/newsfirstlive-kannada/media/post_attachments/wp-content/uploads/2025/06/RCB-33.jpg)
ಕೇವಲ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಮಾತ್ರ 11 ಅಭಿಮಾನಿಗಳು ದುರಂತ ಅಂತ್ಯ ಕಂಡಿಲ್ಲ. ಇದರ ಹಿಂದೆ ಆರ್​ಸಿಬಿ ಮ್ಯಾನೇಜ್​ಮೆಂಟ್ ಮತ್ತು ಕೆಎಸ್​ಸಿಎ ಯಡವಟ್ಟುಗಳು ಕೂಡ ಪ್ರಮಾದಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡಿವೆ. ಈ ಬೆನ್ನಲ್ಲೇ ಆರ್​ಸಿಬಿ, ಡಿಎನ್​ಎ ಹಾಗೂ ಕೆಎಸ್​ಸಿಎ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಆರ್​ಸಿಬಿ ಕಪ್ ಗೆದ್ದ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತಕ್ಕೆ ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲದೇ ಇನ್ನೂ ಹಲವು ಕಾರಣಗಳಿವೆ. ಇದರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಿರ್ಲಕ್ಷ್ಯವೂ ಕಾರಣವಾಗಿದೆ.
ಇದನ್ನೂ ಓದಿ: ಆರ್​ಸಿಬಿಗೆ ಸಂಕಷ್ಟಗಳು ಹೆಚ್ಚಾಗಲಿವೆ.. ಹೈಕೋರ್ಟ್ ಕಟಕಟೆಯಲ್ಲಿ ಇಂದು ಏನಾಯ್ತು..?
RCB ಮ್ಯಾನೇಜ್‌ಮೆಂಟ್ ನಿರ್ಲಕ್ಷ್ಯಗಳೇನು?
- ಆರ್​ಸಿಬಿ ಅಭಿಮಾನಿಗಳಿಗೆ ಸರಿಯಾದ ಮಾಹಿತಿ ನೀಡದಿರುವುದು
- ಟಿಕೆಟ್ ಹಂಚಿಕೆ ಹೇಗೆ ಎಂಬ ಬಗ್ಗೆ ಕೊನೆ ಹಂತದಲ್ಲಿ ಮಾಹಿತಿ
- ವೆಬ್​ಸೈಟ್ ಮೂಲಕ ಟಿಕೆಟ್ ಪಡೆಯಲು ಹೇಳಿದ್ದ ಆರ್​ಸಿಬಿ
- ವೆಬ್​ಸೈಟ್ ಆರಂಭಗೊಂಡ 15 ನಿಮಿಷದಲ್ಲೇ ಕ್ಲೋಸ್
- ಟಿಕೆಟ್ ಸಿಗದೆ ಕ್ರೀಡಾಂಗಣದತ್ತ ನುಗ್ಗಿ ಬಂದ ಅಭಿಮಾನಿಗಳು
- ಎರಡು ಹಂತದಲ್ಲಿ ಮಾಹಿತಿ ನೀಡಿದ ಆರ್​ಸಿಬಿ ಎಕ್ಸ್​ ಖಾತೆ
- ವಿಕ್ಟರ್ ಪರೇಡ್ ಇಲ್ಲ ಎಂದ್ರೂ ಆರ್​ಸಿಬಿ ಖಾತೆಯಲ್ಲಿ ಪೋಸ್ಟ್​
- ಸಂಜೆ 5-6 ಗಂಟೆಗೆ ವಿಕ್ಟರಿ ಪರೇಡ್ ಇರುವುದಾಗಿ ಆರ್​ಸಿಬಿ ಪೋಸ್ಟ್​
ಇದನ್ನೂ ಓದಿ: ಕೊನೆಗೂ FIR ದಾಖಲಿಸಿದ ಪೊಲೀಸರು.. ಮೂವರ ವಿರುದ್ಧ ಕೇಸ್​..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ