/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಆರಂಭಕ್ಕೆ ಇನ್ನೇನು ಕೇವಲ ಒಂದೂವರೆ ತಿಂಗಳು ಬಾಕಿ ಇದೆ. ಈ ಮೆಗಾ ಟೂರ್ನಿಗೆ ಎಲ್ಲಾ ಐಪಿಎಲ್​ ತಂಡಗಳು ಭರದಿಂದ ಸಿದ್ಧತೆಗಳು ನಡೆಸಿಕೊಂಡಿವೆ. ಈಗಾಗಲೇ ಹಲವು ಐಪಿಎಲ್​​ ತಂಡಗಳು ಮುಂದಿನ ಸೀಸನ್​ಗೆ ಕ್ಯಾಪ್ಟನ್​ ಯಾರು? ಎಂದು ಘೋಷಿಸಿವೆ. ಆದರೆ, ಇದುವರೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮಾತ್ರ ತನ್ನ ನಾಯಕನನ್ನು ಘೋಷಣೆ ಮಾಡಿಲ್ಲ. ಹಾಗಾಗಿ ಮುಂದಿನ ಕ್ಯಾಪ್ಟನ್​​ ಯಾರು? ಅನ್ನೋ ಬಗ್ಗೆ ಚರ್ಚೆ ಜೋರಾಗಿದೆ.
ಕಳೆದ 17 ಸೀಸನ್​​ಗಳಿಂದಲೂ ಒಮ್ಮೆಯೂ ಆರ್​​ಸಿಬಿ ಕಪ್​ ಗೆದ್ದಿಲ್ಲ. ಈ ಬಾರಿ ಹೇಗಾದ್ರೂ ಮಾಡಿ 18ನೇ ಸೀಸನ್​​ನ ಚಾಂಪಿಯನ್ ಆಗಬೇಕು ಎಂದು ಆರ್​​​ಸಿಬಿ ಮುಂದಾಗಿದೆ. ಈ ಹೊತ್ತಲ್ಲೇ ಮುಂದಿನ ಕ್ಯಾಪ್ಟನ್​ ಯಾರು? ಅನ್ನೋದರ ಬಗ್ಗೆ ಆರ್​​ಸಿಬಿ ಸಿಒಒ ರಾಜೇಶ್ ಮೆನನ್​​ ಮಾತಾಡಿದ್ದಾರೆ.
ಏನಂದ್ರು ರಾಜೇಶ್​​ ಮೆನನ್​​?
ಮುಂದಿನ ಸೀಸನ್​ಗೆ ಆರ್​​ಸಿಬಿ ಕ್ಯಾಪ್ಟನ್​​​ ಯಾರು ಎಂಬ ಚರ್ಚೆ ನಡೆಯುತ್ತಿದೆ. ತಂಡದಲ್ಲಿ ಇನ್ನೂ ಇದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಮ್ಮ ತಂಡದಲ್ಲಿ ನಾಯಕತ್ವದ ಗುಣಗಳು ಹೊಂದಿರೋ ಸಾಕಷ್ಟು ನಾಯಕರು ಇದ್ದಾರೆ. ಯಾರನ್ನು ನಾಯಕರನ್ನಾಗಿ ಮಾಡಬೇಕು ಎಂಬ ಬಗ್ಗೆ ನಿರ್ಣಯವಾಗಿಲ್ಲ ಎಂದರು.
ಆರ್‌ಸಿಬಿ ತಂಡದಲ್ಲಿ ಹಲವು ಸ್ಥಾನಗಳು ಖಾಲಿ ಇವೆ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ಯಾವ ರೀತಿಯ ಬೌಲರ್​​ಗಳು ಇರಬೇಕು ಎಂದು ಚರ್ಚೆ ನಡೆಸಿದ್ದೇವೆ. ಅಗತ್ಯದ ಆಧಾರದ ಮೇರೆಗೆ ಸ್ಟಾರ್​ ಆಟಗಾರರಿಗೆ ಮಣೆ ಹಾಕುತ್ತೇವೆ. ನಮ್ಮ ಪ್ಲಾನ್​ ಪ್ರಕಾರ ಮೆಗಾ ಹರಾಜಿನಲ್ಲಿ ಆಟಗಾರರನ್ನು ಖರೀದಿ ಮಾಡಿದ್ದೇವೆ ಎಂದರು.
ಇನ್ನು ಈ ಬಾರಿ ಕೊಹ್ಲಿ ಆರ್‌ಸಿಬಿ ನಾಯಕತ್ವ ವಹಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರು ಆರ್‌ಸಿಬಿ ತಂಡವನ್ನು ದಶಕಗಳ ಕಾಲ ಲೀಡ್​ ಮಾಡಿದ್ದಾರೆ. ಈಗಾಗಲೇ ಆರ್‌ಸಿಬಿ ತಂಡವನ್ನು 143 ಪಂದ್ಯಗಳಲ್ಲಿ ಲೀಡ್​ ಮಾಡಿದ್ದು, 48.56 ಗೆಲುವಿನ ಸರಾಸರಿ ಹೊಂದಿದ್ದಾರೆ.
ಇದನ್ನೂ ಓದಿ:ಟೀಮ್​ ಇಂಡಿಯಾದಿಂದಲೇ ಹೊರಬಿದ್ದ ಸ್ಟಾರ್​ ವೇಗಿ ಬುಮ್ರಾ; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us