶರ್ಮಾ ಮಿಸ್ ಆಗಿದ್ದೇಗೆ?

ಈ ಬಾರಿಯ ಐಪಿಎಲ್ ಮೆಗಾ ಆಕ್ಷನ್​ನಲ್ಲಿ ಗ್ರೇಟ್​ ಫಿನಿಶರ್ ಅಶುತೋಷ್ ಶರ್ಮಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಕೊಂಚದರಲ್ಲೇ ಮಿಸ್ ಮಾಡಿಕೊಂಡಿದೆ. ಲಕ್ನೋ ವಿರುದ್ಧ ಮಿಂಚಿನ ಬ್ಯಾಟಿಂಗ್ ಮಾಡಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ನಂತರ ಬಿಡ್ಡಿಂಗ್ ಸಮಯದಲ್ಲಿ ಏನೇನು ಆಗಿದೆ ಎನ್ನುವುದು ಇದೀಗ ಹೊರ ಬಿದ್ದಿದೆ.

ಅಶುತೋಷ್ ಶರ್ಮಾ 2024ರ ಟೂರ್ನಿಯಲ್ಲೇ ಪಂಜಾಬ್​ ತಂಡದಲ್ಲಿ ಇರುವಾಗಲೇ ಗ್ರೇಟ್​ ಫಿನಿಶರ್ ಎನ್ನುವುದನ್ನ ಸಾಬೀತು ಮಾಡಿದ್ದರು. ಆದ್ರೆ ಪಂಜಾಬ್ ಅವರನ್ನು ತಂಡದಿಂದ ಹೊರ ನೂಕಿತ್ತು. ಹೀಗಾಗಿ ಮೆಗಾ ಹರಾಜಿನಲ್ಲಿ ಅಶುತೋಷ್ ಶರ್ಮಾ ಹೆಸರು ಕೇಳಿ ಬಂದಿತ್ತು. ಮೊದ ಮೊದಲು ಅಶುತೋಷ್ ಶರ್ಮಾ ಅವರ ಖರೀದಿಗೆ ಯಾರೂ ಮುಂದೆ ಬರಲಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ:ಧೋನಿಯಂತೆ ಧೈರ್ಯ ಮೆಚ್ಚಲೇಬೇಕು.. ರಿಷಭ್ ಪಂತ್ ಸಮರ್ಥಿಸಿಕೊಂಡ ಮಾಜಿ ಪ್ಲೇಯರ್, ಏನ್ ಹೇಳಿದ್ರು?

publive-image

ಆದ್ರೆ ಅಶುತೋಷ್ ಶರ್ಮಾ ಖರೀದಿಗೆ ಮೊದಲು ಹೆಸರು ಕೂಗಿದ್ದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್​​ಸಿಬಿ ಖರೀದಿಗೆ ಮುಂದಾಗುತ್ತಿದ್ದಂತೆ ಈ ವೇಳೆ ಬಿಡ್​ನಲ್ಲಿ ರಾಜಸ್ಥಾನ್ ಕೂಡ ಪೈಪೋಟಿಗೆ ಇಳಿಯಿತು. ಇದರಲ್ಲಿ ಹಿಂದೆ ಬಿದ್ದ ಆರ್​ಸಿಬಿ ಬಿಡ್​ನಿಂದ ಹಿಂದೆ ಸರಿಯಿತು. ಇದರ ಲಾಭ ಪಡೆದ ಪಂಜಾಬ್ ಮತ್ತು ಡೆಲ್ಲಿ ಪ್ರವೇಶ ಮಾಡಿ ಈ ನಡುವೆ ಬಿಡ್​ನ ವಾರ್ ನಡೆಯಿತು.

ಈ ಹರಾಜಿನ 4 ಹಂತದಲ್ಲಿ ಪಂಜಾಬ್​ಗೆ ಟಕ್ಕರ್ ಕೊಟ್ಟು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ಕೇವಲ 3.8 ಕೋಟಿ ಹಣಕ್ಕೆ ಅಶುತೋಷ್ ಶರ್ಮಾ ಅವರನ್ನು ಖರೀದಿ ಮಾಡಿತು. ಒಂದು ವೇಳೆ ಅಂದಿನ ಹರಾಜಿನಲ್ಲಿ ಡೆಲ್ಲಿ ವಿರುದ್ಧ ಇನ್ನಷ್ಟು ಕೂಗಿದ್ದರೇ ಇಂದು ಆರ್​ಸಿಬಿ ಪರವಾಗಿ ಗ್ರೇಟ್​ ಫಿನಿಶರ್ ಅಶುತೋಷ್ ಶರ್ಮಾ ಇರುತ್ತಿದ್ದರು. ತಂಡಕ್ಕೆ ಹೆಚ್ಚಿನ ಶಕ್ತಿ, ಜೊತೆಗೆ ಗೆಲ್ಲಿಸಿಕೊಂಡು ಬರುವ ಫಿನಿಶರ್ ಇದ್ದಾನೆ ಎನ್ನುವ ಧೈರ್ಯ ಆರ್​ಸಿಬಿಗೆ ಇರುತ್ತಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment